ಅನುಕೂಲವಾಗುವ ಸಂಶೋಧನೆಗಳು ನಡೆಯಲಿ: ಬಿ.ಎಸ್. ಶ್ರೀಧರ
ಆಳ್ವಾಸ್‌ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
Team Udayavani, Jul 14, 2019, 5:46 AM IST
ಮೂಡುಬಿದಿರೆ: ಆಧುನಿಕ ವಿಜ್ಞಾನಕ್ಕೆ ಹೋಲಿಸಿದಾಗ ಆಯು ರ್ವೇದದಲ್ಲಿನ ಸಂಶೋಧನೆ ಬಹಳ ಕಷ್ಟದ ಸಂಗತಿ. ಆದರೂ ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಗಳು ಏರ್ಪಟ್ಟು ಮನುಕುಲಕ್ಕೆ ಅನುಕೂಲವಾಗುವಂತಾಗಬೇಕು ಎಂದು ರಾಜ್ಯ ಸರಕಾರದ ಆಯುಷ್ ವೈದ್ಯಕೀಯ ವಿಜ್ಞಾನದ ಸಹ ನಿರ್ದೇಶಕ ಡಾ| ಬಿ.ಎಸ್. ಶ್ರೀಧರ ಹೇಳಿದರು.
ವಿದ್ಯಾಗಿರಿಯ ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇ ಜಿನ ವತಿಯಿಂದ ನಡೆದ “ಅಡ್ವಾ ನ್ಸ್‌ಸ್ ಇನ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್-2019′ ಒಂದು ದಿನದ ವಿಚಾರ ಸಂಕಿರಣ ಹಾಗೂ “ಆತ್ಮ’ ಸಂಶೋಧನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ವಿರಳ ಸಂಶೋಧಕರು
ಕೇಂದ್ರ ಸರಕಾರ ಆಯುಷ್ ಸಚಿವಾಲಯ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿ.ವಿ. ಆಯುರ್ವೇದದ ಬಗೆಗಿನ ಸಂಶೋಧನೆಗೆ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದರೂ, ಸಂಶೋಧನೆ ನಡೆಸು ವವರ ಸಂಖ್ಯೆ ವಿರಳವಾಗಿದ್ದು, ಅದರಲ್ಲೂ ಸಲ್ಲಿಸಿದ ಅರ್ಜಿಗಳ ಗುಣ ಮಟ್ಟವು ಕಳಪೆಯಾಗಿವೆ ಎಂದು ಕಳವಳವ್ಯಕ್ತಪಡಿಸಿದರು.
30 ಮಿಲಿಯನ್‌ಗೂ ಅಧಿಕ ಹಸ್ತಪ್ರತಿಗಳು
ಮುಖ್ಯ ಅತಿಥಿ, ಮೆಲುಕೋಟೆಯ ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚ್‌ನ ಮಾಜಿ ನಿರ್ದೇಶಕ ಎಂ.ಎ. ಲಕ್ಷ್ಮೀಆಚಾರ್ ಮಾತನಾಡಿ, ಆಯುರ್ವೇದ ವಿಷಯ ದಲ್ಲಿ ಸಾಹಿತ್ಯಿಕ ಸಂಶೋಧನೆ ಬಹಳ ವಿರಳ. ಆಯುರ್ವೇದದ ವಿಷಯಕ್ಕೆ ಸಂಬಂಧಪಟ್ಟಂತೆ 30 ಮಿಲಿಯನ್‌ಗೂ ಅ ಧಿಕ ಹಸ್ತಪ್ರತಿಗಳಿದ್ದು, ಶೇ.10 ರಷ್ಟೂ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ.
ಈ ವಿಷಯಗಳಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಎಂದರು.ಅಮೆರಿಕದ ಮಿಸೌರಿ ವೈದ್ಯಕೀಯ ವಿ.ವಿ.ದ ಇನ್‌ಸ್ಟಿಟ್ಯೂಟ್ ಆಫ್ ಗ್ರೀನ್ ನ್ಯಾನೋ ಟೆಕ್ನಾಲಜಿ ವಿಭಾಗದ ನಿರ್ದೇ ಶಕ ಡಾ ಕಟ್ಟೇಶ್ ವಿ. ಕಟ್ಟಿ, ಉಡುಪಿಯ ಎಸ್‌ಡಿ ಎಂ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ| ಜಿ. ಶ್ರೀನಿವಾಸ ಆಚಾರ್ಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಪ್ರಾಂಶುಪಾಲೆ ಡಾ| ಝೆನಿಕಾ ಡಿ’ಸೋಜಾ, ಡಾ| ಸುಬ್ರಮಣ್ಯ ಪದ್ಯಾಣ ಉಪಸ್ಥಿತರಿದ್ದರು. ಡಾ| ಗೀತಾ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.