ಬದುಕಲು ಕಲಿಸಿದ ಶತ್ರುಗಳಿಗೆ ಥ್ಯಾಂಕ್ಸ್ …
Team Udayavani, Jul 15, 2019, 5:52 AM IST
ಶತ್ರುಗಳಿದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂಬುದು ತಿಳಿದವರ ಮಾತು. ಹೌದು ಈ ಮಾತು ನನ್ನ ಜೀವನದಲ್ಲಿ ಅದೆಷ್ಟೋ ಬಾರಿ ಅನುಭವಕ್ಕೆ ಬಂದಿದೆ. ನಾವು ಏನೋ ಸಾಧನೆ ಮಾಡುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಏನೋ ಒಳ್ಳೆಯದು ನಡೆಯುತ್ತಿದೆ ಎಂದಾಗ ನಮ್ಮ ಶತ್ರುಗಳೆಂದು ಅನಿಸಿಕೊಂಡವರ ಹೊಟ್ಟೆಯಲ್ಲಿ ಬೆಂಕಿ ಬೀಳಲಾರಂಭವಾಗುತ್ತದೆ.
“ಇದೆಲ್ಲ ಹೇಗೆ ಸಾಧ್ಯವಾಯಿತು. ಇದನ್ನು ಹೇಳಿಕೊಟ್ಟವರು ಯಾರು?’ ಎಂಬೆಲ್ಲ ಪ್ರಶ್ನೆಗಳನ್ನು ತಲೆಯೊಳಗೆ ಹಾಕಿಕೊಂಡು ಅಸೂಯೆ ಎಂಬ ಗಿಡವನ್ನು ಪೋಷಿಸಲಾರಂಭಿಸುತ್ತಾರೆ. ಈ ಅಸೂಯೆಯನ್ನು ಅವರಲ್ಲೇ ಇಟ್ಟುಕೊಂಡರೇ ಒಳ್ಳೆಯದು. ಆದರೆ ಆ ವಿಷಯವನ್ನು ಇನ್ನೊಬ್ಬರಿಗೆ ಹೇಳಿ ಅವರಲ್ಲಿ ಅನುಮಾನ, ಅಸೂಯೆಗಳನ್ನು ಹುಟ್ಟಿಸಿ ಅವರ ನೆಮ್ಮದಿಯನ್ನು ಕಿತ್ತು ಬಿಡುವ ಕೆಲಸವನ್ನು ಮಾಡಿ ಬಿಡುತ್ತಾರೆ.ಪದವಿ ವಿದ್ಯಾಭ್ಯಾಸದಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳ್ಳುವವರೆಗೂ ನಾನು ಅದೆಷ್ಟೋ ಜನರನ್ನು ಗಮನಿಸಿದ್ದೇನೆ. ನನ್ನ ಬಗ್ಗೆ ಅವರು ಹೇಳಿದ ಬೇರೆಯವರ ಬಳಿ ಹೇಳಿದ ಮಾತುಗಳು, ನನ್ನ ಸಂತೋಷವನ್ನು ಸಹಿಸಲಾಗದೇ ಪಡುತ್ತಿದ್ದ ಅವರ ಯಾತನೆಗಳು ನನ್ನ ಗಮನಕ್ಕೆ ಬಂದಿವೆ.
ಕೆಲವರು ನಮ್ಮ ಶ್ರೇಯೋಭಿವೃದ್ಧಿಗಾಗಿ ನಿನ್ನಿಂದ ಏನೂ ಸಾಧ್ಯವಿಲ್ಲ. ನೀನು ನಿಷ್ಪ್ರಯೋಜಕ ಎಂದೆಲ್ಲ ಹೇಳುವ ವ್ಯಕ್ತಿಗಳಿಂದ ನಾವು ಬದುಕಿನಲ್ಲಿ ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡು ಮುಂದೆ ಬರುತ್ತೇವೆ. ಅದೇ ಶತ್ರುಗಳಾಡಿದ ಮಾತುಗಳಿಂದ ಹಗೆ ಬೆಳೆಸಿಕೊಂಡು ಅವರ ಮುಂದೆ ನಮ್ಮದು ಸುಂದರ ಬದುಕೆಂದು ತೋರಿಸಲು ನಾವು ಕಷ್ಟಪಡುತ್ತೇವೆ. ಜೀವನದಲ್ಲಿ ಸ್ನೇಹಿತರ ಪಾತ್ರ ಎಷ್ಟಿದೆಯೇ ಅಷ್ಟೇ ಪ್ರಮುಖ ಪಾತ್ರ ಶತ್ರುಗಳದ್ದಿದೆ. ಒಂದು ರೀತಿಯಲ್ಲಿ ಶತ್ರುಗಳು ಕೂಡ ನಮಗೆ ಬದುಕಿನ ಪಾಠಗಳನ್ನು ಕಲಿಸುವವರೇ. ಅವರಿಲ್ಲದೇ ಇದ್ದರೆ ಜೀವನದಲ್ಲಿ ಸಾಧಿಸಬೇಕೆಂಬ ಛಲ ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಜೀವನದ ಪಾಠಗಳನ್ನು ಹೇಳಿಕೊಟ್ಟ ಶತ್ರುಗಳಿಗೆ ಧನ್ಯವಾದಗಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.