ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅರ್ಜಿ ಸಲ್ಲಿಕೆಗಿಲ್ಲ ಅವಕಾಶ
ಹೊಸಬರಿಗೆ ವೆಬ್‌ಸೈಟ್ ಬಾಗಿಲು ಬಂದ್
Team Udayavani, Jul 14, 2019, 10:44 AM IST
ಉಡುಪಿ: ಪ್ರಧಾನಮಂತ್ರಿ ಆವಾಸ್ ಯೋಜನೆ, ಬಸವ ವಸತಿ ಸೇರಿ ದಂತೆ ವಿವಿಧ ವಸತಿ ಯೋಜನೆಗಳಿಗೆ ಹೊಸದಾಗಿ ಅರ್ಜಿ ಹಾಕುವವರಿಗೆ ಅವಕಾಶ ಇಲ್ಲದಂತಾಗಿದೆ. ವಸತಿ ಯೋಜನೆ ಮಂಜೂರು ಮಾಡುವ ರಾಜೀವ್‌ಗಾಂಧಿ ವಸತಿ ನಿಗಮದ ವೆಬ್‌ಸೈಟ್ ಈಗ ಹೊಸ ಅರ್ಜಿದಾರರಿಗೆ ತೆರೆಯುತ್ತಲೇ ಇಲ್ಲ. ಹಾಗಾಗಿ ಹೊಸ ಅರ್ಜಿದಾರರು ಸೈಟ್ ಬಾಗಿಲು ತೆರೆಯುವವರಿಗೆ ಕಾಯುವಂತಾಗಿದೆ.
ವಸತಿ ಸೌಲಭ್ಯವನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮಂಜೂರು ಮಾಡಲಾಗುತ್ತದೆ. ಗ್ರಾ.ಪಂ.ಗಳಲ್ಲಿ ನಿಗಮದ ಸೈಟ್‌ಗೆ
ಅರ್ಜಿ ದಾರರ ಮಾಹಿತಿಯನ್ನು ಕಳಿಸಲಾಗುತ್ತದೆ. ಕಳೆದ ಡಿಸೆಂಬರ್ ನಲ್ಲೇ ಪೂರ್ಣಗೊಂಡಿದ್ದ ವಸತಿ ರಹಿತರು ಮತ್ತು ನಿವೇಶನ ರಹಿತರ ಸಮೀಕ್ಷೆಯಡಿ ಈಗಾಗಲೇ ಗುರುತಿಸಲಾದವರಿಗೆ ಸೌಲಭ್ಯ ಮಂಜೂರು ಮಾಡಿದ ಬಳಿಕವೇ ಹೊಸಬರಿಗೆ ಅವಕಾಶ ಎನ್ನುವುದು ನಿಗಮದ ನಿಲುವು. ಹಾಗಾಗಿ ವೆಬ್‌ಸೈಟ್ ಬಾಗಿಲು ಮುಚ್ಚಲಾಗಿದೆ.
ಆದರೆ ಅರ್ಜಿ ಸಲ್ಲಿಸಲು ಅರ್ಹ ರಾದವರ ಪೈಕಿ ಕುಟುಂಬ ವಿಭಜನೆಯಾಗಿ ಪ್ರತ್ಯೇಕ ಮನೆಯ ಆವಶ್ಯಕತೆ ಇರುವವರು, ಜಾಗ ಪಾಲಾಗಿ ಮನೆ ಕಟ್ಟಲು ಮುಂದಾಗಿರುವವರು ಸೌಲಭ್ಯ ಕೋರಿ ಗ್ರಾ.ಪಂ.ಗಳಿಗೆ ಅಲೆದಾಡುತ್ತಿದ್ದಾರೆ. ಕೆಲವೆಡೆ ಗ್ರಾ.ಪಂ ಸಿಬಂದಿ ಅರ್ಜಿದಾರರನ್ನು ವಾಪಸು ಕಳುಹಿಸಿದರೆ, ಇನ್ನು ಕೆಲವೆಡೆ ಅರ್ಜಿಯನ್ನು ಪಡೆಯಲಾಗುತ್ತಿದ್ದರೂ ವೆಬ್‌ಸೈಟ್‌ಗೆ ಮಾಹಿತಿ ಯನ್ನು ಕಳಿಸುತ್ತಿಲ್ಲ. ಇದರಿಂದಾಗಿ 6 ತಿಂಗಳುಗಳ ಈಚೆಗೆ ಸಲ್ಲಿಸಿದ್ದ ಅರ್ಜಿಗಳು ಗ್ರಾ.ಪಂ.ಗಳಲ್ಲೇ ಬಾಕಿಯಾಗಿವೆ.
