ಯಾರ ಒತ್ತಡಕ್ಕೂ ಮಣಿಯುವುದಿಲ್ಲ: ಸ್ಪೀಕರ್
Team Udayavani, Jul 12, 2019, 5:29 AM IST
ಬೆಂಗಳೂರು: ಯಾರೂ ಎಷ್ಟೇ ಒತ್ತಡ ಹೇರಿದರೂ ಸಂವಿಧಾನದ ನಿಯಮದಂತೆ ಕ್ರಮ ಕೈಗೊಳ್ಳುವುದಾಗಿ’ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಈ ಮೂಲಕ
ರಾಜೀನಾಮೆ ಅಂಗೀಕಾರ ಮಾಡಲು ವಿಳಂಬ ಮಾಡುತ್ತಿದ್ದಾರೆಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಸುಪ್ರೀಂಕೋರ್ಟ್ ಸೂಚನೆ ಮೇರೆ 11 ಶಾಸಕರು ತಮ್ಮನ್ನು ಭೇಟಿ ಮಾಡಿ ಮತ್ತೂಂದು ಬಾರಿ ರಾಜೀನಾಮೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ರಾಜೀನಾಮೆಯನ್ನು ಬೇಗ ಅಂಗೀಕರಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಶಾಸಕರ ವಿರುದ್ಧವೂ ಆಕ್ರೋಶ ಹೊರ ಹಾಕಿದ ಅವರು, ಸುಪ್ರೀಂಕೋರ್ಟ್‌ನ
ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯ ಸಾರಾಂಶ:
– ಶಾಸಕರ ರಾಜೀನಾಮೆ ಅಂಗೀಕಾರ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದೇನೆಂದು ಮಾಧ್ಯಮಗಳಲ್ಲಿ ಬಂದ ವರದಿಗಳಿಂದ ನೋವಾಗಿದೆ. ಜುಲೈ 6ರಂದು ನಾನು ಮಧ್ಯಾಹ್ನದ 12.45 ರ ವರೆಗೆ ಕಚೇರಿಯಲ್ಲಿಯೇ ಇದ್ದೆ. ರಾಜೀನಾಮೆ ಸಲ್ಲಿಸುವ ಶಾಸಕರ್ಯಾರೂ ಅನುಮತಿ ಪಡೆದಿರಲಿಲ್ಲ. ನಾನು ನನ್ನ ಕೆಲಸದ ಮೇಲೆ ಹೊರಗಡೆ ಹೋಗಿದ್ದೆ. ಅಂದು ರಾಜೀನಾಮೆ ಸಲ್ಲಿಸಲು ಶಾಸಕರು ಮಧ್ಯಾಹ್ನ 2.30ಕ್ಕೆ ಬಂದಿದ್ದರು. ನಾನು ಕಚೇರಿಯಲ್ಲಿ ಇಲ್ಲದಿದ್ದರೂ, ಅವರ ರಾಜೀನಾಮೆಯನ್ನು ಸ್ವೀಕರಿಸಿ, ಸ್ವೀಕೃತಿ ಪತ್ರ ನೀಡಿ ಕಳುಹಿಸಲಾಗಿದೆ. ಅಂದು ರಾಜೀನಾಮೆ ಸಲ್ಲಿಸಿದ್ದ 13 ಶಾಸಕರಲ್ಲಿ ಐದು ಜನ ಶಾಸಕರ ರಾಜೀನಾಮೆ ಮಾತ್ರ ಕ್ರಮಬದಟಛಿವಾಗಿದ್ದವು. ಉಳಿದ 8 ಶಾಸಕರ ರಾಜೀನಾಮೆ ಕ್ರಮಬದ್ಧ ವಾಗಿರಲಿಲ್ಲ.
– ವಿಧಾನಸಭೆಯ ನಿಯಮಾವಳಿ 202 ಪ್ರಕಾರ ರಾಜೀನಾಮೆ ಪತ್ರ ಇದೇ ರೀತಿ ಇರಬೇಕು ಎಂದು ಇದೆ. ಅದರಂತೆ ಎಂಟು ಶಾಸಕರಿಗೆ ಮತ್ತೆ ರಾಜೀನಾಮೆ ಸಲ್ಲಿಸಲು ಅವಕಾಶ ಕೊಟ್ಟಿದ್ದೇನೆ. ಸಂವಿಧಾನದ ಕಲಂ 190 ಪ್ರಕಾರ ರಾಜೀ ನಾಮೆ ಸಲ್ಲಿಸಿರುವ ಶಾಸಕರ ವಿಚಾರಣೆ ಮಾಡಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ರಾಜೀನಾಮೆ ಸಲ್ಲಿಸಿದವರಿಗೆ ವಿಚಾರಣೆಗೆ ಸಮಯ ನೀಡಿದ್ದೇನೆ.ನಾನು ಯಾರೋ ಹೇಳಿದಂತೆ ಕುಣಿಯಬೇಕಾ?
