ನಿಗದಿಯಂತೆ ಸಭೆ ನಡೆಸಲು ಒತ್ತಾಯ
Team Udayavani, Jul 14, 2019, 3:00 AM IST
ದೊಡ್ಡಬಳ್ಳಾಪುರ: ಕೃಷಿಕ ಸಮಾಜದ ಸಭೆ ನ ಡೆದು 6 ತಿಂಗಳು ಕಳೆದಿದ್ದು, ನಿಗದಿತ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷರು, ನಿರ್ದೇಶಕರು ಒತ್ತಾಯಿಸಿದ್ದಾರೆ.
ನಗರದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ಕೃಷಿಕ ಸಮಾಜದ ಸಭೆಯಲ್ಲಿ, ಕೃಷಿಕ ಸಮಾಜದ ಸಭೆಯನ್ನು 3 ಅಥವಾ 2ತಿಂಗಳಿಗೆ ಕರೆಯುವುದು ನಿಯಮ. ಆದರೆ ಕಳೆದ 6 ತಿಂಗಳಿನಿಂದ ಸಭೆ ಕರೆಯದೆ ಇಲಾಖೆ ಮಾಹಿತಿ ತಿಳಿಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಗ ಮನಹರಿಸಬೇಕು ಎಂದು ನಿರ್ದೇಶಕರು ಒತ್ತಾಯಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ. ನಾರಾಯಣ ಸ್ವಾಮಿ ಮಾತನಾಡಿ, ಸರ್ಕಾರದ ಯೋಜನೆಗಳ ಅನುಷ್ಠಾನದ ಒತ್ತಡ ಹಾಗೂ ಕೃಷಿ ಅಭಿಯಾನ ಕಾರ್ಯಕ್ರಮದ ಹಿನ್ನಲೆಯಲ್ಲಿ ಸಭೆ ಕರೆಯಲಾಗಿರಲಿಲ್ಲ. ಮತ್ತೆ ಈ ರೀತಿ ವಿಳಂಬ ಉಂಟಾಗದಂತೆ ಕ್ರಮಕೈಗೊಂಡು ನಿಗದಿತ ಸಮಯಕ್ಕೆ ಸಭೆ ಕರೆಯಲಾಗುವುದು ಎಂದರು.
ತಾಂತ್ರಿಕ ಅಧಿಕಾರಿ ರೂಪಾ ಮಾತನಾಡಿ, ಫಸಲ್ ವಿಮಾ ಯೋಜನೆಯಡಿಯಲ್ಲಿ ರಾಗಿ ಮತ್ತು ಮುಸುಕಿನ ಜೋಳಕ್ಕೆ ವಿಮೆ ತೊಡಗಿಸಲು ಆ.14 ಕಡೆಯ ದಿನಾಂಕ ಹಾಗೂ ಸಾಸಲು ಹೋಬಳಿಯ ವ್ಯಾಪ್ತಿಯಲ್ಲಿ ಮಾತ್ರ ನೆಲಗಡಲೆ ಬೆಳೆಗೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದೆ. ಜೂ.31 ಕಡೆಯ ದಿನವೆಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಿರ್ದೇಶಕ ಎಚ್.ಎಸ್.ಅಶ್ವತ್ಥ ನಾರಾಯಣ ಕುಮಾರ್ ಮಾತನಾಡಿ, ಸಭೆಯಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರಗಳನ್ನು ಕೇಂದ್ರದಿಂದ ರೈತರ ಜಮೀನಿಗೆ ಕೊಂಡೊಯ್ಯುವ ಬಾಡಿಗೆ ವೆಚ್ಚವನ್ನು ಸರ್ಕಾರವೇ ಭರಿಸಿ ರೈತರಿಗೆ ಉಂಟಾಗುತ್ತಿರುವ ನಷ್ಟವನ್ನು ಭರಿಸಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯಿಂದ ಬೆಳೆ ಬೆಳೆಯಲು ಕೃಷಿ ಹೊಂಡ ನಿರ್ಮಾಣಕ್ಕೆ 4 ಲಕ್ಷದವರೆಗೆ ಪ್ರೋತ್ಸಾಹಧನ ವಿತರಣೆ, ಟ್ರಾಕ್ಟರ್ ಮತ್ತು ಉಪಕರಣಗಳ ವಿತರಣೆಯಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪವಿಲ್ಲದೆ ಅರ್ಜಿ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ,
ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜಕ್ಕೆ ಶೇ.50ರಷ್ಟು ರಿಯಾಯಿತಿಯಲ್ಲಿ ನಿವೇಶನ ನೀಡಬೇಕು. ದೊಡ್ಡಬೆಳವಂಗಲದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ತ್ವರಿತವಾಗಿ ಸರ್ವೇ ಕಾರ್ಯ ಮಾಡಿಸಬೇಕು ಎಂದು ನಿರ್ದೇಶಕರು ಒತ್ತಾಯಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಆಂಜನೇಗೌಡ, ಉಪಾಧ್ಯಕ್ಷ ಜಯರಾಮಯ್ಯ, ಜಿಲ್ಲಾ ಪ್ರತಿನಿಧಿ ನಾಗರಾಜಯ್ಯ, ನಿರ್ದೇಶಕರಾದ ಮುನಿಯಪ್ಪ, ರಾಮಾಂಜಿನಪ್ಪ, ಗೋಪಾಲರೆಡ್ಡಿ, ಕೃಷಿ ಅಧಿಕಾರಿಗಳಾದ ಸಿದ್ದಲಿಂಗಯ್ಯ, ಮಂಜುರಾಣಿ, ಹರೀಶ್ ಕುಮಾರ್, ಕಿರಣ್, ಸಹಾಯಕ ಕೃಷಿ ಅಧಿಕಾರಿ ಕಸ್ತೂರಯ್ಯ, ಲಿಂಗಯ್ಯ, ಪರಶಿವಮೂರ್ತಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.