ಒಮ್ಮೆ ವೆಚ್ಚ-ಅತ್ಯಲ್ಪ ಶ್ರಮ-ಅಧಿಕ ಲಾಭ


Team Udayavani, Jul 13, 2019, 5:00 AM IST

f-10

ಬಂಟ್ವಾಳ: ಸಂಬಾರ ಬೆಳೆಗಳ ರಾಜ ಎಂದೇ ಕರೆಯಲ್ಪಡುವ ಕರಿಮೆಣಸು ಬಳ್ಳಿಯನ್ನು ಬಿ. ಕಸ್ಬಾ ಪ್ರಗತಿಪರ ಕೃಷಿಕ ಪಿಯೂಸ್‌ ಎಲ್‌. ರೋಡ್ರಿಗಸ್‌ ವಿಯೆಟ್ನಾಂ ಮಾದರಿಯಲ್ಲಿ ಬೆಳೆಸಿದ್ಧಾರೆ.

ವಿಯೆಟ್ನಾಂನಲ್ಲಿ ಮರ ಕಡಿದು ನಿರ್ದಿಷ್ಟ ಎತ್ತರದ ಕಂಬ ಮಾಡಿ ಅದನ್ನು ನೆಲದಲ್ಲಿ ಹೂತು ಕರಿಮೆಣಸು ಕೃಷಿ ಪೂರ್ಣ ವೈಜ್ಞಾನಿಕ ಕ್ರಮದಲ್ಲಿ ಮಾಡುತ್ತಾರೆ. ಇಲ್ಲಿ ಇನ್ನೂ ವಿಶಿಷ್ಟ ಎನ್ನುವಂತೆ ಅನುಪಯುಕ್ತ ಸಿಮೆಂಟ್‌ ಕಂಬಗಳನ್ನು ಬಳಸಿದ್ದಾರೆ. ಕಂಬಕ್ಕೆ 5 ಅಡಿಗಳಷ್ಟು ಎತ್ತರಕ್ಕೆ ನೆಟ್‌ ಬೇಲಿ ಸುತ್ತಿ, ಅದರ ಒಳಗೆ ತೆಂಗಿನ ಸಿಪ್ಪೆಗಳ ಹುಡಿ ತುಂಬಿಸಿದ್ದಾರೆ. ಕಂಬದ ಬುಡದಲ್ಲಿ ಬಳ್ಳಿಗಳನ್ನು ನೆಟ್ಟು ಹಬ್ಬಿಸಿದ್ದಾರೆ.

ದೀರ್ಘಾವಧಿ ಉಳಿದು ಫಸಲು ನೀಡುವ ಈ ಕೃಷಿಗೆ ಒಮ್ಮೆ ಮಾತ್ರ ವೆಚ್ಚ ಮಾಡಿ ಅನಂತರದ ದಿನಗಳಲ್ಲಿ ಅತ್ಯಲ್ಪ ಶ್ರಮದಿಂದ ಅಧಿಕ ಲಾಭ ಪಡೆಯ ಬಹುದು. ಆರೈಕೆ ಶ್ರಮ, ವೆಚ್ಚ. ವಿಯೆಟ್ನಾಂನಲ್ಲಿ ಕಂಬಗಳನ್ನು ಹಾಕಿ ವೈಜ್ಞಾನಿಕ,ತಾಂತ್ರಿಕ ಕ್ರಮದಲ್ಲಿ ಕರಿಮೆಣಸು ಬೆಳೆಯುತ್ತಾರೆ. ಅಲ್ಲಿನ ಕರಿಮೆಣಸು ಗುಣಮಟ್ಟಕ್ಕೂ ಹೆಸರಾಗಿದೆ ಎನ್ನುತ್ತಾರೆ ಪಿಯೂಸ್‌ ಎಲ್‌. ರೋಡ್ರಿಗಸ್‌.

ಪ್ರಯೋಜನ
ಕರಿಮೆಣಸಿನ ಬಳ್ಳಿಯನ್ನು ನೆಲದಲ್ಲಿ ನೆಟ್ಟು ಯಾವುದೇ ಮರಕ್ಕೆ ಹಬ್ಬಿಸುವುದು ರೂಢಿಗತ ಕ್ರಮ. ಇದು ವರ್ಷಕ್ಕೆ 2ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಹುದು. ವಿಯೆಟ್ನಾಂ ಮಾದರಿಯಲ್ಲಿ ಸುಮಾರು 5 ಅಡಿಗಳಷ್ಟು ಎತ್ತರಕ್ಕೆ ಕೇವಲ 6 ತಿಂಗಳ ಅವಧಿಯಲ್ಲಿ ಬೆಳೆದಿರುವುದು ವಿಶೇಷತೆ.

