ಆಗಸ್ಟ್‌ನಲ್ಲಿ ಇಂಗ್ಲಿಷ್ ಪಾಠ ಶುರು
Team Udayavani, Jul 11, 2019, 5:00 AM IST
ಸೂರಜ್ ಶೆಟ್ಟಿ ನಿರ್ದೇಶನ ಮತ್ತು ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣದ ‘ಇಂಗ್ಲಿಷ್’ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ ಸಿನೆಮಾ ಬಿಡುಗಡೆ ಯಾಗುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.
ಇದು ಇಂಗ್ಲಿಷ್ ಗೊತ್ತಿಲ್ಲದ ಕಾರಣಕ್ಕೆ ಪ್ರೀತಿಯಿಂದ ದೂರವಿರಬೇಕಾದ ಪರಿಸ್ಥಿತಿಯನ್ನು ಎದುರಿಸುವ ಯುವಕನೊಬ್ಬನ ಸುತ್ತ ಹೆಣೆದ ಕಥೆಯನ್ನು ಹೊಂದಿರುವ ಸಿನೆಮಾ. ಮಾಲ್ನಲ್ಲಿ ವೇಷ ಹಾಕಿ ಕುಣಿಯುವ ಯುವಕನೋರ್ವನಿಗೆ ಓರ್ವ ಯುವತಿ ಯಲ್ಲಿ ಪ್ರೀತಿ ಮೂಡು ತ್ತದೆ. ಆದರೆ ಆಕೆ ಇಂಗ್ಲಿಷ್ ಕಲಿತ ವಳು, ಈತನಿಗೆ ಇಂಗ್ಲಿಷ್ ಗೊತ್ತಿರು ವುದಿಲ್ಲ. ಆತನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂದು ಅವಳು ಇವನಿಂದ ದೂರವಾಗಲು ಪ್ರಯತ್ನಿಸುತ್ತಾಳೆ. ಇದರಿಂದ ಬೇಸರಗೊಳ್ಳುವ ಆತ, ತನ್ನ ಗೆಳೆಯರ ಸಹಾಯ ಪಡೆದು ಹೇಗಾದರೂ ಮಾಡಿ ಇಂಗ್ಲಿಷ್ ಕಲಿಯಬೇಕು ಎಂದು ಪಣ ತೊಡುತ್ತಾನೆ. ಅದಕ್ಕಾಗಿ ತೀವ್ರ ಶ್ರಮಪಡುತ್ತಾನೆ. ಇದರಿಂದ ಆಕೆಗೆ ಯುವಕನ ಮೇಲೆ ಪ್ರೀತಿ ಮೂಡುತ್ತದೆ.
ಆದರೆ ಆಕೆಯ ಮನೆಯ ವರು ಆತನನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಬಳಿಕ ಮತ್ತಷ್ಟು ಸಾಧನೆ ಮಾಡಿ ಅವರ ಮನ ವೊಲಿಸು ವಲ್ಲೂ ಆತ ಯಶಸ್ವಿ ಯಾಗು ತ್ತಾನೆ. ಇವೆಲ್ಲವುಗಳ ಹಿಂದಿರುವುದು ಇಂಗ್ಲಿಷ್ ಆಗಿದೆ. ಆದ್ದರಿಂದ ಸಿನೆಮಾಕ್ಕೆ ಇಂಗ್ಲಿಷ್ ಎಂದು ಹೆಸರಿಡಲಾಗಿದೆ. ಈ ಸಿನೆಮಾದಲ್ಲಿ ಖ್ಯಾತ ನಟ ಅನಂತನಾಗ್ ಅವರು ನಟಿಸಿರುವುದು ಮತ್ತೂಂದು ವಿಶೇಷ. ಪೃಥ್ವಿ ಅಂಬಾರ್, ನವ್ಯಾ ಪೂಜಾರಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿ ರಾಮಕುಂಜ ಮುಂತಾದವರು ತಾರಾಗಣದಲ್ಲಿರುವ ಈ ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಜ್ ಶೆಟ್ಟಿ ಅವರದ್ದು. ಶಶಿರಾಜ್ ಕಾವೂರು ಮತ್ತು ಅರ್ಜುನ್ ಲೂಯಿಸ್ ಅವರ ಸಾಹಿತ್ಯವಿದ್ದು, ಛಾಯಾಗ್ರಹಣದಲ್ಲಿ ಕೃಷ್ಣ ಸಾರಥಿ, ಮನು ಶೇರಿಗಾರ ಸಂಕಲನವಿದೆ. ಸಂಗೀತದಲ್ಲಿ ಮಣಿಕಾಂತ್ ಕೊಡುಗೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.