ಮಂಜೂರಾದರೂ ಮನೆ ಕಟ್ಟಿಲ್ಲ
ಜಿಲ್ಲೆಯಲ್ಲಿ ಕೆಲವು ಕುಟುಂಬಗಳಿಗೆ 2011ರಲ್ಲಿ ಮನೆ ಮಂಜೂರಾದರೂ ಮನೆ ನಿರ್ಮಿಸಿಲ್ಲ. ಕೆಲವರು ಸಹಾಯಧನಕ್ಕೆ ಮತ್ತಷ್ಟು ಹಣ ಹೊಂದಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಇತರ ಕಾರಣಗಳಿಗಾಗಿ ಸದ್ಯ ಮನೆ ನಿರ್ಮಿಸಿಲ್ಲ. ಆದರೆ ನಿಗಮದ ಸೈಟ್‌ನಲ್ಲಿ ಇವರ ಹೆಸರು ಬಾಕಿ ಪಟ್ಟಿಯಲ್ಲೇ ಇದೆ. ಈ ಸಮಸ್ಯೆ ನಿವಾರಣೆಗೆ ಮನೆ ಮಂಜೂರಾಗಿಯೂ ನಿರ್ಮಿಸದೆ ಇರುವವರ ಹೆಸರನ್ನು ತೆಗೆದುಹಾಕಲು (ಬ್ಲಾಕ್) ನಿಗಮ ಮುಂದಾಗಿದೆ. ಇದು ಇತ್ಯರ್ಥವಾಗುವವರೆಗೂ ಹೊಸಬರು ಕಾಯುವಂತಾಗಿದೆ.
“ಹೊಸ ಅರ್ಜಿಗಳನ್ನು ತೆಗೆದಿಟ್ಟು ಕೊಳ್ಳುತ್ತೇವೆ. ಮುಂದೆ ಸೈಟ್ ಓಪನ್ ಆದಾಗ ಅಪ್‌ಲೋಡ್ ಮಾಡುತ್ತೇವೆ’ ಎನ್ನುತ್ತಾರೆ ಜಿಲ್ಲೆಯ ಗ್ರಾ.ಪಂ.ನ ಓರ್ವ ಪಿಡಿಒ. ಸಮೀಕ್ಷೆಯಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 15,750 ವಸತಿ ರಹಿತ ಮತ್ತು 32,455 ನಿವೇಶನ ರಹಿತ ಕುಟುಂಬಗಳಿವೆ. ದ.ಕ ಜಿಲ್ಲೆಯಲ್ಲಿ ಅನುಕ್ರಮವಾಗಿ 18,926 ಮತ್ತು 47,401 ಕುಟುಂಬಗಳಿವೆ.
ಸಮೀಕ್ಷೆಯಲ್ಲಿ ಒಳಗೊಂಡಿರು ವವರಿಗೆ ಮಾತ್ರ ಈಗ ಅವಕಾಶವಿದೆ. ಒಂದು ವೇಳೆ ಇತರ ನಿರ್ದಿಷ್ಟ ತಾಂತ್ರಿಕ ತೊಂದರೆಗಳಿದ್ದರೆ ಸರಿಪಡಿಸಬಹುದು.
– ಸಿಂಧೂ ರೂಪೇಶ್, ಉಡುಪಿ ಜಿ.ಪಂ. ಸಿಇಒ
ಸಮೀಕ್ಷೆಯಲ್ಲಿ ಗುರುತಿಸಿರುವ ಕುಟುಂಬಗಳಿಗೆ ವಸತಿ ಒದಗಿಸುವುದು ನಮ್ಮ ಆದ್ಯತೆ. ಸದ್ಯ ಹೊಸ ಅರ್ಜಿ ಸ್ವೀಕಾರ ಸ್ಥಗಿತಗೊಳಿಸಲಾಗಿದೆ.
– ಬಸಪ್ಪ,, ಸಹಾಯಕ ವ್ಯವಸ್ಥಾಪಕರು, ರಾಜೀವ್ ಗಾಂಧಿ ವಸತಿ ನಿಗಮ
ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.