ಬ್ಯಾಂಬೂ ಕ್ಯಾಪಿಟಲ್: ಏಕಕಾಲಕ್ಕೆ 3 ಲಕ್ಷ ಸಸಿಗಳ ನೆಡುವಿಕೆ
Team Udayavani, Jul 11, 2019, 5:26 AM IST
ಕಾಸರಗೋಡು: ಬಹು ನಿರೀಕ್ಷಿತ ಬ್ಯಾಂಬೂ ಕ್ಯಾಪಿಟಲ್ ಜನಪರ ಯೋಜನೆಯ ಉದ್ಘಾಟನೆ ಜು. 13ರಂದು ಪುತ್ತಿಗೆಯಲ್ಲಿ ನಡೆಯಲಿದೆ. ತೀವ್ರತರ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಜಿಲ್ಲೆಯ ಸಮಗ್ರ ಚಿತ್ರಣ ಬದಲಿಸುವ ನಿಟ್ಟಿನಲ್ಲಿ, ಕಾಸರಗೋಡು ಜಿಲ್ಲೆಯನ್ನು ದಕ್ಷಿಣ ಭಾರತ ಮಟ್ಟದ ಬಿದಿರು ರಾಜಧಾನಿಯಾಗಿಸುವ ಜಿಲ್ಲಾಡಳಿತದ ಬಹುದೊಡ್ಡ ಕನಸು ಈ ಮೂಲಕ ನನಸಾಗುತ್ತಿದೆ.
ಮೊದಲ ಹಂತವಾಗಿ ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‌ಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಪುತ್ತಿಗೆಯಲ್ಲಿ ನಡೆಯುವ ಸಮಾರಂಭವನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸುವರು.
ಈ ಸಂಬಂಧ ಕಾಸರಗೋಡು, ಮಂಜೇಶ್ವರ ಬ್ಲಾಕ್‌ಗಳ ಅಧ್ಯಕ್ಷರ ಸಭೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದು, ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಜು. 13ರಂದು ಏಕಕಾಲಕ್ಕೆ ಜಿಲ್ಲೆಯ ವಿವಿಧೆಡೆ ಯೋಜನೆಗೆ ಚಾಲನೆ ಲಭಿಸಲಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಯಾ ಪಂಚಾಯತ್‌ಗಳ ಅಧ್ಯಕ್ಷರು, ವಾರ್ಡ್ ಮಟ್ಟದಲ್ಲಿ ಆಯಾ ವಾರ್ಡ್‌ಗಳ ಸದಸ್ಯರು, ಬ್ಲಾಕ್ ಪಂಚಾಯತ್ ಮಟ್ಟದಲ್ಲಿ ಆಯಾ ಸಂಸ್ಥೆಗಳ ಅಧ್ಯಕ್ಷರು ಯೋಜನೆಗಳಿಗೆ ಚಾಲನೆ ನೀಡುವರು. ಅಂದು ಬೆಳಗ್ಗೆ 10ರಿಂದ 11 ಗಂಟೆಯೊಳಗೆ 3 ಲಕ್ಷ ಬಿದಿರು ಸಸಿಗಳನ್ನು ನೆಡುವ ಮೂಲಕ ಈ ಯೋಜನೆ ಶುಭಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ತೀವ್ರ ಜಲಕ್ಷಾಮವನ್ನುಅನುಭವಿಸುತ್ತಿರುವ ಜಿಲ್ಲೆಯಲ್ಲಿ ಬಿದಿರು ಬೆಳೆ ಅಧಿಕಗೊಳ್ಳುವ ಮೂಲಕ ನೀರು ಭೂಮಿಗಿಳಿಯುವ ಪ್ರಕ್ರಿಯೆಗೆ ಪೂರಕವಾಗಲಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉದ್ದಿಮೆ ಘಟಕಗಳು ಕಡಿಮೆಯಿರುವ ಜಿಲ್ಲೆಯಲ್ಲಿ ಬಿದಿರಿನ ಉದ್ದಿಮೆ ಹೊಸ ಚೈತನ್ಯ ಒದಗಿಸಲಿದೆ. ಕಾಸರಗೋಡು ಜಿಲ್ಲೆಯ ಕೆಂಗಲ್ಲ ನೆಲ ಬಿದಿರು ಬೆಳೆಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಗುಳಿ ತೋಡುವ, ಸಸಿ ನೆಡುವ ಕಾಯಕದಲ್ಲಿ ತೊಡಗಲಿದ್ದಾರೆ. ಯೋಜನೆಗಾಗಿ ಈಗಾಗಲೇ ನೆಟ್ಟು ಬೆಳೆಸಿರುವ 3 ತಿಂಗಳ ಸಸಿಗಳು ಸಿದ್ಧವಿವೆ. ಜು. 12ರಂದು ಜಿಲ್ಲಾ ಮಣ್ಣು ಸಂರಕ್ಷಣೆ ಕಚೇರಿಯ ಮೇಲ್ನೋಟದಲ್ಲಿ ಬಿದಿರು ಯೋಜನೆ ಜಾರಿಗೊಳಿಸುವ ಪ್ರದೇಶಗಳಿಂದ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಲಾಗುವುದು. ಭೂಗರ್ಭ ಜಲ ಇಲಾಖೆ ವತಿಯಿಂದ ಇಲ್ಲಿನ ಜಲಮಟ್ಟದ ಗಣನೆಯನ್ನೂ ಸಂಗ್ರಹಿಸಲಾಗುವುದು.
ಸಭೆಯಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಸಿ.ಎಚ್. ಮಹಮ್ಮದ್ ಕುಂಞಿ ಚಾಯಿಂಡಡಿ, ಎ.ಕೆ.ಎಂ. ಅಶ್ರಫ್, ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮದ ಜತೆ ಸಂಚಾಲಕ ಕೆ. ಪ್ರದೀಪನ್, ಎ.ಡಿ.ಸಿ. (ಜನರಲ್) ಬೆವಿನ್ ಜಾನ್, ಹರಿತ ಕೇರಳಂ ಮಿಷನ್‌ನ ಪ್ರತಿನಿಧಿ ಎ.ಪಿ. ಅಭಿರಾಜ್, ಜ್ಯೂನಿಯರ್ ಹೈಡ್ರೋಜಲಿಸ್ಟ್ ಡಾ| ಕೆ.ಎ. ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.