ಇಂದಿನಿಂದ ಆಪರೇಷನ್ ಶುರು

ಜಿದ್ದಾಜಿದ್ದಿಯಲ್ಲಿ ಗೆಲ್ಲೋರ್ಯಾರು?

Team Udayavani, Jul 12, 2019, 5:00 AM IST

u-22

‘ಒಂದು ಟಾಸ್ಕ್. ಅದನ್ನು ಗೆಲ್ಲೋಕೆ ನಾಲ್ಕು ಜನರ ನಡುವೆ ಜಿದ್ದಾಜಿದ್ದಿಯ ಹೋರಾಟ…! ಹಾಗಾದರೆ ಆ ಟಾಸ್ಕ್ ಏನು, ಅದರಲ್ಲಿ ಗೆಲ್ಲೋದು ಯಾರು ಅದೇ ಸಸ್ಪೆನ್ಸ್‌…’

– ಹೀಗೆ ಹೇಳಿ ಹಾಗೊಮ್ಮೆ ಪಕ್ಕದಲ್ಲೇ ಕುಳಿತಿದ್ದ ಹಿರಿಯ ನಟ ಶ್ರೀನಿವಾಸ್‌ ಪ್ರಭು ಅವರನ್ನ ನೋಡಿದರು ನಿರ್ದೇಶಕ ಮಧುಸೂದನ್‌. ಅವರು ಹೇಳಿಕೊಂಡಿದ್ದು ‘ಆಪರೇಷನ್‌ ನಕ್ಷತ್ರ’ ಚಿತ್ರದ ಬಗ್ಗೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಇಂದು (ಜು.12) ಬಿಡುಗಡೆಯಾಗುತ್ತಿದೆ. ಆ ಕುರಿತು ಹೇಳಿಕೊಳ್ಳಲು ತಮ್ಮ ಚಿತ್ರತಂಡದೊಂದಿಗೆ ಆಗಮಿಸಿದ್ದರು ನಿರ್ದೇಶಕರು.

ಮೊದಲು ಮಾತಿಗಿಳಿದ ಮಧುಸೂದನ್‌, ಹೇಳಿದ್ದಿಷ್ಟು. ‘ಹೊಸಬರೇ ಸೇರಿ ಮಾಡಿದ ಚಿತ್ರವಿದು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ಹಾಗು ಸಾಂಗ್‌ಗೆ ಎಲ್ಲಡೆಯಿಂದ ಮೆಚ್ಚುಗೆ ಸಿಕ್ಕಿದೆ. ಖುಷಿಯ ಸುದ್ದಿಯೆಂದರೆ, ಸಿನಿಮಾದ ಟ್ರೇಲರ್‌ ನೋಡಿ, ತೆಲುಗಿನ ಹೆಸರಾಂತ ನಿರ್ಮಾಪಕರು ಸಿನಿಮಾದ ರೀಮೇಕ್‌ ರೈಟ್ಸ್‌ ಕೇಳಿದ್ದಾರೆ. ಆ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಇದಾಗಿದ್ದು, ಇಲ್ಲಿ ನಕ್ಷತ್ರ ಅನ್ನೋದು ಏನು ಅನ್ನೋದೇ ಸಸ್ಪೆನ್ಸ್‌. ಇಲ್ಲಿ ಕ್ಲೈಮ್ಯಾಕ್ಸ್‌ ಎಲ್ಲದ್ದಕ್ಕೂ ಉತ್ತರ ಕೊಡಲಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ಸಿನಿಮಾ, ನೋಡುಗರ ನಂಬಿಕೆ ಉಳಿಸಿಕೊಳ್ಳುತ್ತೆ ಎಂಬ ಗ್ಯಾರಂಟಿ ಕೊಡುತ್ತೇನೆ ‘ ಎನ್ನುತ್ತಾರೆ ಮಧುಸೂದನ್‌.

