ಬಡ ವಾಚ್ ಮ್ಯಾನ್ ಮಗ ಕ್ರಿಕೆಟ್ ಸೂಪರ್ ಸ್ಟಾರ್ ಆದ ಕಥೆ

ಅಮ್ಮನ ಸಾವಿನಿಂದ ವಿಚಲಿತನಾಗಿದ್ದ ಈತ ಕ್ರಿಕೆಟ್ ಆಡುವುದನ್ನು ಬಿಟ್ಟಿದ್ದ

ಕೀರ್ತನ್ ಶೆಟ್ಟಿ ಬೋಳ, Jul 13, 2019, 1:14 PM IST

jadeja

ಅಪ್ಪ ಖಾಸಗಿ ಕಂಪೆನಿಯಲ್ಲಿ ಕಾವಲುಗಾರ, ಭಾರೀ ಶಿಸ್ತಿನ ಮನುಷ್ಯ, ಮಗನನ್ನು ಭಾರತೀಯ ಸೇನೆಗೆ ಸೇರಿಸಿಬೇಕೆಂಬ ಆಸೆ ಅಪ್ಪನಿಗೆ, ಸಾಧಾರಣ ಮಧ್ಯಮ ವರ್ಗದ ಕುಟುಂಬ, ಮಗನಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಆಸಕ್ತಿ, ಆದರೆ ಅಪ್ಪನೆಂದರೆ ಅಷ್ಟೇ ಭಯ, ಅಪ್ಪನಿಗೆ ಗೊತ್ತಾಗದ ಹಾಗೆ ಕ್ರಿಕೆಟ್ ಆಡುತ್ತಿದ್ದ ಮಗನಿಗೆ ಅಮ್ಮನ ಸಹಾಯ, ಆದರೆ ಮಗ 15ರ ವರ್ಷಕ್ಕೆ ಬಂದಾಗ ಒಂದು ರಸ್ತೆ ಅಪಘಾತದಲ್ಲಿ ಅಮ್ಮ ಮೃತಪಟ್ಟಿದ್ದರು. ಅಲ್ಲಿಗೆ ಅವನ ಕ್ರಿಕೆಟ್ ಆಸಕ್ತಿ ಕಮರಿ ಹೋಗಿತ್ತು. ಆದರೆ ನರ್ಸ್ ಆಗಿದ್ದ ಅಕ್ಕ, ತಮ್ಮನಿಗೆ ಪ್ರೋತ್ಸಾಹ ನೀಡಿ ಮತ್ತೆ ಕ್ರಿಕೆಟ್ ಆಡುವಂತೆ ಮಾಡಿದರು. ಹಾಗೆ ಬೆಳೆದ ಹುಡುಗ ಇಂದು ವಿಶ್ವಕಪ್ ಕ್ರಿಕೆಟ್ ನಲ್ಲಿ ವಿಶ್ವದ ಹೃದಯ ಗೆದ್ದುಬಿಟ್ಟ. ಅದು ಬೇರೆ ಯಾರೂ ಅಲ್ಲ. ಟೀಂ ಇಂಡಿಯಾದ ಬೆಸ್ಟ್ ಆಲ್ ರೌಂಡರ್ ಸರ್ ರವೀಂದ್ರ ಜಡೇಜಾ.

ಹೌದು, ರವೀಂದ್ರ ಜಡೇಜಾ ಶ್ರೀಮಂತರ ಮನೆತನದ ಹುಡುಗ ಏನಲ್ಲ. ಬಾಲ್ಯದಲ್ಲಿ ತುಂಬಾನೇ ಕಷ್ಟಪಟ್ಟಿದ್ದ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆದ ಕಥೆ ಏನು ಸುಲಭದಲ್ಲ. ಅಲ್ಲಿ ಬಡತನವಿತ್ತು, ನೋವಿತ್ತು, ಹತಾಶೆಯಿತ್ತು, ಅವಮಾನವಿತ್ತು. ಅದಕ್ಕೂ ಮೇಲಾಗಿ ಸಾಧಿಸಿಯೇ ತೀರುತ್ತೇನೆಂಬ ಛಲವಿತ್ತು. ಅದುವೇ ಗುಜರಾತ್ ನ ಜ್ಯಾಮ್ ನಗರದ ಹುಡುಗ ರವೀಂದ್ರ ಸಿನ್ಹ ಜಡೇಜಾನನ್ನು ವಿಶ್ವ ಗುರುತಿಸುವಂತೆ ಮಾಡಿದ್ದು.


