ನೀವೆಷ್ಟೇ ಕೆಳಕ್ಕೆಳೆಯಿರಿ, ನಾನು ಇನ್ನಷ್ಟು ಬಲಿಷ್ಠವಾಗುತ್ತೇನೆ!

ಭಾರತದ ಅದ್ಭುತ ಓಟಗಾರ್ತಿ, ಒಡಿಶಾದ ಮಿಂಚು ದ್ಯುತಿ ಚಾಂದ್‌ ಭರವಸೆ

Team Udayavani, Jul 13, 2019, 11:57 AM IST

dutee

ಭಾರತದ ಓಟಗಾರ್ತಿ ದ್ಯುತಿ ಚಾಂದ್‌ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಇಟಲಿಯಲ್ಲಿ ನಡೆದ ವಿಶ್ವ ವಿವಿ ಕ್ರೀಡಾಕೂಟದ 100 ಮೀ. ಓಟದಲ್ಲಿ ಆಕೆ ಚಿನ್ನ ಗೆದ್ದಿದ್ದಾರೆ. ಜಾಗತಿಕ ಕ್ರೀಡಾಕೂಟವೊಂದರಲ್ಲಿ ಇಂತಹ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟು ಅವರು. ಈ ಸಂತಸದಲ್ಲಿ ಈ ಲೇಖನ.

ವಿಕ್ಟರಿ ಹ್ಯಾಸ್‌ ಥೌಸೆಂಡ್‌ ಫಾದರ್ಸ್‌, ಬಟ್‌ ಡಿಫೀಟ್‌ ಈಸ್‌ ಆ್ಯನ್‌ ಆಫ‌ìನ್‌…ಆಗಾಗ ಈ ಮಾತು ಕೇಳಿ ಬರುತ್ತಲೇ ಇರುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಈ ಮಾತನ್ನು ಹೇಳಿದ್ದರು. ಬದುಕಿನ ಸೋಲು, ಗೆಲುವಿನ ಅನುಭವದ ಪಾಠ ಅವರಿಂದ ಈ ಮಾತನ್ನು ಹೇಳಿಸಿತ್ತು. ಪ್ರತಿಯೊಬ್ಬನ ಬದುಕಿನಲ್ಲಿ ಈ ಕಟು ಅನುಭವ ಬಂದೇ ಬರುತ್ತದೆ. ಮಹಾತ್ಮರು, ಸಾಧಕರು, ದಿಗ್ಗಜರು ಬದುಕಿನ ಅನಾಥತನಕ್ಕೆ ಸೋಲುವುದಿಲ್ಲ. ಬದಲಿಗೆ ಅಂತಹ ಸಂದಿಗ್ಧ ಸನ್ನಿವೇಶಗಳನ್ನೇ ಸೋಲಿಸಿ ಮೇಲಕ್ಕೇರುತ್ತಾರೆ. ಅವುಗಳನ್ನೇ ಚಿಮ್ಮುಗೋಲು ಮಾಡಿಕೊಂಡು, ಸೋಲಿನಲ್ಲೇ ಅವಕಾಶಗಳನ್ನು ಕಂಡುಕೊಂಡು ಅದ್ಭುತಗಳನ್ನು ಸಾಧಿಸುತ್ತಾರೆ. ಈಗ ನೀವು ಓದುತ್ತಿರುವುದು ಅಂತಹ ಸಾಧಕಿಯೊಬ್ಬಳ ಕಥೆ.

1996, ಫೆ.3ರಂದು ಒಡಿಶಾದ ಜಾಜು³ರ ಜಿಲ್ಲೆಯಲ್ಲಿ ಈಕೆ ಹುಟ್ಟಿದಾಗ ಇಂತಹ ಘಟನೆಗಳೆಲ್ಲ ನಡೆಯುತ್ತವೆ, ಮುಂದೊಂದು ದಿನ ಭಾರತದ ಕಂಡ ಮಹಾನ್‌ ಕ್ರೀಡಾಪಟುಗಳ ಸಾಲಿಗೆ ಸೇರುತ್ತಾಳೆ, ತನ್ನ ಹೋರಾಟದ ಬದುಕಿನಿಂದಲೇ ಸಾವಿರಾರು ಜನರಿಗೆ ಸ್ಫೂರ್ತಿಯಾಗುತ್ತಾಳೆಂದು ಯಾರೂ ಊಹಿಸಿರಲಿಲ್ಲ.

