ಕೈವಾರದಲ್ಲಿ 14ರಿಂದ 72 ಗಂಟೆ ಸಂಗೀತೋತ್ಸವ
Team Udayavani, Jul 12, 2019, 11:21 AM IST
ಚಿಕ್ಕಬಳ್ಳಾಪುರ: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯ ಶ್ರೀ ಕ್ಷೇತ್ರ ಕೈವಾರ ಯೋಗಿ ನಾರೇಯಣ ಮಠದಲ್ಲಿ ಜುಲೈ 14 ರ ಗುರು ಪೌರ್ಣಮಿಯಂದು ಸಮಾವೇಶಗೊಳ್ಳಲಿರುವ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಸತತ 72 ಗಂಟೆ ನಿರಂತರ ಸಂಗೀತೋತ್ಸವ ಹಾಗೂ ಗುರು ಮಹೋತ್ಸವಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು, ಸಂಗೀತ ಪ್ರೇಮಿಗಳಿಗೆ ರಸದೌತಣ ಉಣಬಡಿಸಲು ಕೈವಾರ ಕ್ಷೇತ್ರ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.
ರಾರಾಜಿಸುತ್ತಿವೆ ಫ್ಲೆಕ್ಸ್, ಬ್ಯಾನರ್: ದಕ್ಷಿಣ ಭಾರತ ದಲ್ಲಿಯೇ ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯಲಿರುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವಕ್ಕೆ ಶ್ರೀ ಕೈವಾರ ಮಠ ಅಗತ್ಯ ಸಿದ್ಧತೆ ಗಳನ್ನು ಕೈಗೊಳ್ಳುತ್ತಿದ್ದು, ಮಹೋತ್ಸವಕ್ಕೆ ಭಕ್ತರನ್ನು ಹಾಗೂ ಸಂಗೀತ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸ್ವಾಗತ ಕಮಾನುಗಳು, ಫ್ಲೆಕ್ಸ್, ಬ್ಯಾನರ್‌ಗಳು ಜಿಲ್ಲಾ ದ್ಯಂತ ರಾರಾಜಿಸುತ್ತಿವೆ.
ಕೈವಾರ ಕ್ಷೇತ್ರದಲ್ಲಿ ಸಂಭ್ರಮ: ಗುರು ಪೌರ್ಣಮಿ ಯೆಂದು ಗುರುಗಳಿಗೆ ನಾದೋಪಾಸನೆಯನ್ನು ಸಮ ರ್ಪಿಸಲು ಸಜ್ಜಾಗುತ್ತಿರುವ ಕೈವಾರ ಮಠದಲ್ಲಿ ಈಗಾ ಗಲೇ ಬೃಹತ್ ಪ್ರಮಾಣದಲ್ಲಿ ಪೆಂಡಾಲ್ ನಿರ್ಮಾಣ ಕಾರ್ಯ ಶುರುವಾಗಿದ್ದು, ಸಂಗೀತೋತ್ಸವಕ್ಕೆ ಪೂರಕ ವಾಗಿ ವಿವಿಧ ಗಾಯನ ಕಚೇರಿಗಳನ್ನು ನಡೆಸಿ ಕೊಡಲು ವೇದಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಸುಮಾರು 100 ಕ್ಕೂ ಹೆಚ್ಚು ಮಂದಿ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದು, ಕೈವಾರ ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿದೆ.