ರವೀಂದ್ರ ಸಿನ್ಹ ಅನಿರುದ್ದ್ ಸಿನ್ಹಾ ಜಡೇಜಾ ಹುಟ್ಟಿದ್ದು ಡಿಸೆಂಬರ್ ಆರು 1988ರಂದು. ತಂದೆ ಅನಿರುದ್ದ್ ಸಿನ್ಹಾ ಖಾಸಗಿ ಕಂಪೆನಿಯಲ್ಲಿ ವಾಚ್ ಮ್ಯಾನ್. ತಾಯಿ ಲತಾ. ಅಕ್ಕ ನೈನಾ ಆಸ್ಪತ್ರೆಯೊಂದರಲ್ಲಿ ನರ್ಸ್. ಇವರೇ ಜಡೇಜಾ ಕ್ರಿಕೆಟ್ ಜೀವನಕ್ಕೆ ಮರು ಹುಟ್ಟು ನೀಡಿದ್ದು. ಅಕ್ಕ ನೈನಾರ ಬೆಂಬಲ ಇಲ್ಲದೇ ಇದ್ದರೆ ಜಡೇಜಾ ಇಂದು ಸೇನೆಯಲ್ಲೋ ಅಥವಾ ಇನ್ಯಾವುದೋ ಕೆಲಸ ಮಾಡಿಕೊಂಡಿರುತ್ತಿದ್ದರು.

2005ರಲ್ಲಿ ಮೊದಲ ಬಾರಿಗೆ ಭಾರತೀಯ ಅಂಡರ್ 19 ತಂಡಕ್ಕೆ ಆಯ್ಕೆಯಾದಾಗ ಜಡೇಜಾಗಿನ್ನು 19ರ ಹರೆಯ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಡೇಜಾ ಮೂರು ವಿಕೆಟ್ ಪಡೆದು ಮಿಂಚಿದರೂ ಭಾರತ ಸೋತಿತ್ತು. ನಂತರ 2008ರ ಅಂಡರ್ 19 ವಿಶ್ವಕಪ್ ತಂಡದಲ್ಲಿ ಉಪನಾಯಕನಾಗಿದ್ದ ಜಡೇಜಾ ಕೂಟದಲ್ಲಿ 10 ವಿಕೆಟ್ ಪಡೆದು ಮಿಂಚಿದರು. ಆ ವಿಶ್ವಕಪ್ ಗೆದ್ದ ಭಾರತದ ಹುಡುಗರ ನಾಯಕನಾಗಿದ್ದು ವಿರಾಟ್ ಕೊಹ್ಲಿ.

ಸೌರಾಷ್ಟ್ರದ ಪರವಾಗಿ ದೇಶೀಯ ಕ್ರಿಕೆಟ್ ಆರಂಭಿಸಿದ ಜಡೇಜಾ 2008-09ರ ರಣಜಿಯಲ್ಲಿ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ದೇಶದಲ್ಲಿ ಮಿಂಚು ಹರಿಸಿದ್ದರು. ಆ ರಣಜಿ ಋತುವಿನಲ್ಲಿ 42 ವಿಕೆಟ್ ಮತ್ತು 739 ರನ್ ಬಾರಿಸಿದ ಜಡೇಜಾ ಅದೇ ವರ್ಷ ರಾಷ್ಟ್ರೀಯ ತಂಡದ ಕದ ತಟ್ಟಿದರು. ದೇಶೀಯ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ಬಾರಿಸಿರುವ ಜಡೇಜಾ ಈ ಸಾಧನೆ ಮಾಡಿರುವ ಏಕೈಕ ಭಾರತೀಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿರುವುದು ಕೇವಲ ಎಂಟು ಆಟಗಾರರು ಮಾತ್ರ.

2008ರ ಫೆಬ್ರವರಿ ಎಂಟರಂದು ಮೊದಲ ಬಾರಿಗೆ ರವೀಂದ್ರ ಜಡೇಜಾ ಟೀಂ ಇಂಡಿಯಾ ಕ್ಯಾಪ್ ತೊಟ್ಟರು. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಜಡೇಜಾ ಮೊದಲ ಪಂದ್ಯದಲ್ಲೇ 60 ರನ್ ಗಳಿಸಿದ್ದರು. ಎರಡು ದಿನಗಳ ನಂತರ ಅಂತಾರಾಷ್ಟ್ರೀಯ ಟಿ- ಟ್ವೆಂಟಿ ಪದಾರ್ಪಣೆ ಮಾಡಿದರೂ 2009ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ನೀರಸ ಪ್ರದರ್ಶನದಿಂದ ಜಡೇಜಾ ಭಾರಿ ಟೀಕೆಗೊಳಗಾದರು. ಆ ಸಮಯದಲ್ಲಿ ತಂಡದಿಂದ ಜಡೇಜಾ ಹೊರಬಿದ್ದರು. ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ 2011ರ ವಿಶ್ವಕಪ್ ಆಡುವ ಅವಕಾಶ ತಪ್ಪಿಸಿಕೊಂಡರು.
ತಂಡದಲ್ಲಿ ಆಲ್ ರೌಂಡರ್ ಆಗಿದ್ದ ಯೂಸುಫ್ ಪಠಾಣ್ ಅವರ ಕಳಪೆ ಪ್ರದರ್ಶನದಿಂದ ಹೊರ ಬಿದ್ದಾಗ ಜಡೇಜಾ ಮತ್ತೆ ಟೀಂ ಇಂಡಿಯಾ ಸೇರಿದರು. ಕಮ್ ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ ಜಡ್ಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

