ವಿದ್ಯುತ್ ಮಾರ್ಗ ಬದಲಾವಣೆಗೆ 9 ಕೋ. ರೂ. ವೆಚ್ಚದ ಯೋಜನೆ
Team Udayavani, Jul 10, 2019, 5:39 AM IST
ಕಾಪು: ಕಾಪು ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ವಿವಿಧ ವಿದ್ಯುತ್ ಮಾರ್ಗಗಳ ಬದಲಾವಣೆಗೆ ಮೂರು ಹಂತಗಳಲ್ಲಿ ಸರ್ವೆ ನಡೆಸಿ, ಡಿಪಿಆರ್ ಸಹಿತವಾಗಿ 9 ಕೋ. ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೆಸ್ಕಾಂ ಉಡುಪಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದಿನೇಶ್ ಉಪಾಧ್ಯ ಹೇಳಿದರು.
ಜು. 9ರಂದು ಮೆಸ್ಕಾಂ ಕಾಪು ಉಪವಿಭಾಗ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ವೋಲೆrೕಜ್ ಸಮಸ್ಯೆ ನಿವಾರಿಸಿ
ಬಂಟಕಲ್ಲು – ಶಂಕರಪುರ, ಪಾಂಬೂರು-ಪಡುಬೆಳ್ಳೆ, ಪಾಂಬೂರು ಮಾನಸ ಶಾಲೆ ಬಳಿ, ಬಂಟಕಲ್ಲು ಸೋದೆ ಮಠದ ಬಳಿಯ ವಿದ್ಯುತ್ ಮಾರ್ಗದ ಬದಲಾವಣೆ ಮಾಡುವಂತೆ ಮತ್ತು ದಿಂದೊಟ್ಟು ಸೇತುವೆ ಬಳಿ ನದಿ ದಾಟಿಸಿ ಬೆಳ್ಳೆ ಶಾಖೆಗೆ ವಿದ್ಯುತ್ ಪೂರೈಸುವುದನ್ನು ನಿಲ್ಲಿಸುವಂತೆ ಪಾಂಬೂರು ನಿವಾಸಿ ರಾಮಚಂದ್ರ ಪ್ರಭು ಒತ್ತಾಯಿಸಿದರು. ಎಲ್ಲೂರು ಗ್ರಾಮದ ಮಾಣಿಯೂರಿನಲ್ಲಿ ಲೋ ವೊಲೆrೕಜ್ ಸಮಸ್ಯೆಯಿದ್ದು, ಕೃಷಿ ಪರಿವರ್ತಿತ ವಿದ್ಯುತ್ ಮಾರ್ಗಗಳ ಬದಲಾವಣೆಗೆ ಕೃಷಿಕ ಸಂಜೀವ ಶೆಟ್ಟಿ ಮಾಣಿಯೂರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ದಿನೇಶ್ ಉಪಾಧ್ಯ ಅವರು, ವಿದ್ಯುತ್ ಮಾರ್ಗ ಬದಲಾವಣೆ ಸಹಿತ ವಿವಿಧ ವ್ಯವಸ್ಥೆಗಳ ಜೋಡಣೆಗೆ ಪ್ರಥಮ ಹಂತದಲ್ಲಿ 4 ಕೋ. ರೂ., ಎರಡನೇ ಹಂತದಲ್ಲಿ 1.20 ಕೋ. ರೂ. ಹಾಗೂ ಮೂರನೇ ಹಂತದಲ್ಲಿ 2 ಕೋ. ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋ ವೋಲೆrೕಜ್ ಸಮಸ್ಯೆ ನಿವಾರಣೆಗೆ 1.80 ಕೋ. ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಿವೇಶನ ಸಮಸ್ಯೆ ಪರಿಹಾರಕ್ಕೆ ಸರಕಾರಕ್ಕೆ ಪತ್ರ
ಮೆಸ್ಕಾಂ ಕಾಪು ಉಪವಿಭಾಗಕ್ಕೆ ಸ್ವಂತ ನಿವೇಶನದ ಕೊರತೆಯಿದೆ. ಕಾಪು ಬಂಗ್ಲೆಯಲ್ಲಿರುವ ಸರಕಾರಿ ಜಾಗವನ್ನು ಗುರುತಿಸಿ, ಅದನ್ನು ಮಂಜೂರು ಮಾಡುವಂತೆ ಕಂದಾಯ ಇಲಾಖೆ, ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದಿನೇಶ್ ಉಪಾಧ್ಯ ಮಾಹಿತಿ ನೀಡಿದರು.
ಬೆಳಪುವಿನಲ್ಲಿ 110 ಕೆವಿ ಸಬ್‌ಸ್ಟೇಷನ್
ಬೆಳಪುವಿಗೆ 110 ಕೆವಿ ಸಾಮರ್ಥ್ಯದ ಸಬ್‌ಸ್ಟೇಷನ್ ಮಂಜೂರಾಗಿದ್ದು, ಅಲ್ಲಿಗೆ ವಿದ್ಯುತ್ ಮಾರ್ಗ ಎಳೆಯಲು ವಿವಿಧ ಕಡೆಗಳಲ್ಲಿ ಜನರಿಂದ ಆಕ್ಷೇಪವ್ಯಕ್ತವಾಗಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವ ರೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಲಾಯಿತು.
ಉಡುಪಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದಿನೇಶ್ ಉಪಾಧ್ಯ, ಉಡುಪಿ ವಿಭಾಗದ ಉಪ ನಿಯಂತ್ರಣಾಧಿಕಾರಿ ಮಂಜುನಾಥ್, ಕಾಪು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಕುಮಾರ್, ತಾಂತ್ರಿಕ ಸಹಾಯಕ ಇಂಜಿನಿಯರ್ ಜಯ ಸ್ಮಿತಾ, ವಿದ್ಯುತ್ ಗುತ್ತಿಗೆದಾರರ ಸಂಘದಜಿಲ್ಲಾಧ್ಯಕ್ಷ ನಾಗರಾಜ್ ರಾವ್, ಕಾಪು ವಲಯ ಅಧ್ಯಕ್ಷ ಅನ್ವರ್ ಅಲಿ ಕಾಪು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.