ಕ್ರಿಕೆಟ್‌ ತಂಡಗಳು ದಿಢೀರ್‌ ಕುಸಿಯುವುದು ಯಾಕೆ?

ಮಹತ್ವದ ಪಂದ್ಯಗಳಲ್ಲಿ ವಿಫ‌ಲಗೊಳ್ಳುತ್ತದೆ ಭಾರತೀಯರ ಬ್ಯಾಟಿಂಗ್‌

Team Udayavani, Jul 13, 2019, 11:46 AM IST

2nd-lead1

ಅದೇನು ಹಣೆಬರಹವೋ ಗೊತ್ತಿಲ್ಲ. ವಿಶ್ವವಿಖ್ಯಾತ ಬ್ಯಾಟಿಂಗ್‌ ಪಡೆ ಹೊಂದಿರುವ ಭಾರತೀಯ ಕ್ರಿಕೆಟ್‌ ತಂಡ ಮಹತ್ವದ ಸಂದರ್ಭದಲ್ಲಿ ಕುಸಿದು ಹೋಗುತ್ತದೆ. ಒಂದು ರೀತಿ ಈ ತಂಡ ದ.ಆಫ್ರಿಕಾವನ್ನು ನೆನಪಿಸುತ್ತದೆ. ದ.ಆಫ್ರಿಕನ್ನರು ಯಾವುದೇ ಒತ್ತಡದ ಪಂದ್ಯಗಳಲ್ಲಿ, ಗೆಲ್ಲುವ ಸಾಮರ್ಥ್ಯವಿದ್ದರೂ ಒತ್ತಡಕ್ಕೆ ಸಿಲುಕಿ ಸೋಲುತ್ತಿದ್ದರು. ಆ ತಂಡವನ್ನು ಸೋಲಿಸಬೇಕೆಂದರೆ ಒತ್ತಡ ಹೇರಬೇಕು ಎಂಬ ವಿಷಯ ಎಲ್ಲರಿಗೂ ಗೊತ್ತಾಗಿತ್ತು. ಕ್ರಿಕೆಟ್‌ಗೆ ಮರುಪ್ರವೇಶಿಸಿ ಹೆಚ್ಚು ಕಡಿಮೆ 29 ವರ್ಷಗಳ ನಂತರವೂ ಆ ತಂಡದ ಈ ಸ್ವಭಾವ ಬದಲಾಗಿಯೇ ಇಲ್ಲ.

ಇದೀಗ ಮತ್ತೂಂದು ರೂಪದಲ್ಲಿ ಈ ಸ್ವಭಾವ ಭಾರತೀಯ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಪಡೆಯಲ್ಲಿ ಕಾಣಿಸಿಕೊಂಡಿದೆ. ಈ ಆಟಗಾರರು ಒತ್ತಡಕ್ಕೆ ಮಣಿಯುವವರಲ್ಲ. ಆದರೆ ಮಹತ್ವದ ಪಂದ್ಯಗಳಲ್ಲಿ ದಿಢೀರ್‌ ಕುಸಿತಕ್ಕೆ ಒಳಗಾಗುತ್ತಾರೆ. ಜಗತ್ತಿನ ಎಂತಹ ಬೌಲಿಂಗ್‌ ಪಡೆಯನ್ನೂ ಮಣಿಸುವ ತಾಕತ್ತು ಹೊಂದಿರುವ ಈ ಬ್ಯಾಟ್ಸ್‌ಮನ್‌ಗಳು ಯಾಕೆ ಮಹತ್ವದ ಸಂದರ್ಭದಲ್ಲೇ ಕೈಕೊಡುತ್ತಾರೆನ್ನುವುದು ಬಹಳ ಕುತೂಹಲದ ಸಂಗತಿ.

