ಹರಿಹರ ತಾಪಂನಲ್ಲಿ ಕೈ-ಜೆಡಿಎಸ್ ಮೈತ್ರಿ
ಅವಿಶ್ವಾಸ ಗೊತ್ತುವಳಿ•16ರ ಪೈಕಿ 10 ಸದಸ್ಯರಿಂದ ಸಹಿ•ಅಧ್ಯಕ್ಷೆ ಬಿಜೆಪಿಯ ಶ್ರೀದೇವಿ ಸ್ಥಾನಕ್ಕೆ ಕಂಟಕ
Team Udayavani, Jul 11, 2019, 10:20 AM IST
ಹರಿಹರ: ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಭೆ ಕರೆಯಲು ಕೋರಿ ತಾಪಂ ಸದಸ್ಯರು ಕಚೇರಿ ವ್ಯವಸ್ಥಾಪಕರಿಗೆ ಬುಧವಾರ ಮನವಿ ಸಲ್ಲಿಸಿದರು.
ಹರಿಹರ: ಇಲ್ಲಿನ ತಾಪಂ ಅಧ್ಯಕ್ಷೆ ಎಚ್.ಎಸ್. ಶ್ರೀದೇವಿ ಮಂಜಪ್ಪ ವಿರುದ್ಧ ತಾಪಂನ 10 ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದು, ತಾಪಂನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಕುತ್ತು ಬಂದಿದೆ. ಬಿಜೆಪಿ ಬದಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಮುಂದಾಗಿದೆ.
ಕಾಂಗ್ರೆಸ್ ಸದಸ್ಯ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕುಂಬಳೂರು ಕ್ಷೇತ್ರದ ಆದಾಪುರ ವೀರಭದ್ರಪ್ಪ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ತಾಪಂ ಕಚೇರಿ ವ್ಯವಸ್ಥಾಪಕರ ಕೊಠಡಿಗೆ ತೆರಳಿದ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಎಲ್ಲಾ 10 ಸದಸ್ಯರು, ಅವಿಶ್ವಾಸ ವ್ಯಕ್ತಪಡಿಸಿ ಸಹಿ ಮಾಡಿದ್ದ ಮನವಿ ಸಲ್ಲಿಸಿ, ಮುಂದಿನ ಕ್ರಮ ಜರುಗಿಸಲು ಕೋರಿದರು.
ತಾಪಂನಲ್ಲಿ ಜೆಡಿಎಸ್‌ನ 6, ಬಿಜೆಪಿಯ 5 ಹಾಗೂ ಕಾಂಗ್ರೆಸ್‌ನ 4 ಸದಸ್ಯರು ಸೇರಿ ಒಟ್ಟು 15 ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಕುಂಬಳೂರು ಕ್ಷೇತ್ರದ ಆದಾಪುರ ವೀರಭದ್ರಪ್ಪ, ಕುಣಿಬೆಳಕೆರೆ ಕ್ಷೇತ್ರದ ಎನ್.ಪಿ.ಬಸವಲಿಂಗಪ್ಪ, ರಾಜನಹಳ್ಳಿ ಕ್ಷೇತ್ರದ ಲಕ್ಷ್ಮೀ ಮಹಾಂತೇಶ್, ಕೊಂಡಜ್ಜಿ ಕ್ಷೇತ್ರದ ಪ್ರೇಮಾ ಪರಮೇಶ್ವರಪ್ಪ, ಜೆಡಿಎಸ್ ಸದಸ್ಯರಾದ ಸಿರಿಗೆರೆ ಕ್ಷೇತ್ರದ ಕೊಟ್ರಪ್ಪಗೌಡ, ವಾಸನದ ಜಿ.ಸಿ.ಬಸವರಾಜ್, ಕೊಕ್ಕನೂರು ಕ್ಷೇತ್ರದ ಬಸವನಗೌಡ ಬಿ., ಗುತ್ತೂರು ಕ್ಷೇತ್ರದ ಸದಸ್ಯೆ, ಹಾಲಿ ಉಪಾಧ್ಯಕ್ಷೆ ಜಯ್ಯಮ್ಮ ಬಸವಲಿಂಗಪ್ಪ, ಜಿಗಳಿ ಕ್ಷೇತ್ರದ ರತ್ನಮ್ಮ ಕೆ.ಆರ್.ರಂಗಪ್ಪ, ಎಳೆಹೊಳೆ ಕ್ಷೇತ್ರದ ಶಾಂತಮ್ಮ ಗದಿಗೆಪ್ಪ ಅವಿಶ್ವಾಸ ನಿರ್ಣಯ ಕೋರಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿಗೆ ಕುತ್ತು: ಮೂರು ವರ್ಷದ ಹಿಂದೆಯೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ಅಧ್ಯಕ್ಷರಾಗಿ ಬನ್ನಿಕೋಡು ಕ್ಷೇತ್ರದ ಬಿಜೆಪಿ ಸದಸ್ಯೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷರಾಗಿ ಗುತ್ತೂರು ಕ್ಷೇತ್ರದ ಜೆಡಿಎಸ್ ಸದಸ್ಯೆ ಬಸವಲಿಂಗಮ್ಮ ಆಯ್ಕೆಯಾಗಿದ್ದರು.
