ನಿರಂತರ ಕಾಮಗಾರಿ ಪ್ರಗತಿಯಲ್ಲಿದೆ!
Team Udayavani, Jul 12, 2019, 7:50 AM IST
ಚಿತ್ರಗಳು: ಅಕ್ರಂ ಚೌಧುರಿ
ಬೆಂಗಳೂರು: ಇವು ದುರಸ್ತಿ ರಸ್ತೆಗಳು. ಇಲ್ಲಿ ಸದಾ ಒಂದರ ಹಿಂದೊಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇದರ ಬಿಸಿ ಆ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತಟ್ಟುತ್ತಿದೆ. ಸಂಚಾರದಟ್ಟಣೆ, ಅಪಘಾತಗಳ ಸರಣಿ, ವಾಯು ಮಾಲಿನ್ಯ ಇಲ್ಲಿ, ಉಳಿದ ರಸ್ತೆಗಳಿಗಿಂತ ಹೆಚ್ಚಾಗಿರುತ್ತದೆ.
ಸಜ್ಜನ ರಾವ್ ವೃತ್ತ, ಜೆ.ಸಿ ರಸ್ತೆ, ಆಂಜನೇಯಸ್ವಾಮಿ ಮತ್ತು ವಾಸವಿ ದೇವಸ್ಥಾನದ ರಸ್ತೆಗಳಲ್ಲಿ ವೈಟ್ ಟಾಪಿಂಗ್, ಕೇಬಲ್, ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಸೇರಿ ‘ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಫಲಕಗಳು ಎದುರಾಗುತ್ತವೆ. ಇವೆಲ್ಲವೂ ಬಂದು ಸೇರುವುದು ಸಜ್ಜನ್‌ರಾವ್ ವೃತ್ತದ ರಸ್ತೆಗೆ. ಈ ಮಧ್ಯೆ ರಸ್ತೆಗಿಳಿದು ವಾಹನ ಸವಾರರನ್ನು ಆಮಂತ್ರಿಸುವ ವ್ಯಾಪಾರಿಗಳ ಕಿರಿಕಿರಿ ಬೇರೆ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿಗಳು ಈ ಮಾರ್ಗದಲ್ಲೇ ಹಾದುಹೋಗುತ್ತಾರೆ. ಒಮ್ಮೆ ರಸ್ತೆ ಬದಿ ಕಣ್ಣು ಹಾಯಿಸಿದರೆ, ಚಿತ್ರಣ ಬದಲಾಗಬಹುದು. ಆದರೆ, ಈ ಪ್ರಯತ್ನ ಇದುವರೆಗೆ ಆಗಿಲ್ಲ.
ಫುಟ್ಪಾತ್ ಮಾಯ: ಸಜ್ಜನ ರಾವ್ ಸರ್ಕಲ್ ರಸ್ತೆಯ ಕಾಮಗಾರಿಯನ್ನು ಕಳೆದ ವರ್ಷ ಪ್ರಾರಂಭಿಸಲಾಗಿತ್ತು. ಈ ಹಿಂದೆ ರಸ್ತೆಗಳಲ್ಲಿ ಹಲವು ಹಂತದ ಕಾಮಾಗಾರಿಗಳು ನಡೆದಿದ್ದವು. ವೈಟ್ ಟಾಪಿಂಗ್ ಮುಗಿದ ಮೇಲಾದರೂ ಪರಿಹಾರ ಸಿಗಲಿದೆ ಎಂದು ಜನ ನಿರೀಕ್ಷೆಯಲ್ಲಿದ್ದರು. ಆದರೆ, ಈ ಕಾಮಗಾರಿ ಪ್ರಾರಂಭವಾದ ನಂತರ, ಅಲ್ಲಿದ್ದ ಪಾದಚಾರಿ ಮಾರ್ಗವೂ ಮಾಯವಾಗಿದೆ.
ಅಂದಹಾಗೆ ಬಸಪ್ಪ ಸರ್ಕಲ್ನಿಂದ ಬನಶಂಕರಿ ಬಸ್ ನಿಲ್ದಾಣದವರೆಗೆ 4.55 ಕಿ.ಮೀ. ರಸ್ತೆಯ ಎರಡನೇ ಹಂತದ ವೈಟ್ ಟಾಪಿಂಗ್‌ನಲ್ಲಿ ಸಜ್ಜನ ರಾವ್ ವೃತ್ತದ ರಸ್ತೆ ಸಹ ಸೇರಿದೆ. ವೈಟ್ ಟಾಪಿಂಗ್ ಕಾಮಗಾರಿಗೆ ಒಂದು ಕಿ.ಮೀ.ಗೆ 7ರಿಂದ 8 ಕೋಟಿ ರೂ. ವೆಚ್ಚವಾಗುತ್ತದೆ. ಈ ರಸ್ತೆಗಳ ಎರಡೂ ಬದಿಯಲ್ಲಿ 1.2 ಅಥವಾ 1.5 ಮೀಟರ್ ಪಾದಚಾರಿ ಮಾರ್ಗವನ್ನು ಆಯಾ ರಸ್ತೆಗಳ ವಿಸ್ರ್ತೀಣಕ್ಕೆ ಅನುಗುಣವಾಗಿ ಬಿಡಲಾಗುತ್ತದೆ. ಸಜ್ಜನ ರಾವ್ ಸರ್ಕಲ್ನಲ್ಲಿ ಇದು ತದ್ವಿರುದ್ಧ. ಇಲ್ಲಿ ಪಾದಚಾರಿಗಳು ವಾಹನ ಸವಾರರೊಂದಿಗೆ ಪೈಪೋಟಿಗಿಳಿಯುತ್ತಾರೆ.
ಕಳೆದ ಒಂದು ವರ್ಷದಿಂದ ವೈಟ್ ಟಾಪಿಂಗ್ ಮತ್ತು ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳಿಗೆ ರಸ್ತೆಯನ್ನು ಅಗೆಯುವ, ಮುಚ್ಚುವ ಪ್ರಹಸನಗಳ ನಡುವೆ ಸಾರ್ವಜನಿಕರು ಹೈರಾಣಾಗುತ್ತಿ ದ್ದಾರೆ. ಪುರಭವನ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್ ಮತ್ತು ಎಂ.ಜಿ. ರಸ್ತೆಗಳಿಗೆ ಹೋಗುವವರು ಬಹುತೇಕ ಇದೇ ಮಾರ್ಗವನ್ನು ಬಳಸುತ್ತಾರೆ. ಹೀಗಾಗಿ, ಕಾಮಗಾರಿ ಪ್ರಗತಿ ಮಂದಗತಿಯಲ್ಲಿ ಸಾಗುವುದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
- ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.