ಇದಕ್ಕೆ ಮೊದಲ ನಿದರ್ಶನ ಸಿಕ್ಕಿದ್ದು 2003ರಲ್ಲಿ ದ.ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ. ಫೈನಲ್‌ವರೆಗೆ ಎಂತೆಂತಹ ಬೌಲಿಂಗ್‌ ಪಡೆಯನ್ನು ಧೂಳೀಪಟವೆಬ್ಬಿಸಿದ್ದ ಭಾರತೀಯ ಬ್ಯಾಟ್ಸ್‌ಮನ್‌ಗಳು, ಅಂತಿಮ ಪಂದ್ಯದಲ್ಲಿ ಕಡೆಯ ಪಕ್ಷ ಪೈಪೋಟಿಯನ್ನೂ ನಡೆಸದೇ ಕೈಚೆಲ್ಲಿದರು. ಆಸ್ಟ್ರೇಲಿಯ ನೀಡಿದ್ದು 360 ರನ್‌ಗಳ ಗುರಿ. ಸರಿ ಇದನ್ನು ಬೆನ್ನಟ್ಟುವುದು, ಅದರಲ್ಲೂ ಆಸ್ಟ್ರೇಲಿಯದಂತಹ ಬೌಲಿಂಗ್‌ ಪಡೆಯೆದುರು ಕಷ್ಟವೆಂದು ಎಲ್ಲರಿಗೂ ಗೊತ್ತು. ಕಡೆಯ ಪಕ್ಷ 300 ರನ್‌ಗಳವರೆಗಾದರೂ ಏರುವ ಶಕ್ತಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿತ್ತು. ಆದರೆ ಆಲೌಟಾಗಿದ್ದು 234 ರನ್‌ಗಳಿಗೆ. ಇದನ್ನು ಸ್ವತಃ ಆಸ್ಟ್ರೇಲಿಯ ತಂಡ ಕೂಡ ನಿರೀಕ್ಷಿಸಿರಲಿಲ್ಲ. ಭಾರತದ ಈ ಕಳಪೆಯಾಟವನ್ನು ಕಂಡು ಅದು ಅಚ್ಚರಿಗೊಳಗಾಗಿತ್ತು.

ಇದೇ ರೀತಿಯ ಇನ್ನೊಂದು ಪ್ರಕರಣ ನಡೆದಿದ್ದು ಕೊಹ್ಲಿ ನಾಯಕತ್ವದಲ್ಲಿ. 2017ರಲ್ಲಿ ಭಾರತ ಮಿನಿ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೇರಿತ್ತು. ಅಲ್ಲಿಯವರೆಗೆ ತನ್ನನ್ನು ಎದುರಿಸುವವರೇ ಇಲ್ಲವೆಂಬಂತೆ ಅದ್ಭುತವಾಗಿ ಆಡಿತ್ತು. ಫೈನಲ್‌ನಲ್ಲಿ ಎದುರಾಗಿದ್ದ ಪಾಕಿಸ್ತಾನವನ್ನು ಲೀಗ್‌ ಹಂತದಲ್ಲಿ ಹೀನಾಯವಾಗಿಯೂ ಸೋಲಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ತಮಗೆ ಬ್ಯಾಟಿಂಗ್‌ ಬರುವುದೇ ಇಲ್ಲವೆಂಬಷ್ಟು ಕೆಟ್ಟದಾಗಿ ಆಡಿ ಭಾರತೀಯರು ಆಲೌಟಾದರು. ಆ ಪಂದ್ಯದಲ್ಲಿ ಪಾಕಿಸ್ತಾನ ಭಾರತಕ್ಕೆ ನೀಡಿದ್ದ ಗುರಿ 339 ರನ್‌. ಭಾರತ ಅತ್ಯಂತ ಕಳಪೆ ಬ್ಯಾಟಿಂಗ್‌ ಮಾಡಿ 158 ರನ್‌ಗಳಿಗೆ ಆಲೌಟಾಯಿತು. ಹಾಗೆ ನೋಡಿದರೆ, ಭಾರತಕ್ಕೂ ಪಾಕಿಸ್ತಾನಕ್ಕೂ ಬ್ಯಾಟಿಂಗ್‌ ಶಕ್ತಿಯಲ್ಲಿ ತಾಳೆಯೇ ಇಲ್ಲ. ಅಂತಹ ಪ್ರಬಲ ಬ್ಯಾಟ್ಸ್‌ಮನ್‌ಗಳಿದ್ದರೂ ಭಾರತೀಯರು 158 ರನ್‌ಗಳಿಗೆ ಕುಸಿದರು. ಇಂತಹ ಕುಸಿತ ಆಗಾಗ ಭಾರತೀಯ ತಂಡದಲ್ಲಿ ಸಂಭವಿಸುತ್ತಲೇ ಇರುತ್ತದೆ. ಒಂದು ಹಂತದಲ್ಲಿ ಈ ಕುಸಿತ ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ ಭಾರತೀಯರಿಗೆ ಬ್ಯಾಟಿಂಗ್‌ ಬರುವುದಿಲ್ಲವೋ ಎನ್ನುವಂತಾಗಿತ್ತು. ಇವೆಲ್ಲ ನಿರ್ಣಾಯಕ ಸಂದರ್ಭದಲ್ಲಿ ಎನ್ನುವುದು ಅಚ್ಚರಿ. ಈ ಕುಸಿತಕ್ಕೆ ಒತ್ತಡ ಕಾರಣವೇ ಅಂದರೆ, ಖಂಡಿತ ಅಲ್ಲ ಎನ್ನಬೇಕಾಗುತ್ತದೆ. ಹಾಗಾದರೆ ಏನು ಕಾರಣ? ಖಂಡಿತ ಇದಕ್ಕೆ ಉತ್ತರವಿಲ್ಲ!