– ಶಾಸಕರು ನನಗೆ ರಾಜೀನಾಮೆ ಸಲ್ಲಿಸಿ ರಾಜ್ಯಪಾಲರಿಗೆ ಮನವಿ ಮಾಡುತ್ತಾರೆ. ರಾಜೀನಾಮೆ ಅಂಗೀಕಾರ ವಿಳಂಬವಾಗುತ್ತದೆ ಎಂದು ಶಾಸಕರು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದರು. ಸುಪ್ರೀಂಕೋರ್ಟ್ ಆದರೂ ವಿಚಾರ ಮಾಡಬಹುದಿತ್ತು. ಆದರೂ ನಮ್ಮ ಗಣತಂತ್ರದ ಗೌರವಾನ್ವಿತ ಸಂಸ್ಥೆಯಾಗಿರುವುದರಿಂದ ನಾನು ಅದನ್ನು ಗೌರವಿಸುತ್ತೇನೆ. ರಾಜೀನಾಮೆ ಸಲ್ಲಿಸಿದ್ದ ಶಾಸಕರನ್ನು ಯಾರು ಹಿಡಿದಿಟ್ಟುಕೊಂಡಿದ್ದರು? ಇವರು ನನ್ನ ಬಳಿ ಬರಲೇ ಇಲ್ಲ. ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿ ಕುಳಿತಿದ್ದಾರೆ. ಸಮಯ ಕೇಳಿ ಬಂದು ಭೇಟಿ ಮಾಡಿದ್ದರೆ ನಾನೇನು ಬೇಡ ಎನ್ನುತ್ತಿದ್ದೇನೆ ಎಂದು ಅಸಮಾಧಾನ ಹೊರ ಹಾಕಿದರು.
– ಸುಪ್ರೀಂಕೊರ್ಟ್ ಸೂಚನೆ ಮೇಲೆ 11 ಶಾಸಕರು ತಮ್ಮರಾಜೀನಾಮೆಯನ್ನು ಕ್ರಮಬದಟಛಿವಾಗಿ ಸಲ್ಲಿಸಿದ್ದಾರೆ. ಆದರೆ,ತಕ್ಷಣಕ್ಕೆ ನಾನು ರಾಜೀನಾಮೆ ಅಂಗೀಕರಿಸುವುದಿಲ್ಲ.
– ಕೌಲ್‌ಆಂಡ್ ಶೆಕªರ್ ಪ್ರಕಾರ ನಾನು ವಿಚಾರಣೆ ಮಾಡಬೇಕು. ನಿಯಮಗಳನ್ನು ಬಿಟ್ಟು ನಾನು ಏನೂ ಮಾಡುವುದಿಲ್ಲ. ಇಂದಿನ ಎಲ್ಲ ಬೆಳವಣಿಗೆಗಳನ್ನು ಚಿತ್ರೀಕರಣ ಮಾಡಿದ್ದೇನೆ. ಎಲ್ಲ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನಿಡಲಿದ್ದೇನೆ. ಕೆಲವರು ತಮಗೆ ಅಡಚಣೆ ಉಂಟು ಮಾಡಿದ್ದರಂದ ಭಯಕ್ಕೆ ಮುಂಬೈಗೆ
ಹೋಗಿದ್ದೆವು ಎಂದು ಹೇಳಿದ್ದಾರೆ. ನನಗೆ ಹೇಳಿದ್ದರೆ ನಾನು ರಕ್ಷಣೆ ವ್ಯವಸ್ಥೆ ಮಾಡುತ್ತಿದ್ದೆ ಎಂದು ಹೇಳಿದ್ದೇನೆ.
