ಹೊಸಾಡು ಗ್ರಾಮಸ್ಥರಿಗೆ ಕಾಲು ಸಂಕ ಇನ್ನೂ ಕನಸು
Team Udayavani, Jul 15, 2019, 5:30 AM IST
ಬೈಂದೂರು: ಮಳೆಗಾಲದಲ್ಲಿ ಸರ್ಕಸ್ ಮಾಡುತ್ತ ಹೊಳೆ ದಾಟುವ ಹೊಸಾಡು ಗ್ರಾಮದ ಜನರಿಗೆ ಈ ವರ್ಷವೂ ಕಾಲುಸಂಕ ನಿರ್ಮಾಣದ ಆಸೆ ಈಡೇರಿಲ್ಲ.
ಕಳೆದ ವರ್ಷ ಇಲಾಖೆ ಅನುದಾನ ಬಿಡುಗಡೆ ಮಾಡಿದ್ದರೂ, ಕಾಮಗಾರಿ ಅನುಷ್ಠಾನಕ್ಕೆ ವಿಳಂಬ ವಾಗಿರುವುದರಿಂದ ಕಾಲ್ತೋಡು ಗ್ರಾ.ಪಂ. ವ್ಯಾಪ್ತಿಯ ಬೋಳಂಬಳ್ಳಿ ಸಮೀಪದ ಹೊಸಾಡು ಜನರು ಆತಂಕದಿಂದಲೇ ಹೊಳೆ ದಾಟಬೇಕಾಗಿದೆ.
10 ಲಕ್ಷ ರೂ. ಅನುದಾನ ಘೋಷಣೆ ಮಾತ್ರ
ಇಲ್ಲಿನ ಸಮಸ್ಯೆ ಬಗ್ಗೆ ಕಳೆದ ವರ್ಷ ಉದಯ ವಾಣಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಶಾಸಕರು, ಸ್ಥಳಕ್ಕೆ ಭೇಟಿ ನೀಡಿ ಕಾಲುಸಂಕ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಜತೆಗೆ ಕಾಮಗಾರಿಗೆ 10 ಲಕ್ಷ ರೂ. ಅನುದಾನವನ್ನು ಶಾಸಕರು ಮೀಸಲಿರಿಸಿದ್ದರು. ಆದರೆ ಇಲಾಖೆಯ ಮಂದಗತಿಯ ಪ್ರಕ್ರಿಯೆಯಿಂದಾಗಿ ಈ ವರೆಗೆ ಕಾಮಗಾರಿ ಶುರುವಾಗಿಲ್ಲ.
ಜನರ ಸಂಕಷ್ಟ
ಈ ಭಾಗದ 40ಕ್ಕೂ ಹೆಚ್ಚು ಕುಟುಂಬಗಳು ಹೊಸಾಡು, ಕಾಡಿನಹೊಳೆ, ಮುತ್ತಣ್ಕಿ, ಕೇಂಜಿ, ಕೂಡಾಲು ಭಾಗದ ಜನರು ಕಾಲ್ತೋಡಿಗೆ ತೆರಳ ಬೇಕಾದರೆ ಹೊಳೆ ದಾಟಿಯೇ ಹೋಗಬೇಕಾಗಿದೆ.
ನಾಲ್ಕು ವರ್ಷಗಳ ಹಿಂದೆ ಇದ್ದ ಕಾಲು ಸಂಕ ನೀರುಪಾಲಾಗಿದ್ದು, ತಾತ್ಕಾಲಿಕವಾಗಿ ಸ್ಥಳೀಯರೇ ಕಾಲು ಸಂಕ ನಿರ್ಮಿಸಿಕೊಂಡಿದ್ದಾರೆ.
ಹೊಸಾಡು -ಬೋಳಂಬಳ್ಳಿ ನಡುವೆ ಹರಿಯುವ ಸುಮನಾವತಿಯ ಉಪನದಿ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಜನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ.
ದೊಡ್ಡ ಮಳೆ ಬಂದರೆ ಮಕ್ಕಳು ಶಾಲೆಗೆ ತೆರಳುವಂತಿಲ್ಲ. ಪ್ರತಿದಿನ ಪಾಲಕರಿಗೆ ಮಕ್ಕಳನ್ನು ಹೊಳೆ ದಾಟಿಸಿ ಬರುವುದೇ ದೊಡ್ಡ ಕೆಲಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.