ಗಿಡ ಬೆಳೆದಂತೆ ಕಂಬಕ್ಕೆ ಮತ್ತೆ ಪ್ಲಾಸ್ಟಿಕ್‌ ನೆಟ್‌ ಸುತ್ತುವ ಮೂಲಕ ಶೀಘ್ರ ಮತ್ತಷ್ಟು ಮೇಲಕ್ಕೆ ಹಬ್ಬಲು ಅನುಕೂಲ ಆಗುತ್ತದೆ. ಮರಕ್ಕೆ ಬಳ್ಳಿ ಹಬ್ಬಿಸಿದಾಗ ಸ್ವಾಭಾವಿಕವಾಗಿ ಅದನ್ನು ಕೆಡವುವ ಪ್ರಯತ್ನ ಮೂಲ ಮರದಲ್ಲಿ ನಡೆಯುತ್ತದೆ. ಅನೇಕ ಸಂದರ್ಭ ರೋಗಕ್ಕೆ ಈಡಾಗುವ ಸಮಸ್ಯೆಯೂ ಇದೆ ಎಂದು ಅವರು ತಿಳಿಸುತ್ತಾರೆ.

ಅಡಿಕೆ, ತೆಂಗು ಮತ್ತು ಹೊರಸಿಪ್ಪೆ ದಪ್ಪಗಿರುವ ಮರಗಳಿಗೆ ಕರಿಮೆಣಸು ಬಳ್ಳಿ ಶೀಘ್ರವಾಗಿ ಸುತ್ತಿಕೊಂಡು ಬೆಳೆಯುತ್ತದೆ. ಅದೇ ರೀತಿಯಾಗಿ ವಿಯೆಟ್ನಾಂ ಮಾದರಿಯಲ್ಲಿ ಕರಿಮೆಣಸಿನ ಪ್ರತೀ ಅಂತರದ ಬೇರಿಗೆ ಸೂಕ್ತವಾದ ನೀರಿನ ಅಂಶ ಮತ್ತು ಪೌಷ್ಟಿಕಾಂಶ ನೆಲದಿಂದ ಸಿಗುವಷ್ಟೆ ಸುಲಭದಲ್ಲಿ ಸಿಗುವುದರಿಂದ ಬಳ್ಳಿ ಶೀಘ್ರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕರಿಮೆಣಸು ಕಾಡುತ್ಪತ್ತಿಯಾಗಿದ್ದು, ಬೇಸಗೆಯಲ್ಲಿ ನೀರು ಕೊಡದಿದ್ದರೂ ಬೆಳೆಯುತ್ತದೆ. ತೀರಾ ಅಲ್ಪ ಪ್ರಮಾಣದಲ್ಲಿ, ಕೆಲವೇ ಲೀಟರ್‌ ನೀರು ನೀಡುವ ಮೂಲಕ ಈ ಮಾದರಿಯಲ್ಲಿ ಗಿಡವನ್ನು ಎಂತಹ ಕಾಡುಗುಡ್ಡದಲ್ಲಿಯೂ ಬೆಳೆಸಬಹುದು ಎನ್ನುತ್ತಾರೆ ಪಿಯೂಸ್‌ ಎಲ್‌. ರೋಡ್ರಿಗಸ್‌.

 ಹೆಚ್ಚು ಫ‌ಸಲು
ಪ್ರಗತಿಪರ ಕೃಷಿಕರಿಗೆ ವಿಯೆಟ್ನಾಂ ಮಾದರಿ ಪರಿಚಯಿಸಿದ್ದೇನೆ. ಕೈಗಾರಿಕ ಮಾದರಿಯಲ್ಲಿ ಈ ಕೃಷಿ ಮಾಡಿದರೆ ಅಡಿಕೆಗಿಂತ ದುಪ್ಪಟ್ಟು ಫಸಲನ್ನು ಅಷ್ಟೇ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ಪಡೆಯಬಹುದು. ವಿಯೆಟ್ನಾಂ ಕರಿಮೆಣಸು ಗುಣಮಟ್ಟಕ್ಕೂ ಹೆಸರಾಗಿದೆ.
 - ಪಿಯೂಸ್‌ ಎಲ್‌. ರೋಡ್ರಿಗಸ್‌
ಪ್ರಗತಿಪರ ಕೃಷಿಕರು

ಟಾಪ್ ನ್ಯೂಸ್

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Fire Accident: ಕುಂಬ್ರದಲ್ಲಿ ಗುಡಿಸಲು ಬೆಂಕಿಗಾಹುತಿ

2

Puttur: ಎಪಿಎಂಸಿ ವಸತಿಗೃಹದಲ್ಲಿ ಅನಧಿಕೃತ ವಾಸ; ಮಹಿಳೆ ಹೊರಕ್ಕೆ

1(1)

Belthangady: ರಸ್ತೆ ಶೋಚನೀಯ; ನಿರ್ವಹಣೆಯ ಕೊರತೆ; ರಸ್ತೆಯಲ್ಲಿ ಇಂಗು ಗುಂಡಿ ತರಹದ ಹೊಂಡ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

1-dcc

Udupi;ವಿಧಾನಪರಿಷತ್‌ ಉಪಚುನಾವಣೆ: ನಿಷೇಧಾಜ್ಞೆ ಜಾರಿ

man-a

Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ

police

Bangla ಅಕ್ರಮ ವಲಸೆ : ಸಂತೆಕಟ್ಟೆಯಲ್ಲಿ ಮತ್ತೋರ್ವನ ಬಂಧನ

ACT

Kinnigoli: ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.