– ನಾನು ಯಾವುದೇ ತಪ್ಪು ಮಾಡಲು ಬಯಸುವುದಿಲ್ಲ. ಈಗಾಗಲೇ ಕ್ರಮ ಬದ್ಧ
ವಾಗಿ ರಾಜೀನಾಮೆ ಸಲ್ಲಿಸಿದವರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದೇನೆ. ಗುರುವಾರ ರಾಜೀನಾಮೆ ಸಲ್ಲಿಸಿದವರಿಗೆ ಇನ್ನೂ ವಿಚಾರಣೆಗೆ ಸಮಯ ನೀಡಿಲ್ಲ. ಸದ್ಯದ ಬೆಳವಣಿಗೆಗಳ ಬಗ್ಗೆ ಕಾನೂನು ತಜ್ಞರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ರಾಜ್ಯದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿರುವುದನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇನೆ.
ಜೆಡಿಎಸ್ ದೂರು ಸ್ವೀಕರಿಸಿಲ್ಲ
ಜೆಡಿಎಸ್‌ನಿಂದ ರಾಜೀನಾಮೆ ಸಲ್ಲಿಸಿರುವ ಮೂವರು ಶಾಸಕರನ್ನು ಅನರ್ಹಗೊಳಿಸುವಂತೆ ದೂರು ಸಲ್ಲಿಸಲು ಬಂದಿದ್ದರು. ದೂರು ಸಲ್ಲಿಸಲು ಸದನದ ಶಾಸಕರಾಗಿ ರಬೇಕು. ಆದರೆ, ನನಗೆ ದೂರು ನೀಡಲು ಬಂದವರು ಸದನದ ಸದಸ್ಯರಾಗಿರುವುದಿಲ್ಲ. ಹೀಗಾಗಿ ಅವರಿಗೆ ತಮ್ಮ ಪಕ್ಷದ ಶಾಸಕರ ಮೂಲಕ ದೂರು ನೀಡುವಂತೆ ಸೂಚನೆ ನೀಡಿದ್ದೇನೆಂದು ಸ್ಪೀಕರ್ ಹೇಳಿದರು.
ಮನವಿ ಆಲಿಸಿದ್ದೇನೆ: ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ನಿಯೋಗ ಬಂದು ತಮ್ಮ ಆಕ್ಷೇಪಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಯನ್ನೂ ಆಲಿಸಿದ್ದೇನೆ. ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಪಕ್ಷದ ವಿಪ್ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್ ನಾಯಕರು ಇಬ್ಬರು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಮಾಡಿರುವ ಮನವಿಗೆ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಲಿಖೀತ ವಿವರಣೆ ಸಲ್ಲಿಸುವಂತೆ ಸೂಚಿಸಿದ್ದೇನೆ. ಅವರ ವಿವರಣೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ವಿಪ್‌ಗೆ ಹೆದರಬೇಕಾಗಿಲ್ಲ
ರಾಜಿನಾಮೆ ಸಲ್ಲಿಸಿರುವ ಶಾಸಕರಿಗೆ “ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಸರ್ಕಾರದ ಪರ’ ಮತ ಚಲಾಯಿಸಬೇಕು ಎಂದು ಸೂಚಿಸಿ ವಿಪ್ ಜಾರಿ ಮಾಡಿರುವುದು “ಕಾನೂನು ಬದ್ಧ ಮತ್ತು ಕ್ರಮಬದ್ಧ’ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜೀನಾಮೆ ಕೊಟ್ಟ ಶಾಸಕರಿಗೆ ವಿಪ್ ಪಾಲನೆ ಮಾಡಬೇಕು ಎಂದು ಹೇಳುವುದು ದುರುದ್ದೇಶವಲ್ಲದೇ ಮತ್ತೇನೂ ಅಲ್ಲ. ಕೊಟ್ಟ ರಾಜೀನಾಮೆ ಅಂಗೀಕಾರ ಮಾಡುವುದು ಬಿಟ್ಟು ಅವರಿಗೆ ಅಧಿವೇಶನಕ್ಕೆ ಕಡ್ಡಾಯವಾಗಿ ಬನ್ನಿ ಎಂದು ಹೇಳುವುದು ಎಲ್ಲಾದರೂ ಉಂಟೇ. ಈ ವಿಚಾರವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಬಹುದು. ರಾಜೀನಾಮೆ ಅಂಗೀಕರಿಸಲೇಬೇಕು ಎಂದು ಸುಪ್ರೀಂಕೋರ್ಟ್ ಸ್ಪೀಕರ್‌ಗೆ ನಿರ್ದೇಶನ ಕೊಡಬಹುದೇ ಎಂಬ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ. ಎಲ್ಲವೂ ಸುಪ್ರಿಂಕೋರ್ಟ್‌ನಲ್ಲಿರುವಾಗ ಈಗ ಏನೇ ಹೇಳಿದರೂ ಅದು ಊಹಾಪೋಹ ಆಗುತ್ತದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಹೇಳುತ್ತಾರೆ.
