ತಿಂಗಳು ಪೂರ್ಣಗೊಳಿಸಿದ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ

ಅಧಿಕಾರ ವರ್ಗ-ಜಲ ತಜ್ಞರು, ಓದುಗರಿಂದ ಅಭಿಯಾನಕ್ಕೆ ಮೆಚ್ಚುಗೆ

Team Udayavani, Jul 10, 2019, 5:00 AM IST

s-33

ಮಹಾನಗರ: ಮನೆ-ಮನಗಳಲ್ಲಿಯೂ ಜಲ ಜಾಗೃತಿ ಮೂಡಬೇಕು ಮತ್ತು ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಎದುರಾಗದಂತೆ ಜನ ಈಗಿಂದಲೇ ಎಚ್ಚರ ವಹಿಸಬೇಕು ಎಂಬ ಆಶಯದೊಂದಿಗೆ ‘ಉದಯವಾಣಿ’ ಹಮ್ಮಿಕೊಂಡಿರುವ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಇದೀಗ ನಿರೀಕ್ಷೆಗೂ ಮೀರಿದ ಸ್ಪಂದನೆಯೊಂದಿಗೆ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಜೂನ್‌ 8ರಂದು ಉದಯವಾಣಿಯ ‘ಸುದಿನ’ದಲ್ಲಿ ‘ಮನೆ ಮನೆಗೆ ಮಳೆಕೊಯ್ಲು’ ಎಂಬ ಆಶಯದೊಂದಿಗೆ ಜಲ ಸಂರಕ್ಷಣೆ ಹಾಗೂ ಜಲ ಸಾಕ್ಷರತೆಗೆ ಪೂರಕವಾಗಿರುವ ಈ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಪ್ರಾರಂಭದಲ್ಲಿ ಮಳೆಕೊಯ್ಲು, ಅದರಿಂದಾ ಗುವ ಪ್ರಯೋಜನೆ, ಹೇಗೆ ಜನರು ತಮ್ಮ ಮನೆ-ಕಚೇರಿ ಅಥವಾ ಸಮುದಾಯದ ಕಟ್ಟಡಗಳಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಲಾಗಿತ್ತು. ಅನಂತರದಲ್ಲಿ ವರ್ಷಗಳ ಹಿಂದೆಯೇ ಮಳೆಕೊಯ್ಲು ಅಳವಡಿಸಿ ನೀರಿನ ಸಮಸ್ಯೆಗೆ ಸ್ವಯಂ ಪರ್ಯಾಯ ವ್ಯವಸ್ಥೆ ಕಂಡುಕೊಂಡ ಬಗ್ಗೆ ಮಳೆಕೊಯ್ಲು ಯಶೋಗಾಥೆಗಳನ್ನು ಪ್ರಕಟಿಸಲಾಗಿತ್ತು. ಗಮನಾರ್ಹ ಅಂದರೆ, ಒಂದು ತಿಂಗಳಿನಿಂದ ನಿರಂತರವಾಗಿ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಓದುಗರನ್ನು ಮಳೆ ನೀರು ಸಂರಕ್ಷಣೆಯತ್ತ ಪ್ರೇರೇಪಿಸುವುದಕ್ಕೆ ಪ್ರಯತ್ನಿಸಿದ್ದು, ಅದರ ಪರಿಣಾಮವಾಗಿ ಮಂಗಳೂರು ಸಹಿತ ಜಿಲ್ಲೆಯಾದ್ಯಂತ ಹಲವರ ಮನೆಗಳಲ್ಲಿ ಇದೀಗ ಮಳೆಕೊಯ್ಲು ಅಳವಡಿಸಿಕೊಂಡಿರುವುದು ಈ ಅಭಿಯಾನಕ್ಕೆ ಸಂದ ಯಶಸ್ಸು ಎನ್ನಬಹುದು.