ಆಕೆ ದ್ಯುತಿ ಚಾಂದ್‌. ಬಡ ನೇಕಾರರ ಕುಟುಂಬದಲ್ಲಿ ಹುಟ್ಟಿದಳು. ಹುಟ್ಟಿದ ಕೂಡಲೇ ಆಕೆ ಸವಾಲುಗಳಿಗೆ ಸಿದ್ಧಳಾದಂತಿತ್ತು. ಕಾರಣ ಬೆಳೆದಿದ್ದು ಬಡತನದಲ್ಲಿ. ಕ್ರೀಡಾಶಕ್ತಿ ಆಕೆಯನ್ನು ಆವರಿಸಿಕೊಂಡಿದ್ದರೂ, ಅದನ್ನು ಪೋಷಿಸಲು ಬೇಕಾದ ವಾತಾವರಣ ಮನೆಯಲ್ಲಿರಲಿಲ್ಲ. ಸುತ್ತಮುತ್ತಲೂ ಇರಲಿಲ್ಲ. ಅದು ಹೇಗೋ ಆಕೆ ಅಂತಾರಾಷ್ಟ್ರೀಯ ಮಟ್ಟದ ಓಟಗಾರ್ತಿಯಾಗಿ ಬೆಳೆದು ನಿಂತಳು. ಇಲ್ಲಿ ಆಕೆಗೆ ಸಿಕ್ಕಿದ್ದು ಹೆಜ್ಜೆ ಹೆಜ್ಜೆಗೂ ಸವಾಲು. ಆಕೆಯ ಪ್ರತಿಭೆಯೇ ಆಕೆಗೆ ಶತೃವಾಗಿತ್ತು. ಹಲವರು ಆಕೆಯ ವೈಫ‌ಲ್ಯವನ್ನು ಹಾರೈಸಿದರು. ಅದಕ್ಕಾಗಿ ಸಾಧ್ಯವಾದಷ್ಟು ಪ್ರಯತ್ನಿಸಿದರು. ಭಾರತ ಕ್ರೀಡಾವಿಭಾಗ ವೃತ್ತಿಪರ ವ್ಯವಸ್ಥೆಯಿಂದ ಬಹಳ ದೂರವಿರುವುದರಿಂದ, ಇಲ್ಲಿ ಕ್ರೀಡೆಗೆ ಅಗತ್ಯ ಪ್ರೋತ್ಸಾಹದ ವಾತಾವರಣ ಇನ್ನೂ ದೊಡ್ಡ ಮಟ್ಟದಲ್ಲಿ ಇಲ್ಲದಿರುವುದರಿಂದ ದ್ಯುತಿ ಪ್ರತಿಯೊಂದು ಯಶಸ್ಸನ್ನು ಪಡೆಯಲು, ಅದನ್ನೊಂದು ಸಾಹಸವಾಗಿ ಪರಿಗಣಿಸಬೇಕಾದ ಸ್ಥಿತಿಯಿತ್ತು. ಅಷ್ಟರಲ್ಲಾಗಲೇ ಆಕೆ ಭಾರತದ ಭವಿಷ್ಯದ ಭರವಸೆಯಾಗಿ ಸಿದ್ಧವಾಗಿದ್ದಳು.

