ಪತ್ರಕರ್ತರಿಗಿರಲಿ ಸಾಮಾಜಿಕ ಕಳಕಳಿ
ಶುದ್ಧ ಹಸ್ತರಾಗಿ ಸುದ್ದಿ ಮಾಡಿ•ಯಾವ ಬರಹದಲ್ಲೂ ಕಂಡು ಬರದಿರಲಿ ಸ್ವಾರ್ಥ
Team Udayavani, Jul 14, 2019, 10:07 AM IST
ಹೊನ್ನಾಳಿ: ಕರ್ನಾಟಕ ಪತ್ರಕರ್ತರ ಸಂಘದ ನ್ಯಾಮತಿ-ಹೊನ್ನಾಳಿ ತಾಲೂಕು ಘಟಕದ ವತಿಯಿಂದ ಸಾಸ್ವೆಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ರಾಂಪುರ ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಮಾತನಾಡಿದರು.
ಹೊನ್ನಾಳಿ: ಹನಿ ಮಸಿ ಕೋಟಿ ಜನರಿಗೆ ಬಿಸಿ ಎನ್ನುವ ನಾಣ್ಣುಡಿ ಹೊಂದಿರುವ ಪತ್ರಕರ್ತರ ಕೆಲಸ ಅನಘ್ಯರ್ವಾದುದು. ಇದನ್ನು ಶುದ್ಧವಾಗಿ ಮಾಡಬೇಕು ಎಂದು ರಾಂಪುರ ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ನುಡಿದರು.
ಕರ್ನಾಟಕ ಪತ್ರಕರ್ತರ ಸಂಘದ ನ್ಯಾಮತಿ-ಹೊನ್ನಾಳಿ ತಾಲೂಕು ಘಟಕದ ವತಿಯಿಂದ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಎಡಿವಿಎಸ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಮುಖ್ಯ ಉದ್ದೇಶ ಸುದ್ದಿ ಕೊಡುವುದು. ಸುದ್ದಿಯನ್ನು ಶುದ್ಧ ಹಸ್ತದಿಂದ ಕೊಟ್ಟರೆ ಸಾಮಾನ್ಯ ಜನರ ಮೆಚ್ಚುಗೆ ಗಳಿಸಲು ಸಾಧ್ಯ. ಸುದ್ದಿಗಾಗಿ ಕಾಟಾಚಾರದ ಸುದ್ದಿ ಮಾಡಬಾರದು ಎಂದು ಹೇಳಿದರು.
ಪತ್ರಕರ್ತರ ವೈಯಕ್ತಿಕ ಕಳಕಳಿ ಹೊಂದದೆ ಸಾಮಾಜಿಕ ಕಳಕಳಿ ಹೊಂದಿ ಸುದ್ದಿ, ಲೇಖನಗಳನ್ನು ಬರೆಯಬೇಕು. ಯಾವ ಬರಹದಲ್ಲೂ ಸ್ವಾರ್ಥತೆ ಇರಬಾರದು ಎಂದು ಹೇಳಿದರು.
ಪತ್ರಕರ್ತರು ಶಾಶ್ವತವಲ್ಲ. ಪತ್ರಕರ್ತರು ಮಾಡಿದ ಸಾಧನೆ ಶಾಶ್ವತ ಇದಕ್ಕೆ ಈಗಾಗಲೇ ಅನೇಕ ಮಹಾನ್ ಪತ್ರಕರ್ತರು ಗತಿಸಿ ಹೋಗಿದ್ದರೂ ಅವರು ಮಾಡಿದ ಸಾಧನೆ ಮಾತ್ರ ಸದಾ ಸ್ಮರಣೆಯಾಗಿರುತ್ತದೆ ಎಂದು ಹೇಳಿದರು. ಗ್ರಾಮೀಣ ಭಾಗದ ಪತ್ರಕರ್ತರ ಬದುಕು ಸಂಕಷ್ಟದಿಂದ ಕೂಡಿರುತ್ತದೆ. ಬಿಡಿ ಸುದ್ದಿಗಾಗಿ ಇಡೀ ದಿನ ತಿರುಗುವ ಸಂದರ್ಭ ಬರುತ್ತದೆ. ಆದರೂ ಗ್ರಾಮೀಣ ಭಾಗದ ಎಲ್ಲಾ ಸುದ್ದಿಗಳನ್ನು ಕವರ್ ಮಾಡಿ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಮಾಡುತ್ತಾರೆ. ಇದರಿಂದ ಗ್ರಾಮೀಣ ಭಾಗದ ಪತ್ರಕರ್ತರ ಕೆಲಸ ಒಂದು ರೀತಿಯ ಸಮಾಜ ಸೇವೆ ಇದ್ದಂತೆ ಅವರ ಕಾರ್ಯ ಶ್ಲಾಘನೀಯ ಎಂದರು.