ಹಳ್ಳಿ ಹಳ್ಳಿಗೂ ಆಹ್ವಾನ ಪತ್ರಿಕೆ: ಕೈವಾರದ ಶ್ರೀ ಯೋಗಿ ನಾರೇಯಣ ಮಠ ಈ ವರ್ಷ 20ನೇ ವರ್ಷದ ಗುರು ಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವಕ್ಕೆ ಅಣಿಯಾಗುತ್ತಿದ್ದು, ಈಗಾಗಲೇ ಉತ್ಸವದ ಆಹ್ವಾನ ಪತ್ರಿಕೆಗಳು ಮುದ್ರಣಗೊಂಡು ಹಳ್ಳಿ ಹಳ್ಳಿಗೂ ತಲುಪಿವೆ. ಗುರು ಪೂಜಾ ಹಾಗೂ ಸಂಗೀತೋತ್ಸವದ ಬಗ್ಗೆ ವ್ಯಾಪಕ ಪ್ರಚಾರ ನಡೆಸಲು ಪೋಸ್ಟರ್‌ಗಳನ್ನು ಜಿಲ್ಲಾದ್ಯಂತ ಅಂಟಿಸಲಾಗಿದೆ.
20 ವರ್ಷಗಳಿಂದ ಆಯೋಜನೆ: ದೇಶದ ನಾನಾ ಭಾಗಗಳಿಂದ ಆಗಮಿಸುವ ಸಂಗೀತ ವಿದ್ವಾಂಸರಿಗೆ ಮತ್ತು ಕಲಾವಿದರಿಗೆ ಅನ್ನದಾಸೋಹ ಸೇರಿದಂತೆ ವಸತಿ ಸೌಕರ್ಯಗಳನ್ನು ಶ್ರೀ ಮಠದಿಂದ ನೆರವೇರಿಸ ಲಾಗು ತ್ತಿದ್ದು, ಆಷಾಢ ಮಾಸದ ಹುಣ್ಣಿಮೆಯೆಂದು ಗುರು ಗಳನ್ನು ಸ್ಮರಿಸುವ ಸಂಪ್ರದಾಯವನ್ನು ಕೈವಾರ ಮಠ ಸತತ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.
3 ಲಕ್ಷಕೂ ಅಧಿಕ ಸಂಗೀತ ಪ್ರೇಮಿಗಳು ಭೇಟಿ: ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಹಲವಾರು ಸಂಗೀತ ವಿದ್ವಾಂಸರನ್ನು ಮತ್ತು ಸಂಗೀತದ ನಾನಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಆನಂದಿಸುವ ಸದಾವಕಾಶವನ್ನು ಯೋಗಿನಾರೇಯಣ ಮಠದಲ್ಲಿ ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳು ಕೈವಾರಕ್ಕೆ ಲಗ್ಗೆ ಹಾಕಲಿದ್ದಾರೆ.
ಮೂರು ದಿನಗಳ ಸಂಗೀತೋತ್ಸವದಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನೇಕ ಸಂಗೀತ ದಿಗ್ಗಜರು ಈ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಸಿಮೆಂಟ್ ಸೀಟ್ ಅಳವಡಿಕೆ: ಮೂರು ದಿನಗಳ ಗುರು ಪೂಜಾ ಹಾಗೂ ಸಂಗೀತೋತ್ಸವಕ್ಕೆ ಯೋಗಿ ನಾರೇಯಣ ಮಠದ ಸಭಾಂಗಣವನ್ನು ವಿಶೇಷವಾಗಿ ಸಿದ್ಧತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಸಭಾಂ ಗಣದ ಮುಂದೆಯೂ ಮಳೆಗಾಲ ಆಗಿರುವುದರಿಂದ ಭಕ್ತರಿಗೆ ಅನುಕೂಲವಾಗುವಂತೆ ವಿಶಾಲ ಸಭಾಂಗಣ ನಿರ್ಮಿಸಿ ಸಿಮೆಂಟ್ ಸೀಟ್ ಅಳವಡಿಸಲಾಗುತ್ತಿದೆ.
ಭಕ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಆಯೋಜಿ ಸಲಾಗಿದೆ ಎಂದು ಕೈವಾರ ಶ್ರೀ ಯೋಗಿನಾರೇಯಣ ಮಠದ ಆಡಳಿತಾಧಿ ಕಾರಿ ಕೆ.ಲಕ್ಷ್ಮೀನಾರಾಯಣ್ ತಿಳಿಸಿದರು.
● ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.