ಪರಿಸರ ನಾಶದಿಂದ ಬರದ ಕಾರ್ಮೋಡ: ಡಾ| ಮಂಜುನಾಥ್
ಮಂಜೇಶ್ವರ ಗಿಳಿವಿಂಡು ಕೇಂದ್ರದಲ್ಲಿ ಗಿಡ ನೆಡುವ ಕಾರ್ಯಕ್ರಮ
Team Udayavani, Jul 13, 2019, 5:18 AM IST
ಮಂಜೇಶ್ವರ: ಹಿಂದೆಲ್ಲ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದ ಕರ್ನಾಟಕದ ಮಲೆನಾಡು, ದಕ್ಷಿಣ ಕನ್ನಡ, ಕೇರಳ ರಾಜ್ಯಗಳಲ್ಲಿ ಇತ್ತೀಚೆಗೆ ಮಳೆ ಕಡಿಮೆಯಾಗಿ ಬರದ ಕಾರ್ಮೋಡ ಕವಿದಿದೆ. ಕಳೆದ ವರ್ಷ ಕೇರಳವೂ ಕೊಡಗು ಜಿಲ್ಲೆಯೂ ಅತಿವೃಷ್ಟಿಯಿಂದ ಕಂಗಾಲಾದುವು .ಈಗ ಬರದ ಭೀತಿ ಕಾಡುತ್ತಿದೆ ಎಂಬುದಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ್ ಹೇಳಿದರು.
ಭತ್ತದ ಗದ್ದೆಗಳು ವರ್ಷದಿಂದ ವರ್ಷಕ್ಕೆ ಮಾಯಾವಾಗಿ ಭೂಮಿಗೆ ಸಾಕಷ್ಟು ನೀರು ಇಂಗುವುದಿಲ್ಲ. ಅಂತರ್ಜಲ ಶೋಷಣೆಯಿಂದ ಅದರ ಮಟ್ಟವು ಆತಂಕಕಾರಿಯಾಗಿ ಕುಸಿದಿದೆ. ಮಳೆನಾಡಾಗಿದ್ದ ಪ್ರದೇಶಗಳು ಬರಗಾಲ ಪೀಡಿತವಾಗುವ ದಿನ ಬರಲಿದೆ. ಮರಗಿಡಗಳ ನಾಶ ಕಾಡುಗಳ ಅತಿಕ್ರಮಣ ಇದಕ್ಕೆ ಮುಖ್ಯ ಕಾರಣಗಳು. ಪ್ರಪಂಚದ ಜೀವ ಜಾಲಗಳಿಗೆಲ್ಲ ಶುದ್ಧ ಗಾಳಿಯೂ ಒಳ್ಳೆಯ ನೀರು ಬೇಕಾಗಿದೆ. ಇವೆರಡೂ ಇರಬೇಕಾದರೆ ಮಳೆ ಬರಬೇಕು. ಮರಗಿಡಗಳು ಬೆಳೆಯಬೇಕು, ಇಳೆ ತಣಿಯಬೇಕು. ಇದಕ್ಕೆ ತುರ್ತಾಗಿ ಸೂಕ್ತ ಯೋಜನೆಗಳನ್ನು ಜಾರಿ ಮಾಡಬೇಕು ಭೂಮಿಯೊಳಗೆ ಸಾಕಷ್ಟು ನೀರು ಇಂಗಬೇಕೆಂದು ಡಾ| ಸಿ.ಎನ್. ಮಂಜುನಾಥ್ ಹೇಳಿದರು. ಮಂಜೇಶ್ವರ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನಿರ್ವಹಿಸಿ ಈ ರೀತಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೆ.ಆರ್. ಜಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.| ಕಮಲಾಕ್ಷ ಕೆ., ಸಂಕಬೈಲು ಸತೀಶ ಆಡಪ ಪ್ರೊ| ವಾಸುದೇವ ಕೀತೇìಶ್ವರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.