325 ಕೆ.ಜಿ. ಶ್ರೀಗಂಧದ ತುಂಡುಗಳ ಕಳವು
ಬೆಳ್ತಂಗಡಿ ಅರಣ್ಯ ಇಲಾಖೆ ಗೋದಾಮಿನ ಬೀಗ ಮುರಿದ ಕಳ್ಳರು
Team Udayavani, Jul 14, 2019, 10:36 AM IST
ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿಯಿರುವ ಅರಣ್ಯ ಇಲಾಖೆ ಗೋದಾಮಿನ ಬೀಗ ಮುರಿದು 8.60 ಲಕ್ಷ ರೂ. ಮೌಲ್ಯದ 325 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಕಳವು ಮಾಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಯವರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಶ್ರೀಗಂಧ ಮರದ ತುಂಡುಗಳನ್ನು ಭದ್ರತೆಯ ಗೋದಾಮಿನಲ್ಲಿ ದಾಸ್ತಾನಿರಿಸುತ್ತಿದ್ದು, ಕಳವು ವಿಚಾರ ಅನುಮಾನಕ್ಕೆ ಕಾರಣವಾಗಿದೆ.
ಶ್ರೀಗಂಧದ ತುಂಡುಗಳ ಜತೆಗೆ ಇಲಾಖೆಯ ತಡೆಬೇಲಿ ತಂತಿಗಳನ್ನೂ ದಾಸ್ತಾನಿರಿಸಲಾಗಿದೆ. ಶನಿವಾರ ಸಿಬಂದಿಯೊಬ್ಬರು ತಂತಿಗಳನ್ನು ತೆಗೆಯುವುದಕ್ಕೆ ತೆರಳಿದಾಗ ಬೀಗ ಮುರಿ ದಿದ್ದು, ಶ್ರೀಗಂಧದ ತುಂಡು ಗಳು ಕಳವಾಗಿರುವುದು ತಿಳಿದುಬಂದಿದೆ.
ಜು. 2ರಂದು ಇಲಾಖೆಯ ಸಿಬಂದಿ ಕೊನೆಯ ಬಾರಿಗೆ ಗೋದಾಮಿನ ಬೀಗ ತೆರೆದು ತಂತಿ ಬೇಲಿಯನ್ನು ತೆಗೆದಿದ್ದು, ಬಳಿಕ ಅದರೊಳಗೆ ಯಾರೂ ಪ್ರವೇಶಿಸಿಲ್ಲ. ಕಳ್ಳರು ಬೀಗವನ್ನು ತುಂಡು ಮಾಡಿ ಒಳಗೆ ಪ್ರವೇಶಿಸಿದ್ದು, ಬಳಿಕ ಯಾರ ಗಮನಕ್ಕೂ ಬಾರದಂತೆ ಗಮ್ಮಿನ ಮೂಲಕ ಅಂಟಿಸಿದ್ದಾರೆ. ಘಟನೆಯು ಒಂದು ವಾರದ ಮುಂಚೆ ನಡೆದಿರುವ ಸಾಧ್ಯತೆ ಇದೆ. ಗಂಧ ತುಂಡುಗಳನ್ನು ಕಾಂಪೌಡಿನ ಹೊರಗೆ ಸಾಗಿಸಿ ಬಳಿಕ ವಾಹನದ ಮೂಲಕ ಕೊಂಡೊಯ್ದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಫಾರೆಸ್ಟರ್ ನಿವಾಸದ ಸಮೀಪದಲ್ಲೇ ಕೃತ್ಯ
ಬೆಳ್ತಂಗಡಿ ಫಾರೆಸ್ಟರ್ ಅವರ ವಸತಿ ಗೃಹ ಗೋದಾಮಿನ ಪಕ್ಕದಲ್ಲಿದ್ದು, ಅವರು ಕಳೆದ ಕೆಲವು ದಿನಗಳ ಹಿಂದೆ ರಜೆಯ ಮೇಲೆ ಊರಿಗೆ ತೆರಳಿದ್ದು, ಕಳ್ಳರು ಅವರು ಇಲ್ಲದಿರುವ ಮಾಹಿತಿ ತಿಳಿದುಕೊಂಡೇ ಕಳವು ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗೋದಾಮಿನಲ್ಲಿ ಸುಮಾರು 400 ಕೆಜಿಯಷ್ಟು ಶ್ರೀಗಂಧ ದಾಸ್ತಾನಿದ್ದು, ಅದರಲ್ಲಿ 75 ಕೆಜಿಯಷ್ಟು ಅಲ್ಲೇ ಇವೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಇಲಾಖೆಯ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಘಟನೆಯ ಮಾಹಿತಿ ನೀಡಿದ್ದು, ಅವರ ನಿರ್ದೇಶನದಂತೆ ಪ್ರಕರಣ ದಾಖಲಿಸಿ ಕೊಂಡು ತನಿಖೆಯ ನಡೆಸುತ್ತಿದ್ದಾರೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ಡಿಎಫ್‌ಒಗೆ ಘಟನೆಯ ಕುರಿತು ವಿವರಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.