ಉತ್ತಮ ಸ್ಪಂದನೆ
ಈ ಅಭಿಯಾನದ ಪ್ರಥಮ ಮಾಹಿತಿಯಾಧಾರಿತ ಲೇಖನವು ಪತ್ರಿಕೆಯಲ್ಲಿ ಪ್ರಕಟವಾದಂದಿನಿಂದಲೇ ಮಂಗಳೂರು ಜನತೆಯ ಮಳೆಕೊಯ್ಲು ಅಳವಡಿಕೆ ಬಗ್ಗೆ ಮಾಹಿತಿ-ಸಲಹೆ ಕೇಳಿ ಸುದಿನದ ವಾಟ್ಸಪ್‌ಗೆ ಪ್ರಶ್ನೆಗಳನ್ನು ಕಳುಹಿಸತೊಡಗಿದ್ದರು. ಅಭಿಯಾನ ಮುಂದುವರಿದಂತೆ ಅನೇಕರು ಕರೆ ಮಾಡಿ ವಿಚಾರಿಸತೊಡಗಿದ್ದರು. ಓದುಗರ ಈ ಆಸಕ್ತಿಯೇ ಮಳೆಕೊಯ್ಲು ಬಗ್ಗೆ ಕಾರ್ಯಾಗಾರ ಏರ್ಪಡಿಸಲು ಉದಯವಾಣಿಗೂ ಬಹುದೊಡ್ಡ ಪ್ರೇರಣೆಯಾಯಿತು. ಆ ಪ್ರಕಾರ, ಜೂ. 19ರಂದು ಮಳೆಕೊಯ್ಲು ತಜ್ಞ ಶ್ರೀಪಡ್ರೆ ಅವರನ್ನು ಕರೆಸಿ ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಜತೆಗೆ ನಿರ್ಮಿತಿ ಕೇಂದ್ರದ ವತಿಯಿಂದ ಪ್ರಾತ್ಯಕ್ಷಿಕೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಸ್ಥಳದಲ್ಲೇ ನೋಂದಣಿ ಮಾಡಿದವರ ಮನೆಗೆ ನಿರ್ಮಿತಿ ಕೇಂದ್ರದ ಸಿಬಂದಿಯು ತೆರಳಿ ಉಚಿತವಾಗಿ ಮಾಹಿತಿ ನೀಡುವ ಕಾರ್ಯ ಕೂಡ ಮೂರು ವಾರಗಳಿಂದ ನಿರಂತರವಾಗಿ ನಡೆಯುತ್ತಿದೆ. ಅನಂತರದಲ್ಲಿ ಉದಯವಾಣಿಯ ಈ ಅಭಿಯಾನವು ಅಕ್ಷರಶಃ ಮನೆ-ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುವುದಕ್ಕೆ ಸಾಕ್ಷಿಯಾಗಿದೆ.

ಉಚಿತ ಪ್ರಾತ್ಯಕ್ಷಿಕೆ
ಇದೀಗ ಅನೇಕರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿ ಅದರ ಚಿತ್ರಗಳನ್ನು ಪತ್ರಿಕೆಗೆ ಕಳುಹಿಸಿ ಖುಷಿ ಹಂಚಿಕೊಂಡಿದ್ದಾರೆ. ಅಭಿಯಾನದಿಂದ ಸ್ಫೂರ್ತಿ, ಮಾಹಿತಿ ಪಡೆದುಕೊಂಡು ಮಳೆಕೊಯ್ಲು ಅಳವಡಿಸಿಕೊಂಡಿರುವವರ ಯಶೋಗಾಥೆಯನ್ನು ಕೂಡ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಮತ್ತಷ್ಟು ಜನರನ್ನು ಉತ್ತೇಜಿಸುವ ಪ್ರಯತ್ನ ಮಾಡಲಾಗುತ್ತಿದೆ.