2012ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಜಡೇಜಾ, ರವಿ ಅಶ್ವಿನ್ ಜೊತೆಗೆ ತಂಡದ ಖಾಯಂ ಸ್ಪಿನ್ನರ್ ಆಗಿದ್ದರು. ಕೆಲವು ಟೆಸ್ಟ್, ಏಕದಿನ ಸರಣಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಡ್ಡು, 2015ರ ಏಕದಿನ ವಿಶ್ವಕಪ್ ಗೆ ಆಯ್ಕೆಯಾದ ಜಡ್ಡು, ಎಂಟು ಪಂದ್ಯಗಳಿಂದ ಒಂಬತ್ತು ವಿಕೆಟ್ ಕಬಳಿಸಿದರು. ಆದರೆ ಬ್ಯಾಟಿಂಗ್ ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಜಡ್ಡು, ನಂತರ ಟೀಂ ಇಂಡಿಯಾದಿಂದ ಹೊರ ಬೀಳಬೇಕಾಯಿತು. ಈ ವೇಳೆಗೆ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ತಂಡಕ್ಕೆ ಕಾಲಿಟ್ಟು ಮಿಂಚಿದ್ದರಿಂದ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಗೆ ತಂಡದ ಬಾಗಿಲು ಮುಚ್ಚಿತ್ತು.


2019ರಲ್ಲಿ ಹಾರ್ದಿಕ್ ಪಾಂಡ್ಯಾ ಗಾಯಾಳಾಗಿ ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಕೊರತೆ ಎದುರಾದಾಗ ರವೀಂದ್ರ ಜಡೇಜಾಗೆ ಮತ್ತೆ ರಾಷ್ಟ್ರೀಯ ತಂಡದ ಕರೆ ಬಂತು. 2019ರ ವಿಶ್ವಕಪ್ ತಂಡಕ್ಕೆ ಕೊನೆಯದಾಗಿ ಆಯ್ಕೆಯಾದ ಜಡೇಜಾ ಮಾತ್ರ ತಮ್ಮ ಆಯ್ಕೆಯನ್ನು ಉತ್ತಮವಾಗಿ ಸಮರ್ಥಿಸಿಕೊಂಡರು. ಮಿಂಚಿನ ವೇಗದ ಫೀಲ್ಡಿಂಗ್, ನಿಖರ ಬೌಲಿಂಗ್ ಮತ್ತು ನಿರ್ಣಾಯಕ ಸೆಮಿ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ ಮುಂದೆ ಟೀಂ ಇಂಡಿಯಾದ ಖಾಯಂ ಆಟಗಾರನಾಗುವ ವಿಶ್ವಾಸದಲ್ಲಿದ್ದಾರೆ.

2016ರ ಎಪ್ರಿಲ್ 17ರಂದು ರಿವಾ ಸೋಲಂಕಿಯವರನ್ನು ವಿವಾಹವಾದ ಜಡೇಜಾಗೆ ನಿಧ್ಯಾನ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. 2019ರಲ್ಲಿ ರಿವಾ ಸೋಲಂಕಿ ಭಾರತೀಯ ಜನತಾ ಪಾರ್ಟಿಗೆ ಸೇರಿದರೆ, ಅದೇ ಸಮಯದಲ್ಲಿ ಜಡೇಜಾ ತಂದೆ ಮತ್ತು ಅಕ್ಕ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಜಡೇಜಾ ತೋರಿದ ವಿರೋಚಿತ ಬ್ಯಾಟಿಂಗ್ ನಿಂದ ಮತ್ತೆ ದೇಶದಲ್ಲಿ ಜಡೇಜಾ ಮನೆಮಾತಾಗಿದ್ದಾರೆ. ಬಾಲ್ಯದಿಂದಲೇ ಕಷ್ಟ ಅನುಭವಿಸಿ, ಹೋರಾಟದಿಂದಲೇ ಟೀಂ ಇಂಡಿಯಾ ಸೇರಿದ ಜಡೇಜಾ ಜೀವನ ಹಲವರಿಗೆ ಸ್ಪೂರ್ತಿ.

 

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.