ಉಡುಪಿಯಲ್ಲಿ ತಪ್ತಮುದ್ರಾ ಧಾರಣೆಗೆ ಭಕ್ತರ ಸರತಿ ಸಾಲು
Team Udayavani, Jul 13, 2019, 5:23 AM IST
ಪಲಿಮಾರು ಕಿರಿಯ ಸ್ವಾಮೀಜಿ ಯವರು ಸನ್ಯಾಸ ಸ್ವೀಕರಿಸಿದ ಬಳಿಕ ಮೊದಲ ಬಾರಿ ಗುರುಗಳಿಂದ ಮುದ್ರಾ ಧಾರಣೆ ಮಾಡಿಸಿ ಕೊಂಡರು.
ಉಡುಪಿ: ಉಡುಪಿ ಆಸುಪಾಸಿನಲ್ಲಿ ಶುಕ್ರವಾರ ಪ್ರಥಮನ ಏಕಾದಶಿಯಂಗವಾಗಿ ಮಠಾಧೀಶರು ತಪ್ತಮುದ್ರಾಧಾರಣೆ ನಡೆಸಿದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಬೆಳಗ್ಗಿನ ಮಹಾ ಪೂಜೆಯನ್ನು ಬೇಗ ಮುಗಿಸಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಅದಮಾರು ಮತ್ತು ಶ್ರೀ ಪಲಿಮಾರು ಕಿರಿಯ ಶ್ರೀಪಾದರು ಮುದ್ರಾ ಧಾರಣೆ ನಡೆಸಿದರು. ಶ್ರೀಕೃಷ್ಣಮಠದಲ್ಲಿ ದೊಡ್ಡ ಸರತಿ ಸಾಲು ಕಂಡುಬಂತು.
ಶ್ರೀಅದಮಾರು ಮಠಾಧೀಶರು ಪೆರ್ಡೂರು ದೇವಸ್ಥಾನದಲ್ಲಿ ತಪ್ತಮುದ್ರಾಧಾರಣೆ ನಡೆಸಿದ ಬಳಿಕ ಅದಮಾರು ಮಠದಲ್ಲಿ ನೂರಾರು ಜನರಿಗೆ ತಪ್ತಮುದ್ರಾಧಾರಣೆ ನಡೆಸಿ ಬಳ್ಳಾರಿಯಲ್ಲಿ ಮುದ್ರಾಧಾರಣೆ ನಡೆಸಲು ನಿರ್ಗಮಿಸಿದರು. ಶ್ರೀಬಾಳೆಗಾರು ಶ್ರೀಪಾದರು ಕೊಡವೂರು ಸಮೀಪದ ಕಂಗೂರು ಮಠದಲ್ಲಿ ಬೆಳಗ್ಗೆ 5 ಗಂಟೆಗೆ ಮುದ್ರಾಧಾರಣೆ ನಡೆಸಿದರು. ಬಳಿಕ ಪಡುಬಿದ್ರಿ, ಅಜೆಕಾರು, ಮೂಲ ಪಲಿಮಾರು ಮಠದಲ್ಲಿ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗೆ ಮುನ್ನ ವೈದಿಕರು ಸುದರ್ಶನ ಹೋಮವನ್ನು ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು
Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು
New Delhi: ಹುಸಿ ಬಾಂಬ್ ಕರೆ ಪತ್ತೆಗೆ ಇಂಟರ್‌ಪೋಲ್ ಮೊರೆ!
Chandigarh: ಕೋಟೆ ಕಟ್ಟಿದ ಗುತ್ತಿಗೆದಾರನಿಗೆ ರೋಲೆಕ್ಸ್ ವಾಚ್ ಉಡುಗೊರೆ
Pune: 300ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿ ಟೆಸ್ಲಾದಲ್ಲಿ ಉದ್ಯೋಗ ಪಡೆದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.