ನೀರಿಲ್ಲದ ಶೌಚಾಲಯಕ್ಕೆ ಮಳೆ ನೀರು ಸದ್ಬಳಕೆ
ಗ್ರಾ.ಪಂ.ನಿಂದ ತಾತ್ಕಾಲಿಕ ಸಮಸ್ಯೆಗೆ ಪರಿಹಾರ
Team Udayavani, Jul 15, 2019, 5:08 AM IST
ಸಾರ್ವಜನಿಕ ಶೌಚಾಲಯಕ್ಕೆ ಮಳೆ ನೀರನ್ನು ಶೇಖರಿಸಿಡುತ್ತಿರುವುದು.
ಕೈಕಂಬ: ಕೈಕಂಬದ ಜಂಕ್ಷನ್‌ನ ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ದುಸ್ಥಿತಿಯಲ್ಲಿದ್ದ ಸಾರ್ವಜನಿಕ ಶೌಚಾಲಯಕ್ಕೆ ಮಳೆ ನೀರನ್ನು ಶೇಖರಿಸಿ, ಉಪಯೋಗಿಸುತ್ತಿದ್ದು ಸಮಸ್ಯೆಗೆ ಗ್ರಾ.ಪಂ. ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ.
ನೀರಿನ ಸಮಸ್ಯೆಯಿಂದಾಗಿ ಸ್ವಚ್ಛತೆ ಇಲ್ಲದೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದ ಶೌಚಾಲಯದಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿತ್ತು. ಈ ಸಂದರ್ಭ ಸ್ಥಳೀಯಾಡಳಿತ ಕಟ್ಟಡದ ಛಾವಣಿಯ ಮಳೆಯ ನೀರನ್ನು ಪೈಪುಗಳ ಮೂಲಕ ಟ್ಯಾಂಕ್‌ನಲ್ಲಿ ಶೇಖರಿಸಿ, ಶೌಚಾಲಯಕ್ಕೆ ಉಪಯೋಗವಾಗುವಂತೆ ಮಾಡಿದೆ. ಮಳೆನೀರನ್ನು ಸಂರಕ್ಷಿಸಿ ಅಗತ್ಯದ ಪೂರೈಕೆಯಿಂದಾಗಿ ಸಮಸ್ಯೆ ಪರಿಹಾರವಾಗಿದೆ.
ಸಮಸ್ಯೆ ಪರಿಹಾರಕ್ಕೆ ಶಾಸಕರ ಆಗ್ರಹ
ಶಾಸಕ ಡಾ| ಭರತ್ ಶೆಟ್ಟಿ ಅವರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶೌಚಾಲಯದ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರು. ಶಾಸಕರು ಪಡುಪೆರಾರ ಗ್ರಾ.ಪಂ. ಪಿಡಿಒ ಡಾ| ಮನೋಹರ ಗೌಡ ಅವರಿಗೆ 10 ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಶಾಸಕರು ಸೂಚಿಸಿದ್ದರು.
ಎಂಆರ್‌ಪಿಎಲ್ ಟ್ಯಾಂಕ್‌ನ ಬಳಿಯ ಕೊಳವೆ ಬಾವಿಯಿಂದ ಈ ಶೌಚಾಲಯಕ್ಕೆ ನೀರು ಸರಬರಾಜು ಆಗುತಿತ್ತು. ಅದರೆ ಮಾರ್ಚ್‌ನಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ನೀರು ಸರಬರಾಜು ನಿಲ್ಲಿಸಲಾಯಿತು. ಈ ಮಧ್ಯೆ ಕೆಲವು ದಿನಗಳವರೆಗೆ ರಿಕ್ಷಾಚಾಲಕರು ಟ್ಯಾಂಕರ್‌ನಲ್ಲಿ ನೀರು ತರಿಸಿ, ಶೌಚಾಲಯ ಉಪಯೋಗವಾಗುವಂತೆ ಮಾಡಿದ್ದರು. ಆದರೆ ಮುಂದೆ ಇನ್ನು ನೀರಿನ ಸಮಸ್ಯೆ ತಲೆದೋರಿತು.
ಶೌಚಾಲಯದ ನೀರಿನ ಸಮಸ್ಯೆ ಹೋಗಲಾಡಿಸಲು ಪಡುಪೆರಾರ ಗ್ರಾ.ಪಂ. ಕೈಕಂಬದ ಪಂಚಾಯತ್ ಕಟ್ಟಡದ ಛಾವಣಿಗೆ ಪೈಪ್‌ಗ್ಳನ್ನು ಅಳವಡಿಸಿ ಛಾವಣಿಯಲ್ಲಿ ಬಿದ್ದ ಮಳೆ ನೀರನ್ನು ಟ್ಯಾಂಕ್‌ಗೆ ಬೀಳುವಂತೆ ಮಾಡಲಾಯಿತು. ಶೌಚಾಲಯದಲ್ಲಿ 2 ನೀರಿನ ಟ್ಯಾಂಕ್‌ಗಳಿದ್ದು ಒಂದು ಭರ್ತಿಯಾದ ಬಳಿಕ ಇನ್ನೊಂದಕ್ಕೆ ನೀರು ತುಂಬುವಂತೆ ಅದಕ್ಕೆ ಪೈಪ್ ಅಳವಡಿಸಲಾಗಿದೆ. ಇದರಿಂದಾಗಿ ನೀರಿನ ತಾತ್ಕಾಲಿಕ ಸಮಸ್ಯೆ ಪರಿಹಾರವಾಯಿತು.
ತಾತ್ಕಾಲಿಕ ಸಮಸ್ಯೆ ಪರಿಹಾರ
ಶೌಚಾಲಯಕ್ಕೆ ತಾತ್ಕಾಲಿಕವಾಗಿ ಛಾವಣಿಗೆ ಬಿದ್ದ ಮಳೆ ನೀರನ್ನು ಟ್ಯಾಂಕ್‌ನಲ್ಲಿ ಶೇಖರಿಸಲು ಪೈಪುಗಳನ್ನು ಅಳವಡಿಸಲಾಗಿದೆ. ಸುಮಾರು 1,500 ರೂಪಾಯಿ ಖರ್ಚು ಆಗಿದೆ. ಈ ಪ್ರದೇಶದಲ್ಲಿ ಇನ್ನೊಂದು ಕೊಳವೆಬಾವಿಗೆ ಪಂಚಾಯತ್ ನಿರ್ಣಯ ಮಾಡಲಾಗಿದೆ. ಶೌಚಾಲಯದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಆದರೆ ಸಾರ್ವಜನಿಕರು ನೈರ್ಮಲ್ಯವನ್ನು ಕಾಪಾಡಬೇಕಿದೆ.
– ಡಾ|ಮನೋಹರ ಗೌಡ,ಪಿಡಿಒ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.