ಮುದ್ರಣ ಕಾಗದದ ಶುಲ್ಕ ರದ್ದತಿಗೆ ಮನವಿ
Team Udayavani, Jul 11, 2019, 5:00 AM IST
ಹೊಸದಿಲ್ಲಿ: ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಬಳಕೆಯಾಗುವ ಮುದ್ರಣ ಕಾಗದ(ನ್ಯೂಸ್‌ಪ್ರಿಂಟ್)ದ ಆಮದಿನ ಮೇಲೆ ವಿಧಿಸಲಾಗಿರುವ ಶೇ.10ರಷ್ಟು ಕಸ್ಟಮ್ಸ್ ಶುಲ್ಕವನ್ನು ರದ್ದುಗೊಳಿಸು ವಂತೆ ಕೇಂದ್ರ ಸರಕಾರಕ್ಕೆ ಭಾರತೀಯ ವೃತ್ತಪತ್ರಿಕೆಗಳ ಸೊಸೈಟಿ (ಐಎನ್‌ಎಸ್) ಮನವಿ ಸಲ್ಲಿಸಿದೆ.
ಪತ್ರಿಕೆಗಳಿಗೆ ಆಧಾರವಾಗಿರುವ ಜಾಹೀರಾತು ಆದಾಯವು ಗಣನೀಯ ಮಟ್ಟದಲ್ಲಿ ಕುಸಿದಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ದಿನಪತ್ರಿಕೆಗಳು ಹಾಗೂ ನಿಯತ ಕಾಲಿಕೆಗಳು ಆರ್ಥಿಕ ನಷ್ಟದಲ್ಲಿವೆ. ಹೀಗಿರುವಾಗ, ಮುದ್ರಣ ಕಾಗದ ಮೇಲಿನ ಶುಲ್ಕದಿಂದಾಗಿ ವೃತ್ತಪತ್ರಿಕೆಗಳ ಉದ್ಯಮವು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಲಿವೆ ಎಂದು ಐಎನ್‌ಎಸ್, ತನ್ನ ಮನವಿ ಪತ್ರದಲ್ಲಿ ವಿವರಿಸಿದೆ.
ಮುದ್ರಣ ಮಾಧ್ಯಮ ರಂಗಕ್ಕೆ ವಾರ್ಷಿಕ 25 ಲಕ್ಷ ಟನ್‌ನಷ್ಟು ಮುದ್ರಣ ಕಾಗದದ ಆವಶ್ಯಕತೆಯಿದೆ. ದೇಶೀಯ ಮಟ್ಟದಲ್ಲಿ ಈ ಗುಣಮಟ್ಟದ ಕಾಗದದ ಉತ್ಪಾದನೇ ಕೇವಲ 10 ಲಕ್ಷ ಟನ್‌ನಷ್ಟಿರುವುದರಿಂದ, 15 ಲಕ್ಷ ಟನ್‌ನಷ್ಟು ಕಾಗದವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯ ವಾಗಿದೆ. ಹೀಗಾಗಿ ಈ ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ನ್ಯೂಸ್‌ಪ್ರಿಂಟ್ ಮೇಲಿನ ಶುಲ್ಕ ರದ್ದು ಮಾಡಿ ಭಾರತೀಯ ಪತ್ರಿಕಾ ರಂಗವನ್ನು ಉಳಿಸಬೇಕು ಎಂದು ಕೋರಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.