ಹೆಜ್ಜೆಗುರುತು ಪುಸ್ತಕ ಬಿಡುಗಡೆ
ನಿರ್ಮಾಪಕರ ಸಂಘದ ಸಂಸ್ಥಾಪಕ ಹೆಚ್.ಎಂ.ಕೆ ಮೂರ್ತಿ ಅವರ ಕೃತಿ
Team Udayavani, Jul 14, 2019, 3:00 AM IST
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಹಿತವನ್ನು ಕಾಪಾಡುವ ಸಲುವಾಗಿ ಮತ್ತು ಚಿತ್ರರಂಗವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವನ್ನು ಸ್ಥಾಪಿಸಿದ ಹಿರಿಯ ನಿರ್ಮಾಪಕ, ನಿರ್ದೇಶಕ ದಿ. ಹೆಚ್.ಎಂ.ಕೆ ಮೂರ್ತಿ ಅವರ ಸಮಗ್ರ ಸಾಧನೆಯ ಹಾದಿಯನ್ನು ದಾಖಲಿಸಿರುವ ಹೆಜ್ಜೆಗುರುತು ಪುಸ್ತಕದ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ನೆರವೇರಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಎಸ್.ಎ ಚಿನ್ನೇಗೌಡ, ಬಸಂತಕುಮಾರ್ ಪಾಟೀಲ್, ಕೆ.ಸಿ.ಎನ್ ಚಂದ್ರಶೇಖರ್, ವಾಣಿಜ್ಯ ಮಂಡಳಿಯ ಈಗಿನ ಉಪಾಧ್ಯಕ್ಷ ಉಮೇಶ್ ಬಣಕಾರ್, ಕಲಾವಿದರಾದ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ರಾಮದಾಸ್ ನಾಯ್ಡು, ಅಶೋಕ್, ರಾಜಕುಮಾರ್ ಉಪಾಧ್ಯ,
ಗುರುಕಿರಣ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ಹೆಚ್.ಎಂ.ಕೆ ಮೂರ್ತಿ ಅವರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು. ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಥಮಗಳಿಗೆ ಕಾರಣರಾದ ಹೆಚ್.ಎಂ.ಕೆ ಮೂರ್ತಿ ಅವರ ಬದುಕು-ಸಾಧನೆಯ ಈ ಕೃತಿಯನ್ನು ಹಿರಿಯೂರು ರಾಘವೇಂದ್ರ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.