ಕಾನೂನಿಗೆ ಅಪಚಾರ ಎಸಗಲ್ಲ: ಸ್ಪೀಕರ್
Team Udayavani, Jul 13, 2019, 3:05 AM IST
ಬೆಂಗಳೂರು: ನಾನು ಸಂವಿಧಾನದಡಿ ನೇಮಕಗೊಂಡ ಪ್ರತಿನಿಧಿ, ನನಗೆ ಸಂವಿಧಾನವೇ ಮುಖ್ಯ. ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ. ಅದರಿಂದ ನಾನು ವಿಮುಖನಾಗುವುದಿಲ್ಲ. ಸಂವಿಧಾನದಲ್ಲಿ ಹೇಳಿರುವ ನಿಯಮಗಳಿಗೆ ನಾನು ಅಪಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಶಾಸಕರು ಮತ್ತೂಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಗೆ ವಿವರಣೆ ನೀಡುವಂತೆ ಕ್ರಮಸಂಖ್ಯೆ ಪ್ರಕಾರ ದಿನಾಂಕ ಮತ್ತು ಸಮಯ ನೀಡಲಾಗಿದೆ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸೋಣ. ತಪ್ಪು ತೀರ್ಪು ನೀಡಿದರೆ, ಅದರ ಬಗ್ಗೆ ವಿವರಣೆ ಕೇಳ್ಳೋಣ, ದೇಶದಲ್ಲಿ ಒಂದು ಸುಪ್ರೀಂಕೋರ್ಟ್ ಇರಬೇಕು, ದೇಶ ಉಳಿಯಬೇಕು, ಶಾಸಕಾಂಗ, ನ್ಯಾಯಾಂಗ ಕೂಡ ಉಳಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಕೈಮುಗಿಯುವ ಸೋಗಿನಲ್ಲಿ ಗಾಂಧೀಜಿಯನ್ನು ಕೊಂದ ದೇಶವಿದು, ಇನ್ನು ರಮೇಶ್ ಕುಮಾರ್ ಅವರನ್ನು ಬಿಡುತ್ತಾರಾ? ಗಾಂಧಿಯನ್ನು ಕೊಂದರೂ ಅವರ ತತ್ವವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗಿಲ್ಲ. ನಾನು ಗಾಂಧಿ ತತ್ವದಡಿ ಬದುಕುತ್ತಿರುವ ವ್ಯಕ್ತಿ. ನನ್ನ ವಿರುದ್ಧವೂ ಬಹಳ ದಿನಗಳಿಂದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜೀನಾಮೆ ನೀಡಿರುವ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಏನು ಬಂದಿದೆ ಎಂದು ನನಗೆ ಗೊತ್ತಿಲ್ಲ.
-ರಮೇಶ್‌ಕುಮಾರ್, ವಿಧಾನಸಭಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.