ಸಮಬಲದ ಹೋರಾಟ : ಕ್ರಿಕೆಟ್ ಜನಕರಿಗೆ ಚೊಚ್ಚಲ ವಿಶ್ವಕಪ್ ಕಿರೀಟ
ಕೇನ್ ಪಡೆಗೆ ಕೈಕೊಟ್ಟ ಲಕ್ ; ಮೋರ್ಗಾನ್ ಪಡೆಗೆ ಜಾಕ್ ಪಾಟ್
Team Udayavani, Jul 15, 2019, 12:04 AM IST
ಲಾರ್ಡ್ಸ್: ಕ್ರಿಕೆಟ್ ಕಾಶಿಯಲ್ಲಿ ನೂತನ ವಿಶ್ವಚಾಂಪಿಯನ್ನರ ಉದಯವಾಗಿದೆ. ಇಂಗ್ಲಂಡ್ ಮತ್ತು ನ್ಯೂಝಿಲ್ಯಾಂಡ್ ನಡುವೆ ಇಂದು ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಬ್ಲ್ಯಾಕ್ ಕ್ಯಾಪ್ಸ್ ನ್ಯೂಝಿಲ್ಯಾಂಡ್ ಅನ್ನು ಬಗ್ಗುಬಡಿದ ಕ್ರಿಕೆಟ್ ಜನಕರು ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೈನಲ್ ಪಂದ್ಯ ಟೈ ಆಗಿ ಸೂಪರ್ ಓವರಿನ ತನಕ ಸಾಗಿದ ಈ ಹಣಾಹಣಿಯಲ್ಲಿ ಸೂಪರ್ ಓವರ್ ಸಹ ಟೈಯಲ್ಲಿ ಅಂತ್ಯಗೊಂಡಿತು. ಆದರೆ ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯ್ತು.
ಸೂಪರ್ ಓವರಿನಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಇಂಗ್ಲಂಡ್ ತಂಡವು ಫೈನಲ್ ಪಂದ್ಯದ ಹೀರೋ ಬೆನ್ ಸ್ಟೋಕ್ಸ್ ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ 1 ಓವರುಗಳಲ್ಲಿ 15 ರನ್ ಬಾರಿಸಿತು. ಇದನ್ನು ಬೆನ್ನಟ್ಟಿದ ನ್ಯೂಝಿಲ್ಯಾಂಡ್ ತಂಡವು 6 ಎಸೆತಗಳಲ್ಲಿ 15 ರನ್ ಬಾರಿಸಿದಾಗ ಪಂದ್ಯ ಮತ್ತೊಮ್ಮೆ ಟೈ ಆಯಿತು.
ಆದರೆ ಒಟ್ಟಾರೆ ಪಂದ್ಯದಲ್ಲಿ ಒಂದು ತಂಡವು ಬಾರಿಸಿದ ಒಟ್ಟು ಬೌಂಡರಿಗಳ ಆಧಾರದಲ್ಲಿ ವಿಶ್ವವಿಜಯಿಗಳನ್ನು ನಿರ್ಣಯಿಸಲಾಯಿತು. ಅದರಂತೆ ಇಂದಿನ ಪಂದ್ಯದಲ್ಲಿ ಒಟ್ಟು 22 ಬೌಂಡರಿಗಳನ್ನು ಬಾರಿಸಿದ ಇಯಾನ್ ಮೋರ್ಗಾನ್ ನೇತೃತ್ವದ ಇಂಗ್ಲೆಂಡ್ ತಂಡವು ನೂತನ ವಿಶ್ವಚಾಂಪಿಯನ್ ಆಗಿ ಮೂಡಿಬಂದಿತು. ನ್ಯೂಝಿಲ್ಯಾಂಡ್ ತಂಡವು ತನ್ನ ಇನ್ನಿಂಗ್ಸ್ ನಲ್ಲಿ ಒಟ್ಟಾರೆ 14 ಬೌಂಡರಿಗಳನ್ನು ಬಾರಿಸಿತ್ತು.
ವಿಶ್ವಕಪ್ ಇತಿಹಾಸದಲ್ಲಿ ಒಂದು ಸಲವೂ ಕಪ್ ಗೆಲ್ಲದಿರುವ ಎರಡು ತಂಡಗಳ ನಡುವೆ ನಡೆದ ಇಂದಿನ ಮೆಗಾ ಫೈನಲ್ ಸೆಣೆಸಾಟದಲ್ಲಿ ಟಾಸ್ ಗೆಲ್ಲುವ ಅದೃಷ್ಟ ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡದ ಪಾಲಾಯಿತು. ಆದರೆ ಆಂಗ್ಲರ ಬಿಗು ಬೌಲಿಂಗ್ ಮತ್ತು ಚುರುಕಿನ ಫೀಲ್ಡಂಗ್ ಎದುರು ಕಿವೀಸ್ ಆಟ ನಡೆಯಲಿಲ್ಲ. ನಿಧಾನಗತಿಯ ಪಿಚ್ ನಲ್ಲಿ ರನ್ ಗಳಿಸಲು ಒದ್ದಾಡಿದ ನ್ಯೂಝಿಲ್ಯಾಂಡ್ ಬ್ಯಾಟ್ಸ್ ಮನ್ ಗಳು ನಿಗದಿತ 50 ಓವರುಗಳ ಮುಕ್ತಾಯಕ್ಕೆ 8 ವಿಕೆಟ್ ಗಳನ್ನು ಕಳೆದುಕೊಂಡು 241 ರನ್ ಗಳಷ್ಟನ್ನೇ ಕಲೆಹಾಕಿದರು.
ಕಿವೀಸ್ ಪರ ಹೆನ್ರಿ ನಿಕೊಲೋಸ್ ಅವರಿಂದ ಮಾತ್ರವೇ ಅರ್ಧಶತಕ ದಾಖಲಾಯಿತು, ಅವರ ಗಳಿಕೆ 55 ರನ್. ಎಡಗೈ ಬ್ಯಾಟ್ಸ್ ಮನ್ ವಿಲಿಯಮ್ ಲ್ಯಾಥಮ್ (47) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು, ಕೇವಲ 3 ರನ್ ಗಳ ಅಂತರದಲ್ಲಿ ಅವರು ಅರ್ಧಶತಕ ವಂಚಿತರಾದರು. ಉಳಿದಂತೆ ನಾಯಕ ಕೇನ್ ವಿಲಿಯಮ್ಸ್ (30), ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ (19), ನೀಶಮ್ (19) ಮತ್ತು ಗ್ರ್ಯಾಂಡ್ ಹೋಮ್ (16) ಗಳಿಕೆಗಳು ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣವಾಯ್ತು.
ಇಂಗ್ಲಂಡ್ ಪರ ರೋಜರ್ ವೋಕ್ಸ್ ಬಿಗಿ ದಾಳಿ ಸಂಘಟಿಸಿ 3 ವಿಕೆಟ್ ಪಡೆದು ಮಿಂಚಿದರು. ಅವರ ಬೌಲಿಂಗ್ ಫಿಗರ್ 09-0-37-03. ಪ್ಲಂಕೆಟ್ ಅವರು 3 ವಿಕೆಟ್ ಉರುಳಿಸಿದರು. ಉಳಿದಂತೆ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ 01 ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್ ಗಳ ಎಕಾನಮಿ 4.5ರ ಸರಾಸರಿಯಲ್ಲಿದ್ದುದು ಆಂಗ್ಲರ ಬೌಲಿಂಗ್ ಶಿಸ್ತಿಗೆ ಸಾಕ್ಷಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.