ಹಿರಿಯ ಕಲಾವಿದ ಶ್ರೀನಿವಾಸ ಪ್ರಭು ಅವರಿಗೆ ಹೊಸಬರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ‘ಹೊಸಬರ ಪರ್ವಕಾಲವಿದು. ಈಗಂತೂ ಸಾಕಷ್ಟು ಹೊಸ ಪ್ರಯೋಗ ನಡೆಯುತ್ತಿವೆ. ಆ ಪ್ರಯೋಗದಲ್ಲಿ ‘ಆಪರೇಷನ್‌ ನಕ್ಷತ್ರ’ ಕೂಡ ಸೇರಿದೆ. ಇಡೀ ತಂಡ ಉತ್ಸಾಹದಿಂದ ಕೆಲಸ ಮಾಡಿದೆ. ಇಲ್ಲಿ ಅನೇಕ ತಿರುವುಗಳಿವೆ. ಅವುಗಳೇ ಸಿನಿಮಾದ ಕುತೂಹಲವನ್ನು ಹೆಚ್ಚಿಸುತ್ತವೆ. ಒಂದೊಳ್ಳೆಯ ತಂಡದ ಜೊತೆ ಒಳ್ಳೆಯ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದರು ಶ್ರೀನಿವಾಸ್‌ ಪ್ರಭು. ನಾಯಕ ನಿರಂಜನ್‌ ಒಡೆಯರ್‌ಗೆ ಇದು ಮೊದಲ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಅವರಿಗಿಲ್ಲಿ ಎರಡು ಶೇಡ್‌ ಪಾತ್ರವಿದ್ದು, ಅದು ಹೇಗಿದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂಬುದು ಅವರ ಮಾತು.

ಮತ್ತೂಬ್ಬ ನಾಯಕ ಲಿಖೀತ್‌ಸೂರ್ಯ ಅವರಿಗೆ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಸಿಕ್ಕಿದ್ದು, ಚಿತ್ರಕ್ಕೆ ಅದೊಂದು ತಿರುವು ಕೊಡುವ ಪಾತ್ರವಂತೆ. ಆ ಪೊಲೀಸ್‌ ಪಾತ್ರ ಕಳ್ಳರನ್ನು ಹಿಡಿಯುವಂಥದ್ದಾ ಅಥವಾ, ಕಳ್ಳರ ಜೊತೆ ಸೇರಿಕೊಳ್ಳುವುದಾ ಎಂಬ ಪ್ರಶ್ನೆಗೆ ಚಿತ್ರ ನೋಡಬೇಕು ಎಂದರು ಲಿಖೀತ್‌ ಸೂರ್ಯ.

ಅದಿತಿ ಪ್ರಭುದೇವ ಅವರಿಗೆ ಇದು ಲಕ್ಕಿ ಸಿನಿಮಾವಂತೆ. ಈ ಚಿತ್ರ ಒಪ್ಪಿಕೊಂಡ ಬಳಿಕ ಅವರಿಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ. ಅವರಿಲ್ಲಿ ಎರಡು ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಯಾರು ಯಾರನ್ನ ಆಪರೇಷನ್‌ ಮಾಡ್ತಾರೆ ಅನ್ನೋದನ್ನು ತಿಳಿಯಬೇಕಾದರೆ, ಚಿತ್ರವನ್ನು ನೋಡಲೇಬೇಕು ಎಂದರು.

ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರಿಲ್ಲಿ ಎರಡು ಹಾಡುಗಳಿಗೆ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತವನ್ನು ಕೊಟ್ಟಿದ್ದಾರಂತೆ. ಚಿತ್ರದಲ್ಲಿ ಹಿನ್ನೆಲೆ ಸಂಗೀತ ವಿಶೇಷವಾಗಿದ್ದು, ಇಲ್ಲಿ ಐದು ಥೀಮ್‌ ಮ್ಯೂಸಿಕ್‌ ಬಳಕೆ ಮಾಡಲಾಗಿದೆ, ಇಡೀ ಚಿತ್ರದುದ್ದಕ್ಕೂ ಅದು ಹೈಲೈಟ್ ಎಂದರು ವೀರ್‌ಸಮರ್ಥ್.

ನಿರ್ಮಾಪಕರಾದ ನಂದಕುಮಾರ್‌, ಅರವಿಂದಮೂರ್ತಿ, ಕಿಶೋರ್‌ ಮೇಗಳಮನೆ, ರಾಧಾಕೃಷ್ಣ ಈ ವೇಳೆ ಚಿತ್ರದ ಅನುಭವ ಹಂಚಿಕೊಂಡರು. ವಿಜಯ್‌ ಸಿನಿಮಾಸ್‌ನ ವಿಜಯ್‌ ಸುಮಾರು 80 ಪ್ಲಸ್‌ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾಗಿ ಹೇಳಿಕೊಂಡರು.

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.