ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ ಪಾಲನೆ: ಶಿವಶಂಕರಪ್ಪ
ಕರ್ನಾಟಕ ವಸತಿ ಮಹಾಮಂಡಲದ ನೂತನ ಉಪಾಧ್ಯಕ್ಷ ಟಿ.ವಿ.ಶಿವಶಂಕರಪ್ಪ ಮನದಾಳ
Team Udayavani, Jul 14, 2019, 3:05 PM IST
ತರೀಕೆರೆ: ಕರ್ನಾಟಕ ವಸತಿ ಮಹಾ ಮಂಡಲದ ನೂತನ ಉಪಾಧ್ಯಕ್ಷ ಟಿ.ವಿ.ಶಿವಶಂಕರಪ್ಪ ಅವರನ್ನು ಅಭಿಮಾನಿಗಳು ಅಭಿನಂದಿಸಿದರು.
ತರೀಕೆರೆ: ಯಾವುದೇ ಅಧಿಕಾರದ ಸ್ಥಾನಮಾನವಿಲ್ಲದಿದ್ದರು ಸಹ ಜನರು ನನ್ನನ್ನು ನಾಯಕನೆಂದು ಗುರುತಿಸಿದ್ದಾರೆ. ಅಧಿಕಾರದ ಹಲವಾರು ಅವಕಾಶಗಳು ಒದಗಿ ಬಂದಿದ್ದರು ಸಹ ಗದ್ದುಗೆ ಏರುವಲ್ಲಿ ವಿಫಲನಾಗಿದ್ದು ನಿಜ. ಆದರೆ, ರಾಜಕೀಯ ಜೀವನದಲ್ಲಿ ಶುದ್ಧ ಹಸ್ತನಾಗಿದ್ದೇನೆ ಎಂದು ಕರ್ನಾಟಕ ವಸತಿ ಮಹಾಮಂಡಲದ ನೂತನ ಉಪಾಧ್ಯಕ್ಷ ಟಿ.ವಿ.ಶಿವಶಂಕರಪ್ಪ ಹೇಳಿದರು.
ಪಟ್ಟಣದ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದಿ| ದೇವರಾಜ ಅರಸು ಅವರು ನನ್ನ ರಾಜಕೀಯ ಗುರುಗಳು. ಅವರಿಟ್ಟ ಹೆಜ್ಜೆಯನ್ನು ನಾನು ಅನುಸರಿಸುತ್ತ ಬಂದಿದ್ದೇನೆ. ನನ್ನ ನೇರ ನಡೆ-ನುಡಿಯ ಸ್ವಭಾವದಿಂದಾಗಿ ರಾಜಕೀಯದ ಮೆಟ್ಟಿಲೇರಲು ಸ್ವಲ್ಪ ಅಡೆತಡೆಯಾಗಿರಬಹುದು. ಆದರೂ ನನ್ನ ಸ್ವಭಾವ, ಸ್ವಾಭಿಮಾನವನ್ನು ಬಿಟ್ಟುಕೊಡದೆ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ. 5 ದಶಕಗಳಿಂದ ರಾಜಕೀಯದಲ್ಲಿರೂ ನನ್ನಲ್ಲಿರುವ ಜಾತ್ಯತೀತ ಮನೋಭಾವ ಇಂದಿಗೂ ಜನರ ನಡುವೆ ಇರುವಂತೆ ಮಾಡಿದೆ. ಅಧಿಕಾರಕ್ಕಾಗಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಪಕ್ಷ ಟಿಕೆಟ್ ನೀಡದಿದ್ದರು ಸಹ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳಿದರು.
ಅಧಿಕಾರ ಸಿಗಲಿಲ್ಲ ಎಂಬ ಕೊರಗು ನನ್ನಲ್ಲಿ ಇಲ್ಲ. ಉತ್ತಮ ಅಧಿಕಾರ ಸಿಗಬಹುದು ಎಂಬ ನಿರೀಕ್ಷೆ ಇದೆ. ಇತ್ತೀಚೆಗೆ ನಡೆದ ಮಹಾ ಮಂಡಲದ ಚುನಾವಣೆಯಲ್ಲಿ ಗೆಲುವು ಸಾಸಿದ್ದು, ಉತ್ತಮ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಎಂ.ನರೇಂದ್ರ ಮಾತನಾಡಿ, ಟಿ.ವಿ.ಶಿವಶಂಕರಪ್ಪ ಅವರು ತಾಲೂಕಿನ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದವರು. ರಾಜಕಾರಣದ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದವರು. ಜಿಲ್ಲೆ ಕಂಡ ಅಪರೂಪದ ರಾಜಕಾರಣಿಯಾಗಿದ್ದಾರೆ. ಅವರ ಬಳಿಗೆ ಬರುವವರು ಎಷ್ಟೆ ಆತ್ಮೀಯರಾಗಿದ್ದರೂ ಅವರೊಡನೆ ನೇರವಾಗಿಯೇ ಮಾತನಾಡುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಬಿ.ಎಸ್.ಭಗವಾನ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುರುಗೇಶಪ್ಪ, ಮಿಲಿó ಶ್ರೀನಿವಾಸ್, ಪತ್ರಕರ್ತ ಅನಂತ್ ನಾಡಿಗ್ ಮಾತನಾಡಿದರು. ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ರಂಗಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಚಂದ್ರಪ್ಪ, ಕಸಾಪ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಉಪ್ಪಾರ ಸಮಾಜದ ಅದ್ಯಕ್ಷ ಟಿ.ಬಿ.ಶಿವಣ್ಣ, ರಾಷ್ಟ್ರೀಯ ಕ್ರೀಡಾಪಟು ಟಿ.ಎ.ಪ್ರಹ್ಲಾದ್, ಆರ್.ಜಿ.ಎಂ.ಆರಾಧ್ಯ, ಟಿ.ಬಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಜಗ್ನಾನಾಥ್, ಲಕ್ಷಿ ್ಮೕಪತಿ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.