ಮೇವು ನೀತಿ ಕುರಿತು ಹೈಕೋರ್ಟ್ ಅಸಮಾಧಾನ
Team Udayavani, Jul 13, 2019, 3:05 AM IST
ಬೆಂಗಳೂರು: ಬರಪೀಡಿತ ಪ್ರದೇಶಗಳಲ್ಲಿ ಜಾನುವಾರ ಶಿಬಿರಗಳನ್ನು ತೆರೆಯುವ ಹಾಗೂ ಪ್ರತಿ ಜಾನುವಾರಿಗೆ ದಿನವೊಂದಕ್ಕೆ ಒದಗಿಸುವ ಮೇವಿನ ಪ್ರಮಾಣದ ಬಗ್ಗೆ ಸರ್ಕಾರದ ಬಳಿ ಯಾವುದೇ ವೈಜ್ಞಾನಿಕ ವಿಧಾನ ಹಾಗೂ ಸ್ಪಷ್ಟ ನೀತಿ ಇಲ್ಲದಿರುವುದರ ಬಗ್ಗೆ ಹೈಕೋರ್ಟ್ ಶುಕ್ರವಾರ ತೀವ್ರ ಅಸಮಧಾನ ವ್ಯಕ್ತಪಡಿಸಿತು.
ಅಲ್ಲದೇ ಬರಗಾಲದ ಸಂದರ್ಭದಲ್ಲಿ ಜಾನುವಾರು ಶಿಬಿರಗಳನ್ನು ತೆರೆಯಲು ಅನುರಿಸುವ ಮಾನದಂಡಗಳು ಮತ್ತು ಪ್ರತಿ ಜಾನುವಾರುಗೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಮೇವು ಕೊಡಲಾಗುತ್ತದೆ, ಅದಕ್ಕಾಗಿ ಇರುವ ನೀತಿ ಏನು ಎಂಬ ಬಗ್ಗೆ ನೆರೆಯ ರಾಜ್ಯಗಳಿಂದ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಮಾಹಿತಿ ತರಿಸಿಕೊಂಡು ಅದರ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ ಇಲ್ಲದಿದ್ದರೆ ನ್ಯಾಯಾಲಯವೇ ಮಧ್ಯಂತರ ಆದೇಶ ಹೊರಡಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿತು.
ಈ ಕುರಿತಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರಕರಣಕ್ಕೆ ಸಂಬಧಿಸಿದಂತೆ ವಿವರಣೆ ನೀಡಲು ಖುದ್ದು ಹಾಜರಾಗುವಂತೆ ನ್ಯಾಯಪೀಠ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಶುಕ್ರವಾರದ ವಿಚಾರಣೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಹಾಗೂ ಪಶುಸಂಗೋಪನಾ ಇಲಾಖೆ ಪ್ರಭಾರ ಕಾರ್ಯದರ್ಶಿ ಪಿ. ಮಣಿವಣ್ಣನ್ ಹಾಜರಾಗಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ಒದಗಿಸಿದರು. ಇದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಡೀ ರಾಜ್ಯದಲ್ಲಿ ಕೇವಲ 27 ಜಾನುವಾರು ಶಿಬಿರಗಳನ್ನು ತೆರೆವುರುವುದು ಮತ್ತು ಪ್ರತಿ ಜಾನುವಾರುಗೆ ದಿನಕ್ಕೆ 5 ಕೆ.ಜಿ ಮೇವು ಒದಗಿಸುತ್ತಿರುವುದು ಯಾವ ಮಾನದಂಡಗಳ ಆಧಾರದಲ್ಲಿ, ಇದಕ್ಕೆನಾದರೂ ಸ್ಪಷ್ಟ ನೀತಿ ಇದೆಯೇ, ಅಥವಾ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ “ನೀತಿ ನಿರ್ಧಾರ’ ತೆಗೆದುಕೊಳ್ಳಲಾಗಿದೆಯೇ, ಸದ್ಯ ಎಷ್ಟು ಜಾನುವಾರು ಶಿಬಿರಗಳ ಅವಶ್ಯಕತೆ ಇದೆ ಎಂಬ ಬಗ್ಗೆ ನಿಖರ ಅಂದಾಜು ಮಾಡಲಾಗಿದೆಯೇ ಎಂದು ಸರ್ಕಾವನ್ನು ಪ್ರಶ್ನಿಸಿದರು.