ಇದೀಗ ಮಂಗಳೂರು ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹೊರತಾಗಿ ದೂರದ ಜಿಲ್ಲೆಗಳಿಂದಲೂ ಮಳೆಕೊಯ್ಲುನ ಅಳವಡಿಕೆ ಬಗ್ಗೆ ಮಾಹಿತಿ ಕೋರಿ ಜನರಿಂದ ಕರೆಗಳು ಬರುತ್ತಿವೆ. ಮತ್ತೂಂದೆಡೆ, ಮಳೆಕೊಯ್ಲಿನ ಬಗ್ಗೆ ಮಾಹಿತಿ ಕೋರುವ ಪ್ರತಿಯೊಬ್ಬರಿಗೂ ನಿರ್ಮಿತಿ ಕೇಂದ್ರದಿಂದ ಉಚಿತವಾಗಿ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ಹಲವರ ಮನೆಗೂ ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ನೇತೃತ್ವದ ತಂಡವು ಭೇಟಿ ನೀಡಿ ಉಚಿತವಾಗಿ ಪ್ರಾತ್ಯಕ್ಷಿಕೆ ನೀಡುತ್ತಿದೆ.

ಶ್ಲಾಘನೀಯ ಬೆಳವಣಿಗೆ
“ಉದಯವಾಣಿ’ ಅಭಿಯಾನದ ಜತೆಗೆ ಜಿಲ್ಲೆಯ ಜನರೂ ಕೈಜೋಡಿಸಿ ಮಳೆಕೊಯ್ಲು ವ್ಯವಸ್ಥೆ ಅಳವಡಿಕೆಗೆ ಮುಂದಾಗು ತ್ತಿರುವುದು ಶ್ಲಾಘನೀಯ. ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ಜನಜಾಗೃತರಾಗಿದ್ದಾರೆ. ಹೀಗಾಗಿ, ಪ್ರತಿಯೊಬ್ಬರು ಈ ಮಳೆಗಾಲದಲ್ಲಿ ಮಳೆಕೊಯ್ಲು ಮಾಡಿಕೊಂಡರೆ ಮುಂದಿನ ಬೇಸಗೆಯಲ್ಲಿ ಖಂಡಿತ ಅದರ ಫಲ ಸಿಗುತ್ತದೆ.  - ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

 ಉದಯವಾಣಿ ಅಭಿಯಾನ ಮುಂದುವರಿಯಲಿ
“ಉದಯವಾಣಿ’ ಮಳೆಕೊಯ್ಲು ಅಭಿಯಾನಕ್ಕೆ ಜನರು ಸ್ಪಂದಿಸುತ್ತಿರುವ ರೀತಿ ಖುಷಿ ತಂದಿದೆ. ಈ ಅಭಿಯಾನದಿಂದಾಗಿ ಜನರಲ್ಲಿ ಉತ್ತಮ ಜಾಗೃತಿ ಮೂಡುತ್ತಿದೆ. ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಉದಯವಾಣಿಯು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ.
 - ಡಾ| ಆರ್‌. ಸೆಲ್ವಮಣಿ, ಜಿಪಂ ಸಿಇಒ

 ರಾಜ್ಯ ಮಟ್ಟಕ್ಕೆ ವಿಸ್ತರಿಸಲಿ
“ಉದಯವಾಣಿ’ ಹಮ್ಮಿಕೊಂಡ ಮಳೆಕೊಯ್ಲು ಅಭಿಯಾನ ಜನಪರ ಅಭಿಯಾನವಾಗಿ ಮುಂದುವರಿ ಯುತ್ತಿದೆ. ಆದರೆ ಜನರಲ್ಲಿ ಇನ್ನೂ ಸಾಕಷ್ಟು ಜಲಸಾಕ್ಷರತೆಯ ಒಲವು ಮೂಡದ ಕಾರಣ ಇದು ಸತತ ಮುಂದುವರಿಯಬೇಕೆಂಬ ಸದಾಶಯ ನನ್ನದು. ಅಭಿಯಾನವನ್ನು ಮಂಗಳೂರಿಗೆ ಸೀಮಿತಗೊಳಿಸದೆ, ರಾಜ್ಯ ಮಟ್ಟಕ್ಕೆ ವಿಸ್ತರಿಸಬೇಕು.
 - ಶ್ರೀಪಡ್ರೆ, ಜಲತಜ್ಞ