ಆಗ ಬಡಿದಿದ್ದೇ ಬರಸಿಡಿಲು!
ಅದು ಆಕೆಯ ಯಶಸ್ಸಿನ ಪರ್ವಕಾಲ. 2012ರಲ್ಲಿ ಆಕೆಗಿನ್ನೂ 16 ವರ್ಷ. ಆಗಲೇ 18 ವಯೋಮಿತಿಯಲ್ಲಿ ಆಕೆ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು. 100 ಮೀ. ಓಟದಲ್ಲಿ ಆಕೆ 11.8 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿದ್ದರು. 2013ರಲ್ಲಿ ಪುಣೆಯಲ್ಲಿ ನಡೆದ ಏಷ್ಯಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 200 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ಅದೇ ವರ್ಷ ನಡೆದ ವಿಶ್ವ ಯುವ ಕ್ರೀಡಾಕೂಟದಲ್ಲಿ ದ್ಯುತಿ ಮತ್ತೂಂದು ಮೈಲುಗಲ್ಲು ಸಾಧಿಸಿದಳು. 100 ಮೀ. ಓಟದಲ್ಲಿ ಆಕೆ ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದರು. ಅಲ್ಲಿಗೆ ಜಾಗತಿಕ ಕೂಟವೊಂದರಲ್ಲಿ ಫೈನಲ್‌ಗೇರಿದ ಭಾರತದ ಮೊದಲ ಅಥ್ಲೀಟ್‌ ಎನಿಸಿಕೊಂಡರು. ಊಹಿಸಿ ನೋಡಿ, ಅಲ್ಲಿಯವರೆಗೆ 100 ಮೀ. ಓಟದ ವಿಭಾಗದಲ್ಲಿ ಭಾರತದ ಯಾವುದೇ ಸ್ಪರ್ಧಿ; ಪ್ರಶಸ್ತಿ ಗೆಲ್ಲುವುದಿರಲಿ ಅಂತಿಮ ಸುತ್ತನ್ನೇ ಪ್ರವೇಶಿಸರಲಿಲ್ಲ. ದ್ಯುತಿ ಚಾಂದ್‌ ಬಗ್ಗೆ ಭರವಸೆ ಬರಲು ಇದು ಕಾರಣ. ಇದೇ ಯಶಸ್ಸು 2014ರಲ್ಲೂ ಮುಂದುವರಿಯಿತು. ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 200 ಮೀ. ಓಟ ಮತ್ತು 400 ಮೀ. ರಿಲೇಯಲ್ಲಿ ಚಿನ್ನವನ್ನೇ ಗೆದ್ದರು. ಅದೇ ವರ್ಷ ಇಂಗ್ಲೆಂಡ್‌ನ‌ ಗ್ಲಾಸೊYದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜನೆಯಾಗಿತ್ತು. ಭಾರತದ ಯಾವುದೇ ಅಥ್ಲೀಟ್‌ಗಳಿಗೆ ಕಾಮನ್‌ವೆಲ್ತ್‌ ಹಾಗೂ ಏಷ್ಯಾಡ್‌ ಕ್ರೀಡಾಕೂಟ ಬಹಳ ಮಹತ್ವದ್ದು. ಈ ಎರಡೂ ಕೂಟಗಳಲ್ಲಿ ಭಾರತೀಯರು ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಇಂತಹ ಮಹತ್ವದ ಕೂಟದಲ್ಲಿ ಆಡಿ ಗೆಲ್ಲಬೇಕು ಎಂಬ ಉತ್ಸಾಹವನ್ನು ಭಾರತದ ಪ್ರತಿಯೊಬ್ಬ ಅಥ್ಲೀಟ್‌ಗಳೂ ಹೊಂದಿರುತ್ತಾರೆ. ದ್ಯುತಿ ಚಾಂದ್‌ ಕೂಡ ಇದಕ್ಕೆ ಆಯ್ಕೆಯಾಗಿದ್ದರು. ಪದಕ ಗೆಲ್ಲುವ ಉತ್ಸಾಹ ಮತ್ತು ತಾಕತ್ತು ಎರಡೂ ಅವರಲ್ಲಿತ್ತು. ಆಗಿನ್ನೂ ಅವರಿಗೆ 18 ವರ್ಷ.