ಇದಕ್ಕೆ, ಅಂತಹ ಯಾವುದೇ ನೀತಿ ಇಲ್ಲ ಮತ್ತು ನೀತಿ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದರು. ಇದರಿಂದ ಅಸಮಧಾನಗೊಂಡ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬರಗಾಲ ಬಂದಿಲ್ಲ. ಈ ಹಿಂದೆ ಅನೇಕ ಬಾರಿ ಬರದ ಸ್ಥಿತಿ ಎದುರಾಗಿತ್ತು. ಹಾಗಿದ್ದರೂ, ಇಷ್ಟೊಂದು ಪ್ರಮುಖ ವಿಷಯದ ಬಗ್ಗೆ ಸರ್ಕಾರದ ಬಳಿ ನೀತಿ ಇಲ್ಲ ಎಂದರೆ ಹೇಗೆ,
ಪ್ರಕರಣವನ್ನು ನ್ಯಾಯಾಲಯ ಎಷ್ಟೊಂದು ಗಂಭೀರವಾಗಿ ಪರಿಗಣಿಸಿದೆ ಎಂದು ಅರಿವು ಆಗಲು ಕಾರ್ಯದರ್ಶಿಗಳನ್ನು ಇಲ್ಲಿಗೆ ಕರೆಸಬೇಕಾಯಿತು ಎಂದು ಸರ್ಕಾರದ ಪರ ವಕೀಲರಿಗೆ ಹೇಳಿದರು. ಹತ್ತು ದಿನ ಕಾಲಾವಕಾಶ ಕೊಟ್ಟರೆ ಸರ್ಕಾರದ ನಿಲುವು ತಿಳಿಸಲಾಗುವುದು ಎಂದು ಸರ್ಕಾರದ ಪರ ವಕೀಲರು ಕೋರಿದರಲ್ಲದೇ, ಸೋಮವಾರದೊಳಗೆ ತಿಳಿಸಿ ಇಲ್ಲದಿದ್ದರೆ ನ್ಯಾಯಾಲಯವೇ ಮಧ್ಯಂತರ ಆದೇಶ ಹೊರಡಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊನೆಗೆ ಸರ್ಕಾರದ ಪರ ವಕೀಲರು ಬುಧವಾರದವರೆಗೆ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡಾಗ, ಅಷ್ಟರೊಳಗೆ, ಬರಗಾಲದ ಸಂದರ್ಭದಲ್ಲಿ ಜಾನುವಾರು ಶಿಬಿರಗಳನ್ನು ತೆರೆಯಲು ಅನುಸರಿಸುವ ಮಾನದಂಡಗಳು ಮತ್ತು ಪ್ರತಿ ಜಾನುವಾರುಗೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಮೇವು ಕೊಡಲಾಗುತ್ತದೆ, ಅದಕ್ಕಾಗಿ ಇರುವ ನೀತಿ ಏನು ಎಂಬ ಬಗ್ಗೆ ನೆರೆಯ ರಾಜ್ಯಗಳಿಂದ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಮಾಹಿತಿ ತರಿಸಿಕೊಂಡು ಅದರ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ, ಅಲ್ಲದೇ ಈ ಬಗ್ಗೆ ನೀತಿ ರೂಪಿಸುವ ಬಗ್ಗೆಯೂ ಕ್ರಮಕೈಗೊಳ್ಳಿ ಎಂದು ಗಡುವು ನೀಡಿ ವಿಚಾರಣೆಯನ್ನು ಜುಲೈ 17ಕ್ಕೆ ವಿಚಾರಣೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.