ಹಿರಿಯ ಪತ್ರರ್ತ ಎಂ.ಪಿ.ಎಂ.ವಿಜಯಾನಂದಸ್ವಾಮಿ ಮಾತನಾಡಿ, ಮಾಧ್ಯಮ ಕ್ಷೇತ್ರ ವ್ಯಾಪಕವಾಗಿ ಬೆಳೆದಿದ್ದು, ವೇಗಕ್ಕೆ ತಕ್ಕಂತೆ ಪತ್ರಕರ್ತರು ಹೊಂದಿಕೊಂಡು ಕಾರ್ಯ ಮಾಡಬೇಕಿದೆ. ಪತ್ರಕರ್ತರ ಸಾಹಿತ್ಯ ಅವಸರದ ಸಾಹಿತ್ಯವಾದರೂ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಹು ಬೇಗನೆ ಅರ್ಥವಾಗುವಂತೆ ಇರಬೇಕು ಎಂದು ಹೇಳಿದರು.
ಪತ್ರಕರ್ತರು ಸದಾ ಎಚ್ಚರಿಕೆಯಿಂದ ಇರಬೇಕು. ಎಲ್ಲರ ಕಣ್ಣುಗಳ ಪತ್ರಕರ್ತರ ಮೇಲೆ ಇರುವುದು ಸಹಜ. ಆದ್ದರಿಂದ ದೂರು ದುಮ್ಮಾನಗಳಿಂದ ಪತ್ರಕರ್ತರು ದೂರ ಇರಬೇಕು ಎಂದು ಹೇಳಿದರು.
ಎಡಿವಿಎಸ್ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ಎಚ್.ಕೃಷ್ಣಮೂರ್ತಿ ಮಾತನಾಡಿ, ಪತ್ರಕರ್ತರಿಗೆ ಸಂಸ್ಕಾರ ಇದ್ದರೆ ಮಾತ್ರ ಪತ್ರಕರ್ತ ಮತ್ತು ಪತ್ರಿಕೋದ್ಯಮಿ ಬೆಳೆಯಲು ಸಾಧ್ಯ. ಪತ್ರಕರ್ತರ ವೃತ್ತಿ ಜಾತಿಗೆ ಸೀಮಿತವಾಗಿರದೆ ಜಾತ್ಯತೀತವಾಗಿರಬೇಕು ಎಂದು ಹೇಳಿದರು.
ಪತ್ರಕರ್ತ ಶಕೀಲ್ಅಹಮ್ಮದ್, ಜ್ಞಾನೋದಯ ಸಂಸ್ಥೆ ಕಾರ್ಯದರ್ಶಿ ಹರೀಶ್ ಆರ್.ಸಾಗೋನಿ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಸ್.ಶಾಸ್ತ್ರಿ ಹೊಳೆಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲ ಎಚ್.ಬಿ.ಗಣಪತಿ ಸ್ವಾಗತಿಸಿದರು. ಉಪನ್ಯಾಸಕ ಹನುಮಂತಪ್ಪ ನಿರೂಪಿಸಿದರು. ಪತ್ರಕರ್ತ ಗಿರೀಶ್ ನಾಡಿಗ್ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಎ.ಕೆ.ಹಾಲೇಶ್ ವಂದಿಸಿದರು.
ಪತ್ರಕರ್ತ ಸಂಘದ ಪದಾಧಿಕಾರಿಗಳಾದ ರಮೇಶ್ ಮಡಿವಾಳ, ಡಿ.ಎಂ.ಹಾಲಾರಾಧ್ಯ, ಎಸ್.ಎನ್.ನಾಗರಾಜ್, ಜಿ.ಎಚ್.ರಾಜು, ಶಿವಾನಂದಪ್ಪ, ಸಿ.ಬಸವರಾಜ್, ಹಾಲೇಶ್ವರಪ್ಪ, ರಾಘವೇಂದ್ರ ಮೂಳೇಕರ, ಜಿ.ಎಚ್. ಪಟೇಲ್ ಇದ್ದರು. ಇದೇ ಸಂದರ್ಭದಲ್ಲಿ ಎಡಿವಿಎಸ್ ಕಾರ್ಯದರ್ಶಿ ಡಾ.ಎಸ್.ಎಚ್.ಕೃಷ್ಣಮೂರ್ತಿ ಕಳೆದ ಸಾಲಿನಲ್ಲಿ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.