ಇನ್ನೇನು ಕೂಟಕ್ಕೆ ವಿಮಾನ ಹತ್ತಲು ಕೆಲವೇ ದಿನಗಳಿರುವಾಗ ಸಣ್ಣದಾಗಿ ಗುಸುಗುಸು ಶುರುವಾಯಿತು. ಮತ್ತೂಂದೆರಡು ದಿನ ಕಳೆದಾಗ ದ್ಯುತಿ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿ ಜೋರಾಯಿತು. ಕಡೆಗೆ ಅದೇ ಖಚಿತವಾಯಿತು. ಕಾಮನ್‌ವೆಲ್ತ್‌ ಕೂಟದಲ್ಲಿ ದ್ಯುತಿ ಭಾಗವಹಿಸುವುದನ್ನು ಭಾರತ ಅಥ್ಲೆಟಿಕ್ಸ್‌ ತಡೆ ಹಿಡಿಯಿತು. ಇದಕ್ಕೆ ಜಾಗತಿಕ ಒಕ್ಕೂಟ ಐಎಎಎಫ್ ಬೆಂಬಲವಿತ್ತು. ಆ ಸಂಸ್ಥೆಗಳ ಹುಚ್ಚು ನಿಯಮಕ್ಕೆ ದ್ಯುತಿ ಅದ್ಭುತ ಕ್ರೀಡಾಶಕ್ತಿಯೇ ನಾಶವಾಗುವ ಸ್ಥಿತಿಯುಂಟಾಗಿತ್ತು.

