![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 13, 2019, 9:55 AM IST
ಲೋಕಾಪುರ: ಗ್ರಾಮದಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಶಾಲಾ ಮಕ್ಕಳ ಜಾಗೃತಿ ಜಾಥಾ ಸಪ್ತಾಹ ನಡೆಯಿತು.
ಲೋಕಾಪುರ: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಾಗಲಕೋಟೆ ಹಾಗೂ ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನೀರು ಮತ್ತು ನೈರ್ಮಲ್ಯ ಜಾಗೃತಿ ಜಾಥಾ ಸಪ್ತಾಹ ನಡೆಯಿತು.
ಆರ್‌ಬಿಜಿ ಫ್ರೌಢಶಾಲೆಯಿಂದ ಆರಂಭಗೊಂಡ ಜಾಗೃತಿ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಸೇರಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶೌಚಾಲಯ ಬಳಕೆ ಕುರಿತು ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ವಾಹಕಿ ಶಿವಕನ್ಯಾ ಕುಳ್ಳೊಳ್ಳಿ ಮಾತನಾಡಿ, ದೇಶದಲ್ಲೆಡೆ ಸ್ವಚ್ಛ ಭಾರತ ಹಲವಾರು ಜಾಗೃತಿ ಮೂಡಿಸಲಾಗಿದೆ.
ಎಲ್ಲರೂ ಸ್ವಚ್ಛತಾ ಕಾರ್ಯ ಹಾಗೂ ಶುದ್ಧ ನೀರು ಕುಡಿಯುವ, ಶೌಚಾಲಯ ಅಗತ್ಯತೆ ಬಗ್ಗೆ ಜನರಲ್ಲಿ ಪ್ರೇರೇಪಿಸುವ ಕೆಲಸ ಮಾಡಿ ಸರ್ಕಾರದ ಆಶಯ ಈಡೇರಿಸಬೇಕಿದೆ ಎಂದರು. ಜಾಥಾದಲ್ಲಿ ಸಹ ಶಿಕ್ಷಕರಾದ ಎಂ.ವೈ. ಮಬ್ರೂರಕರ, ಮಂಜುನಾಥ ಪಾಟೀಲ, ಸಂಸ್ಥೆ ಪದಾಧಿಕಾರಿಗಳೂ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.