ಕೋಟ: ಕಾಶೀ ಮಠಾಧೀಶರ ಚಾತುರ್ಮಾಸ್ಯ ವ್ರತ
Team Udayavani, Jul 11, 2019, 5:10 AM IST
ಮಂಗಳೂರು: ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಕೋಟ ಶ್ರೀ ಕಾಶೀಮಠದ ಶ್ರೀ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತವನ್ನು ಜು. 22 ರಿಂದ ಆಚರಿಸಲಿದ್ದಾರೆ.
ಗುರುವಾರ ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ಕಾಂನಿಂದ ಆಗಮಿಸಲಿರುವ ಸ್ವಾಮೀಜಿಯವರನ್ನು ಕೋಟದ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಿಂದ ಮೆರವಣಿಗೆಯಲ್ಲಿ ಸ್ವಾಗತಿಸಲಾಗುವುದು.
ಚಾತುರ್ಮಾಸ್ಯದ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಆಯೋಜಿಸಿದ್ದು, ರವಿವಾರ ಸಂಜೆ 4 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಜು. 19ರಿಂದ ಜು. 21ರ ವರೆಗೆ ಸಾನಿಧ್ಯ ಹವನಾದಿಗಳು ಜರಗಲಿದ್ದು, ಜು. 22ರ ಸೋಮವಾರ ಶ್ರೀ ವ್ಯಾಸ ರಘುಪತಿ ದೇವರಿಗೆ ಶತ ಕಲಶಾಭಿಶೇಕ, ಲಘುವಿಷ್ಣು ಕಲಶಾಭಿಶೇಕ, ಕನಕಾಭಿಶೇಕ, ಮುದ್ರಾಧಾರಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಮೃತ್ತಿಕಾ ಪೂಜನೆಯೊಂದಿಗೆ ಚಾತುರ್ಮಾಸ ವ್ರತ ಆರಂಭ ವಾಗಲಿದೆ.
ಚಾತುರ್ಮಾಸ್ಯ ಅವಧಿಯಲ್ಲಿ ಭಜನೆ, ಭಾಗವತ ಹವನ, ಭಜನ ಸಪ್ತಾಹ, ಋಕ್‌ಸಂಹಿತಾ ಯಾಗ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ ಇಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.