ಭಾರತೀಯರ ಇಂತಹ ಕುಸಿತ ಇನ್ನೊಮ್ಮೆ ಕಂಡು ಬಂದಿರುವುದು 2019ರ ಏಕದಿನ ವಿಶ್ವಕಪ್‌ನಲ್ಲಿ. ಆಫ‌^ನಿಸ್ತಾನದಂತಹ ಸಾಮಾನ್ಯ ಬೌಲಿಂಗ್‌ ಹೊಂದಿದ್ದ ತಂಡದೆದುರು ಭಾರತೀಯರು ತೀರಾ ಅಲ್ಪ ಮೊತ್ತಕ್ಕೆ ಕುಸಿದಿದ್ದರು. ಕಡೆಗೆ ಮೊಹಮ್ಮದ್‌ ಶಮಿ ಬೌಲಿಂಗ್‌ನಿಂದ ಗೆಲುವು ಸಾಧಿಸಿ ಮರ್ಯಾದೆ ಉಳಿಸಿಕೊಂಡಿದ್ದರು. ಇಂತಹ ಇನ್ನೊಂದು ಸನ್ನಿವೇಶ ನಿರ್ಮಾಣವಾಗಿದ್ದು ಭಾರತ-ನ್ಯೂಜಿಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯದಲ್ಲಿ. ಮೊದಲು ಬ್ಯಾಟಿಂಗ್‌ ಮಾಡಿದ್ದ ನ್ಯೂಜಿಲೆಂಡ್‌ ತಿಣುಕಾಡಿ 239 ರನ್‌ ಮಾಡಿತ್ತು. ಇದನ್ನು ಬೆನ್ನತ್ತಿ ಹೊರಟ ಭಾರತ, ಕೇವಲ 92 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು. ಅಂತಹ ದೈತ್ಯ ಬ್ಯಾಟಿಂಗ್‌ ಪಡೆ ಹೀಗೆ ಕುಸಿದಿದ್ದು ಅಭಿಮಾನಿಗಳಿಗೆ ಪ್ರಶ್ನಾರ್ಹವೆನಿಸಿತು.

ಇಂಗ್ಲೆಂಡ್‌, ನ್ಯೂಜಿಲೆಂಡ್‌ಗೂ ಇದೆ ಸಮಸ್ಯೆ
ಒಂದೊಂದು ತಂಡ ಒಂದೊಂದು ರೀತಿಯಲ್ಲಿ ವಿಫ‌ಲವಾಗುತ್ತವೆ. ದ.ಆಫ್ರಿಕಾ ಯಾವುದೇ ಪಂದ್ಯದಲ್ಲೂ ಒತ್ತಡದ ಸನ್ನಿವೇಶ ಸೃಷ್ಟಿಯಾದರೆ ಸೋಲುವುದು ಮಾಮೂಲು. ಇಂಗ್ಲೆಂಡ್‌, ನ್ಯೂಜಿಲೆಂಡ್‌ಗಳದ್ದು ಇನ್ನೊಂದು ಸಮಸ್ಯೆ. ಇಂಗ್ಲೆಂಡ್‌ 2019ರ ಏಕದಿನ ವಿಶ್ವಕಪ್‌ಗ್ೂ ಮುನ್ನ ಹಲವು ಬಾರಿ ಫೈನಲ್‌ ಪ್ರವೇಶಿಸಿದೆ. ಅಲ್ಲೆಲ್ಲ ಸೋಲನುಭವಿಸಿದೆ. ನ್ಯೂಜಿಲೆಂಡ್‌ ಕೂಡ 2019ರ ವಿಶ್ವಕಪ್‌ಗೆ ಮುನ್ನ 6 ಬಾರಿ ಸೆಮಿಫೈನಲ್‌ ಪ್ರವೇಶಿಸಿತ್ತು. ಒಮ್ಮೆಯೂ ಗೆದ್ದಿಲ್ಲ! ಈ ರೀತಿಯ ಸಮಸ್ಯೆ ಹೇಗೆ ಉಂಟಾಗುತ್ತದೆ? ಇದಕ್ಕೆ ಮಾನಸಿಕತೆಯೇ ಕಾರಣವೇ?

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.