ರಾಜೀನಾಮೆ ಕೊಟ್ಟ ಶಾಸಕರಿಗೆ ವಿಪ್ ಜಾರಿ ಮಾಡಿರುವುದು ಮೇಲ್ನೋಟಕ್ಕೆ “ಕಾನೂನು ಸಂದಿಗª’ಎಂದು ಹೇಳಬಹು ದಾದರೂ, ಪರಿಹಾರ ಕಂಡುಕೊಳ್ಳುವಂತಹ ಸಮಸ್ಯೆಯೇನು ಅಲ್ಲ. ಇಲ್ಲಿ ವಿಪ್ ಉಲ್ಲಂಘನೆ ಅನ್ನುವುದಕ್ಕಿಂತ ಮುಂಚೆ, ವಿಪ್ ಜಾರಿಯ ಕಾನೂನು ಬದಟಛಿತೆ ಪ್ರಶ್ನಾರ್ಹ. “ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಈಗಾಗಲೇ ಸ್ಪೀಕರ್ ಅವರು ಅದನ್ನು ಅಂಗೀಕರಿಸಬೇಕಿತ್ತು. ಆದರೆ, ಇನ್ನೂ ಅಂಗೀಕಾರವಾಗಿಲ್ಲದ ಕಾರಣ, ವಿಪ್ ಪಾಲನೆ ಮಾಡಲು ಸಾಧ್ಯ ವಿಲ್ಲ’ ಎಂದು ಹೇಳಿ ಶಾಸಕರು ವಿಪ್ ಉಲ್ಲಂಘನೆ ಯಿಂದಾಗುವ ಪರಿಣಾಮಗ ಳಿಂದ ರಕ್ಷಣೆ ಪಡೆದುಕೊಳ್ಳುವ ಅವಕಾಶವೂ ಇದೆ ಎಂದು ಸುಪ್ರೀಂಕೋರ್ಟ್ ವಕೀಲ ಕೆ.ವಿ.ಧನಂಜಯ್ ಹೇಳುತ್ತಾರೆ.
ಇಂದಿನಿಂದ ಅಧಿವೇಶನ
ರಾಜಕೀಯ ಅಸ್ಥಿರತೆ ನಡುವೆಯೇ ರಾಜ್ಯ ವಿಧಾನಮಂಡಲದ ಅಧಿವೇಶನ ಶುಕ್ರವಾರದಿಂದ ಪ್ರಾರಂಭವಾಗಲಿದೆ. ಮಧ್ಯಾಹ್ನ12.30ಕ್ಕೆ ಅಧಿವೇಶನ ಆರಂಭವಾಗಲಿದೆ. ಜುಲೈ 26ರವರೆಗೆ ಅಧಿವೇಶನ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಆದರೆ,ಹದಿನಾಲ್ಕು ಶಾಸಕರು ರಾಜೀನಾಮೆಯಿಂದ ಸರ್ಕಾರಕ್ಕೆ ಕಂಟಕ
ಎದುರಾ ಗಿದ್ದು ಎಷ್ಟು ದಿನ ಅಧಿವೇಶನ ನಡೆಯಲಿದೆ. ಸರ್ಕಾರ ಉಳಿಯುತ್ತಾ? ಪತನವಾಗುತ್ತಾ ಎಂಬ ಪ್ರಶ್ನೆಗಳೂ ಮೂಡಿವೆ.
ರಮೇಶ ಕುಮಾರ ಅವರು ಶಾಸಕರ ರಾಜೀನಾಮೆ ಅಂಗೀಕಾರ ಮಾಡುತ್ತಿಲ್ಲ. ಈ ಬೆಳವಣಿಗೆ ನೋಡಿದರೆ ಅವರು ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರಾ
ಎನ್ನುವ ಪ್ರಶ್ನೆ ಕಾಡುತ್ತಿದೆ.
– ಜಗದೀಶ ಶೆಟ್ಟರ್, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.