 ಪತ್ರಿಕೆಗೆ ಅಭಿನಂದನೆ
ಜನರಲ್ಲಿ ಜಲಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಉದಯವಾಣಿ’ಯು ಮಳೆಕೊಯ್ಲು ಅಭಿಯಾನ ರೂಪಿಸಿರುವುದು ಶ್ಲಾಘನೀಯ. ಪತ್ರಿಕೆಯ ಸಾಮಾಜಿಕ ಕಳಕಳಿಗೆ ನಾನು ಅಭಿನಂದಿಸುತ್ತೇನೆ. ರಾಮಕೃಷ್ಣ ಮಠದಲ್ಲಿಯೂ ದೊಡ್ಡ ಮಟ್ಟದಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿರುವುದರಿಂದ ಬೇಸಗೆಯಲ್ಲಿ ನೀರಿನ ಸಮಸ್ಯೆಯೂ ಬರುವುದಿಲ್ಲ. ಮಠಕ್ಕೆ ಆಗಮಿಸುವ ಮಂದಿಗೆ ಈ ಬಗ್ಗೆ ಸಲಹೆ ನೀಡುತ್ತಲೇ ಇರುತ್ತೇನೆ.
 - ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌ ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು

 ಮನೆಯಲ್ಲಿ ಇಂಗುಗುಂಡಿ ಮಾಡಿದೆ
ಬಾರ್ಕೂರಿನಲ್ಲಿರುವ ನನ್ನ ಮನೆಯಲ್ಲಿ ಪ್ರತಿ ಬೇಸಗೆಯಲ್ಲಿಯೂ ನೀರಿನ ಸಮಸ್ಯೆ ಎದುರಾಗುತ್ತಿತ್ತು. ನೀರಿನ ಸಮಸ್ಯೆಗೆ ಮುಕ್ತಿ ನೀಡುವುದು ಅನಿವಾರ್ಯವೂ ಆಗಿತ್ತು. ಉದಯವಾಣಿಯಲ್ಲಿ “ಮಳೆಕೊಯ್ಲು’ ಬಗ್ಗೆ ಬರುತ್ತಿದ್ದ ಮಾಹಿತಿಗಳನ್ನು ಓದುತ್ತಿದ್ದೆ. ಪತ್ನಿಯ ಸಲಹೆಯೊಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಅಲ್ಲಿ ಸಿಕ್ಕ ಮಾಹಿತಿ ಮತ್ತು ಪತ್ರಿಕೆಯಲ್ಲಿ ಸಿಕ್ಕಿದ ಮಾಹಿತಿಯನುಸಾರ ಮನೆಯ ಎರಡು ಬಾವಿಗಳ ಪಕ್ಕ ಇಂಗುಗುಂಡಿ ರಚಿಸಿದ್ದೇವೆ. ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು ಎಂಬ ವಿಶ್ವಾಸವಿದೆ.
 - ಸುರೇಶ್‌ ಶೆಣೈ,ಉದಯವಾಣಿ ಓದುಗ

