ಗೋಪಾಡಿ ಸಂಪೂರ್ಣ ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್ ತೆರವು ವಿಳಂಬ
ಭಯದ ಕರಿ ನೆರಳಲ್ಲಿ ಬದುಕುವ ನಿವಾಸಿಗಳು
Team Udayavani, Jul 13, 2019, 5:02 AM IST
ಕೋಟೇಶ್ವರ: ಗೋಪಾಡಿಯ ರಾ.ಹೆದ್ದಾರಿಯ ತಿರುವಿನಲ್ಲಿರು ನಿರುಪಯೋಗಿ ನೀರು ಸರಬರಾಜು ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಇದನ್ನು ತೆರವು ಗೊಳಿಸದಿದ್ದಲ್ಲಿ ಸನಿಹದಲ್ಲೇ ವಾಸವಾಗಿರುವ ಬಡಕುಟುಂಬವು ಭಯದ ವಾತವರಣದಲ್ಲಿ ಕಾಲಕಳೆಯ ಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ನೀರು ಸರಬರಾಜು ಯೋಜನೆಯಡಿ 2983-1984ರ ಕಾಲಘಟ್ಟದಲ್ಲಿ ನಿರ್ಮಸಲಾಗಿರುವ ಓವರ್ ಹೆಡ್ ಟ್ಯಾಂಕ್ ಅಂದು ಬೀಜಾಡಿ-ಗೋಪಾಡಿ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯಾಗಿತ್ತು. ಆದರೆ ಬೀಜಾಡಿ ಹಾಗೂ ಗೋಪಾಡಿ ಗ್ರಾ.ಪಂ ಪ್ರತ್ಯೇಕವಾದ ನಂತರ ಈ ಓವರ್ ಹೆಡ್ ವಾಟರ್ ಟ್ಯಾಂಕ್ ನೀರಿನ ಬಳಕೆ ಕಡಿಮೆಯಾಯಿತು. ಎರಡು ಗ್ರಾ.ಪಂಗಳು ಪ್ರತ್ಯೇಕ ವಾಟರ್ ಟ್ಯಾಂಕ್ ನಿರ್ಮಿಸಿದವು.
ಶಿಥಿಲಗೊಂಡ ವಾಟರ್ ಟ್ಯಾಂಕ್ ತೆರವಿಗ್ಯಾಕೆ ವಿಳಂಬ
ಸ್ಥಳೀಯ ನಿವಾಸಿಗಳು ಗ್ರಾ.ಪಂ ಸಹಿತ ಜಿಲ್ಲಾಡಳಿತದ ಗಮನಸೆಳೆದಿದ್ದರೂ ಅದನ್ನು ತೆರವುಗೊಳಿಸು ಇಲಾಖೆ ಮೀನಾ ಮೇಷ ತೋರುತ್ತಿರುವುದು ನಿರ್ಲಕ್ಷ್ಯ ತನಕ್ಕೆ ಹಿಡಿದ ಕನ್ನಡಿಯಾಗಿದೆ. ಪರ್ಯಾಯ ವ್ಯವಸ್ಥೆಗೊಳಿಸದಿದ್ದಲ್ಲಿ ಅಷ್ಟೊಂದು ಎತ್ತರದ ಸಂಪೂರ್ಣ ಶಿಥಿಲಗೊಂಡ ಗಾಳಿಗೆ ನಲುಗುತ್ತಿರುವ ವಾಟರ್ ಟ್ಯಾಂಕ್ ಇನ್ನೇನು ದಿನಗಳಿಲ್ಲಿ ಕುಸಿದು ಬಿದ್ದು ಭಾರೀ ದುರಂತಕ್ಕೆ ಎಡೆಮಾಡಲಿದೆ.
ತುರ್ತು ಕ್ರಮ ಕೈಗೊಳ್ಳಿ
ಅದೆಷ್ಟೋ ಬಾರಿ ಜಿಲ್ಲಾಡಳಿತದ ಗಮನ ಸೆಳೆದಿದ್ದರೂ ಈ ವರೆಗೆ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಇನ್ನಾದರೂ ಕ್ರಮ ಕೈಗೊಳ್ಳದಿದ್ದಲ್ಲಿ ದುರಂತ ಖಂಡಿತ.
-ರಾಜು, ಬೆಟ್ಟಿನ ಮನೆ, ಗ್ರಾಮಸ್ಥರು
ಆರ್ಥಿಕ ಸಂಪನ್ಮೂಲ ಕೊರತೆ
ಜಿಲ್ಲಾ ಧಿಕಾರಿಗಳೂ ಸಹಿತ ಸಂಬಂಧ ಪಟ್ಟ ಇಲಾಖೆಗಳ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ ವಾಟರ್ ಟ್ಯಾಂಕ್ ತೆರವುಗೊಳಿಸಲು ಸುಮಾರು 3 ಲಕ್ಷ ರೂ. ವೆಚ್ಚ ತಗಲುವುದು ಎಂದು ಅಂದಾಜಿಸಲಾಗಿದೆ. ಅಷ್ಟೊಂದು ಖರ್ಚು ನಿಭಾಯಿಸಲು ಆರ್ಥಿಕ ಸಂಪನ್ಮೂಲ ಕೊರತೆಯಿದೆ.
– ಸರಸ್ವತಿ ಪುತ್ರನ್, ಅಧ್ಯಕ್ಷರು, ಗೋಪಾಡಿ ಗ್ರಾ.ಪಂ.
ಪೂರಕ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಬದ್ಧ
ತೆರವು ಕಾಮಗಾರಿಯ ನಿರ್ವಹಣೆ ಪಂಚಾಯಿತ್ ವಹಿಸಬೇಕು. ಅದಕ್ಕೇ ಪೂರಕ ವ್ಯವಸ್ಥೆ ಒದಗಿಸುವಲ್ಲಿ ಜಿಲ್ಲಾಡಳಿತ ಬದ್ಧ.
-ಸಿಂಧು ಬಿ.ರೂಪೇಶ್, ಸಿ.ಎಸ್., ಜಿಲ್ಲಾಡಳಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.