ಸದ್ಯ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವಿದೆ. ಲೋಕಸಭಾ ಚುನಾವಣೆಯನ್ನೂ ಇವೆರಡೂ ಪಕ್ಷಗಳು ಜೊತೆಯಾಗಿ ಎದುರಿಸಿವೆ. ಹೀಗಿದ್ದಾಗ ತಾಪಂನಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ತಮಗೆ ಆಡಳಿತ ನಡೆಸುವ ಅವಕಾಶ ಸಿಗುತ್ತದೆ ಎಂಬುದು ಕಾಂಗ್ರೆಸ್ ಸದಸ್ಯರ ಲೆಕ್ಕಾಚಾರವಾಗಿತ್ತು. ಅದರಂತೆ ಈಗ ಜೆಡಿಎಸ್-ಕಾಂಗ್ರೆಸ್ ಹೊಸ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಗೆ ಕುತ್ತು ಬಂದಂತಾಗಿದೆ.
ಅವಿಶ್ವಾಸ ನಿರ್ಣಯ ಕೋರಿ ಅರ್ಜಿ ಸಲ್ಲಿಸಿದ 15 ದಿನದೊಳಗೆ ಅಧ್ಯಕ್ಷರು ತಾಪಂ ಸದಸ್ಯರ ಸಭೆ ಕರೆದು ಅವಿಶ್ವಾಸ ನಿರ್ಣಯಕ್ಕೆ ಅನುವು ಮಾಡಿಕೊಡಬೇಕಿದೆ. ಅವರು ಅಷ್ಟರಲ್ಲಿ ಸಭೆ ಕರೆಯದಿದ್ದರೆ 16ನೇ ದಿನದಿಂದ 30 ದಿನಗಳವರೆಗೆ ತಾಪಂ ಉಪಾಧ್ಯಕ್ಷರು ಸಭೆ ಕರೆಯಬಹುದು. ಅವರೂ ಸಭೆ ಕರೆಯದಿದ್ದರೆ 30 ದಿನಗಳ ನಂತರ ತಾಪಂ ಇಒ ಅವರಿಗೆ ಸಭೆ ನಡೆಸುವ ಅಧಿಕಾರ ಲಭಿಸುತ್ತದೆ.
ನಗರಸಭೆ, ಪುರಸಭೆಯಲ್ಲೂ ಮೈತ್ರಿ: ನಿರೀಕ್ಷೆಯಂತೆ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ತಾಪಂ ಮಾತ್ರವಲ್ಲದೆ ಹರಿಹರ ನಗರಸಭೆ, ಮಲೆಬೆನ್ನೂರು ಪುರಸಭೆಯಲ್ಲೂ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗುತ್ತಿದೆ.
ಇತ್ತೀಚಿಗೆ ನಡೆದ ನಗರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿಲ್ಲ, ಮಲೆಬೆನ್ನೂರು ಪುರಸಭೆಯಲ್ಲೂ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. ಮಲೇಬೆನ್ನೂರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಪಕ್ಷದ ಸದಸ್ಯರು ಅಧ್ಯಕ್ಷರಾಗಿದ್ದಾರೆ. ಎಪಿಎಂಸಿ, ಟಿಎಪಿಎಂಸಿ, ಪಿಎಲ್ಡಿ ಇನ್ನಿತರೆ ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹಾಗೂ ಜೆಡಿಎಸ್ ಮುಖಂಡರ ಮಧ್ಯೆ ಒಪ್ಪಂದವಾಗಿದೆೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Arrested: ಸರ, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.