 150ಕ್ಕೂ ಅಧಿಕ ಮನೆ ಭೇಟಿ
ಮಳೆಕೊಯ್ಲು ಅಳವಡಿಕೆ ಸಲಹೆಗಾಗಿ ಜನರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ಬರುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಮಂದಿ ಕರೆ ಮಾಡಿ ದ್ದಾರೆ. 150ಕ್ಕೂ ಹೆಚ್ಚು ಮಂದಿಯ ಮನೆಗೆ ಭೇಟಿ ನೀಡಿದ್ದೇವೆ. ಫೋನ್‌ನಲ್ಲೇ ಮಾಹಿತಿ ಕೇಳಿದವರು ಅನೇಕರು. ವಾಟ್ಸಪ್‌ ಮುಖಾಂತ ರವೂ ಚಿತ್ರ ಕಳುಹಿಸಿ ಸಲಹೆ ನೀಡಲಾಗುತ್ತಿದೆ. ನಾವು ಸಲಹೆ ನೀಡಿ ದವರು ಪಕ್ಕದ ಮನೆಗಳಿಗೂ ತಿಳಿಸಿ ಪ್ರೇರೇಪಿಸುವ ಕೆಲ ಸದಲ್ಲಿ ತೊಡಗಿದ್ದಾರೆ. ಈ ಕಾರ್ಯವನ್ನು ಮುಂದುವರಿಸುತ್ತೇವೆ. ಮಾಹಿತಿ ಕಾರ್ಯಾಗಾರ ಏರ್ಪಡಿಸುವ ಮೂಲಕ ಗ್ರಾಮ ಮಟ್ಟಕ್ಕೂ ವಿಸ್ತರಿಸುವ ಚಿಂತನೆಯಿದೆ. ಜಿಲ್ಲೆಯ ಎಲ್ಲ ಶಾಸಕರಿಗೂ ಈ ಬಗ್ಗೆ ತಿಳಿಸಲಾಗುವುದು..
 - ರಾಜೇಂದ್ರ ಕಲ್ನಾವಿ, ಯೋಜನ ನಿರ್ದೇಶಕ, ನಿರ್ಮಿತಿ ಕೇಂದ್ರ, ಮಂಗಳೂರು

ಉತ್ತಮ ಸ್ಪಂದನೆ
ವೆಲೆನ್ಸಿಯಾದ ಸೇಂಟ್‌ ವಿನ್ಸಂಟ್‌ ಫೆರರ್‌ ಚರ್ಚ್‌ ಸೇರಿದಂತೆ ಕೆಲವು ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ದೊಡ್ಡ ಮಟ್ಟದಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿ ಸುವ ಮೂಲಕ ಉದಯ ವಾಣಿಯ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ.  ಈ ಅಭಿಯಾನಕ್ಕೆ ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳಿಂದ, ಸರಕಾರಿ ಅಧಿಕಾರಿ ವರ್ಗದವರು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿರುವುದು ಶ್ಲಾಘನೀಯ.

ನೀವು ಅಭಿಪ್ರಾಯ ಹಂಚಿಕೊಳ್ಳಿ
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಒಂದು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಓದುಗರು ಕೂಡ ಈ ಯಶಸ್ವಿ ಅಭಿಯಾನದ ಕುರಿತಂತೆ ತಮ್ಮ ಅಭಿಪ್ರಾಯ, ಅನಿಸಿಕೆ ಅಥವಾ ಸಲಹೆಗಳನ್ನು ಪತ್ರಿಕೆ ಜತೆಗೆ ಹಂಚಿಕೊಳ್ಳಬಹುದು. ಆ ಮೂಲಕ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವುದಕ್ಕೆ ಉತ್ತೇಜನ ನೀಡಬಹುದು. ಆಸಕ್ತರು ತಮ್ಮ ಹೆಸರು, ಸ್ಥಳದ ಜತೆಗೆ ಸಂಕ್ಷಿಪ್ತ ಬರೆಹಗಳನ್ನು ನಿಮ್ಮ ಫೋಟೋ ಸಹಿತ ನಮಗೆ ಕಳುಹಿಸಬಹುದು. ಸೂಕ್ತ ಅಭಿಪ್ರಾಯ-ಸಲಹೆಗಳನ್ನು ಪ್ರಕಟಿಸಲಾಗುವುದು.
99005670| 00

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.