ಆಂಡ್ರೊಜನ್‌ ಜಾಸ್ತಿಯಿದ್ದಿದ್ದೇ ಸಮಸ್ಯೆ!
ಪುರುಷರ ಶರೀರದಲ್ಲಿರುವ ಆಂಡ್ರೊಜನ್‌ ಗ್ರಂಥಿರಸ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಅದು ಮಹಿಳೆಯರಲ್ಲಿ ಸಹಜ ಮಟ್ಟಕ್ಕಿಂತ ಜಾಸ್ತಿಯಿದ್ದರೆ ಅದಕ್ಕೆ ವೈದ್ಯಕೀಯ ಭಾಷೆಯಲ್ಲಿ ಹೈಪರ್‌ ಆಂಡ್ರೋಜನ್‌ ಎನ್ನುತ್ತಾರೆ. ಇದು ಮಹಿಳಾ ಕ್ರೀಡಾಪಟುಗಳಲ್ಲಿದ್ದರೆ, ಅವರಲ್ಲಿ ಓಟದ ಸಾಮರ್ಥ್ಯ ಇತರೆ ಕ್ರೀಡಾಪಟುಗಳಿಗಿಂತ ವಿಪರೀತ ಜಾಸ್ತಿಯಿರುತ್ತದೆ ಎನ್ನುವುದು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಒಕ್ಕೂಟದ ವಾದ. ಆದ್ದರಿಂದ ಅದು ಈ ರೀತಿ ಇರುವ ಮಹಿಳಾ ಕ್ರೀಡಾಪಟುಗಳಿಗೆ ಭಾಗವಹಿಸುವುದಕ್ಕೆ ನಿಷೇಧ ಮಾಡಿಬಿಟ್ಟಿತ್ತು. ಆಂಡ್ರೊಜನ್‌ ಪ್ರಮಾಣ ಮಹಿಳೆಯರಲ್ಲಿ ಕಡಿಮೆಯಿರುವುದು ಸಹಜ. ಅದು ಕೆಲ ಮಹಿಳೆಯರಲ್ಲಿ ಜಾಸ್ತಿಯಿದ್ದರೇ, ಅದಕ್ಕೆ ಕ್ರೀಡಾಪಟುಗಳು ಹೇಗೆ ಹೊಣೆಯಾಗುತ್ತಾರೆ? ಅದು ಪ್ರಕೃತಿ ಸಹಜ. ಈ ಪ್ರಕೃತಿ ಸಹಜ ವ್ಯವಸ್ಥೆಯನ್ನೇ ಚಿಕಿತ್ಸೆ ಪಡೆದು ಕಡಿಮೆ ಮಾಡಿಕೊಳ್ಳಿ, ಹಾಗಿದ್ದರೆ ಮಾತ್ರ ಅವಕಾಶ ಕೊಡುತ್ತೇವೆಂದು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಒಕ್ಕೂಟ ಹೇಳಿತ್ತು. ಇದು ಹೇಗೆ ಸರಿ? ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವಿಶ್ವದ ಹಲವು ಮಾನವ ಹಕ್ಕು ಸಂಘಟನೆಗಳು ಟೀಕಿಸಿದವು. ದ್ಯುತಿ ವಿಶ್ವ ಕ್ರೀಡಾ ನ್ಯಾಯಾಲಯಕ್ಕೆ ವಿಷಯವನ್ನು ಒಯ್ದರು. ಆಗ ಆಕೆಯ ಪರ ಕೆನಡಾದ ವಕೀಲರ ಸಂಘವೊಂದು ವಾದಿಸಿತು. ಅಲ್ಲಿ ನಡೆದಿದ್ದು ವಿಶ್ವ ಮಹಿಳಾ ಕ್ರೀಡಾಪಟುಗಳ ಪಾಲಿಗೆ ಐತಿಹಾಸಿಕ ಚರ್ಚೆ. ಟೆಸ್ಟೊಸ್ಟೆರಾನ್‌ ಎಂದೂ ಕರೆಸಿಕೊಳ್ಳುವ ಈ ಗ್ರಂಥಿರಸ ಜಾಸ್ತಿಯಿದ್ದರೆ ಕ್ರೀಡಾಪಟುಗಳ ಸಾಮರ್ಥ್ಯ ಜಾಸ್ತಿಯಾಗುತ್ತದೆ ಎನ್ನುವುದಕ್ಕೆ ಏನು ಸಾಕ್ಷಿ ಎಂದು ನ್ಯಾಯಾಲಯ ಕೇಳಿತು. ಅದಕ್ಕೆ ಸೂಕ್ತ ಪುರಾವೆ ನೀಡಲು ಅಥ್ಲೆಟಿಕ್ಸ್‌ ಒಕ್ಕೂಟ ವಿಫ‌ಲವಾಯಿತು. ಅಲ್ಲಿಗೆ ನಿಷೇಧ ರದ್ದಾಯಿತು. ಅದಕ್ಕಿಂತ ಮುಖ್ಯವಾಗಿ ಮಾನವ ಹಕ್ಕಿನ ಉಲ್ಲಂಘನೆಗೆ ಕಾರಣವಾಗುವ ನಿಯಮವೇ ರದ್ದಾಯಿತು. ಮುಂದೆ ದ.ಆಫ್ರಿಕಾದ ಖ್ಯಾತ ಮಹಿಳಾ ಅಥ್ಲೀಟ್‌ ಕ್ಯಾಸ್ಟರ್‌ ಸೆಮೆನ್ಯಾ ಕೂಡ ಈ ತೀರ್ಪಿನ ಪ್ರಯೋಜನ ಪಡೆದರು.

2018ರಲ್ಲಿ ಮತ್ತೆ ಮರಳಿ ಮಣ್ಣಿಗೆ
ದ್ಯುತಿ ಚಾಂದ್‌ ಪಾಲಿಗೆ ಅದ್ಭುತ ಸಾಧನೆಯ ವರ್ಷವಾಗಿತ್ತು 2018. 2014ರಲ್ಲಿ ಆದ ಅನ್ಯಾಯದಿಂದ ಅನಿವಾರ್ಯವಾಗಿ ದೀರ್ಘ‌ಕಾಲ ವಿಶ್ವ ಕ್ರೀಡಾರಂಗದಿಂದ ದೂರವುಳಿಯಬೇಕಾಗಿ ಬಂದಿತ್ತು. 2018ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಆಕೆ ಅದ್ಭುತವಾಗಿ ಮಿಂಚಿದರು. 100 ಮೀ. ಓಟದಲ್ಲಿ 11.32 ಸೆಕೆಂಡ್‌ನ‌ಲ್ಲಿ ಓಡಿ ಆಕೆ ಬೆಳ್ಳಿ ಗೆದ್ದರು. ಇದು 32 ವರ್ಷಗಳ ನಂತರ ಏಷ್ಯಾಡ್‌ನ‌ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಬೆಳ್ಳಿ. 1986ರಲ್ಲಿ ಪಿ.ಟಿ.ಉಷಾ ಬೆಳ್ಳಿ ಗೆದ್ದಿದ್ದೇ ಅಲ್ಲಿಯವರೆಗಿನ ನೆನಪಾಗಿತ್ತು. ಇದೇ ಕೂಟದ 200 ಮೀ.ನಲ್ಲೂ ದ್ಯುತಿ ಬೆಳ್ಳಿ ಗೆದ್ದರು. ಆದರೆ ಈ ಕೂಟದಲ್ಲಿ ಅವರಿಗೆ ಮತ್ತೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಒಕ್ಕೂಟದ ನಿಯಮಗಳು ಅಡ್ಡಿಯಾದವು. 800, 400, 1500 ಮೀ. ಓಟದಲ್ಲಿ ಅವರು ಸ್ಪರ್ಧಿಸುವುದಕ್ಕೇ ಇದೇ ಆಂಡ್ರೊಜನ್‌ ನಿಯಮ ಅಡ್ಡಿಯಾಯಿತು. 2018ರಲ್ಲಿ ಮೇಲಿನ ವಿಭಾಗಗಳಲ್ಲಿ ಸ್ಪರ್ಧಿಸಬೇಕಾದ ಮಹಿಳೆಯರು ಟೆಸ್ಟೊಸ್ಟೆರಾನ್‌ ತಗ್ಗಿಸಿಕೊಳ್ಳಲು ಚಿಕಿತ್ಸೆ ಪಡೆಯಬೇಕೆಂದು ನಿಯಮ ಪರಿಷ್ಕರಿಸಲಾಗಿತ್ತು. ಅದೇನೇ ಇದ್ದರೂ ದ್ಯುತಿ ಮತ್ತೆ ತನ್ನ ನಿಜಶಕ್ತಿಯನ್ನು ಜಗತ್ತಿನೆದುರು ತೆರೆದಿಟ್ಟರು.

ಇಷ್ಟೆಲ್ಲ ಹೇಳಬೇಕಾಗಿ ಬಂದಿದ್ದಕ್ಕೂ ಕಾರಣವಿದೆ. ಜು.10ರಂದು ಇಟಲಿಯ ನಪೋಲಿಯಲ್ಲಿ ನಡೆದ ವಿಶ್ವ ವಿವಿ ಕ್ರೀಡಾಕೂಟದ 100 ಮೀ. ಓಟದಲ್ಲಿ ದ್ಯುತಿ ಚಿನ್ನ ಗೆದ್ದರು. ಬರೀ ಚಿನ್ನ ಗೆದ್ದರೆ ವಿಷಯವಾಗುತ್ತಿರಲಿಲ್ಲ. ಜಾಗತಿಕ ಕೂಟವೊಂದರಲ್ಲಿ 100 ಮೀ. ಓಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಇವರು. 400 ಮೀ.ಯನ್ನು ಪರಿಗಣಿಸಿದರೆ 2ನೇಯವರು. ಇಂತಹದೊಂದು ಐತಿಹಾಸಿಕ ಸಾಧನೆಯ ನಂತರ ದ್ಯುತಿ ಟ್ವೀಟ್‌ ಮಾಡಿದ್ದು ಹೀಗೆ: ನೀವೆಷ್ಟೇ ನನ್ನನ್ನು ಕೆಳಕ್ಕೆಳೆಯಿರಿ, ನಾನು ಇನ್ನಷ್ಟು ಬಲವಾಗಿ ಬಲಿಷ್ಠವಾಗಿ ಬೆಳೆಯುತ್ತೇನೆ!

ನಿರೂಪ

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.