ರೋಟರಿ ಸೇವೆ ಶ್ಲಾಘನೀಯ: ಶಾಸಕ
Team Udayavani, Jul 15, 2019, 12:33 PM IST
ರಾಮನಗರ: ರಾಜಕೀಯೇತರ ಸಂಸ್ಥೆ ಯಾಗಿ, ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಲು ರೋಟರಿ ಸಂಸ್ಥೆ ಮೂಲಕ ಸಾಕಷ್ಟು ಅವಕಾಶಗಳಿವೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಬಿಡದಿಯ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ನಡೆದ ರೋಟರಿ ಬಿಡದಿ ಸೆಂಟ್ರಲ್ನ ನೂತನ ಪದಾಧಿಕಾ ರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಸೇವೆ ನಡುವೆ ಸದಸ್ಯರ ನಡುವೆ ಪರಸ್ಪರ ವಿಶ್ವಾಸ ವೃದ್ಧಿ, ಸಮಾಜದಲ್ಲಿ ವ್ಯಕ್ತಿಗತ ಗೌರ ವದ ಜೊತೆಗೆ ವ್ಯಾಪಾರ ವೃದ್ಧಿಗೂ ರೋಟರಿ ಸಂಸ್ಥೆ ಉತ್ತಮ ವೇದಿಕೆ ಎಂದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡು ಭಾರತ ಪಲ್ಸ್ ಪೋಲಿಯೋ ಮುಕ್ತ ದೇಶವನ್ನಾಗಿಸಲು ರೋಟರಿ ಸಂಸ್ಥೆ ತನ್ನ ಪಾಲಿನ ಕೊಡುಗೆ ನೀಡಿದೆ. ರಾಜಕಾರಣಿಗಳಿಗಿಂತ ರೋಟರಿ ಸಂಸ್ಥೆಯ ಪದಾಧಿಕಾರಿಗಳಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಇದೆ ಎಂದು ಅಭಿಪ್ರಾಯಪಟ್ಟರು.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಗೆ(ಸಿಎಸ್‌ಆರ್ ಆಕ್ಟಿವಿಟಿ) ಮೀಸಲಿರುವ ನಿಧಿಯಡಿ ಕೈಗೊಳ್ಳಬ ಹುದಾದ ಕಾರ್ಯಕ್ರಮಗಳಲ್ಲಿ ರೋಟರಿ ಸಂಸ್ಥೆಯನ್ನು ತೊಡಗಿಸಿಕೊಂಡು ಸಾಮಾ ಜಿಕ ಸೇವೆ ಇನ್ನಷ್ಟು ವಿಸ್ತರಿಸಬ ಹುದು.ಬಡವರಿಗಾಗಿ ಪರಿಣಾಮಕಾರಿ ಯೋಜನೆ ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆ ಜಿಲ್ಲಾ ಅನುಷ್ಟಾಪನಾ ಅಧಿಕಾರಿ ಆರ್.ಕುಮಾರಸ್ವಾಮಿ, ಕೋಟಿ- ನಾಟಿ ಕಾರ್ಯಕ್ರಮ ಹಮ್ಮಿಕೊ ಳ್ಳಲು ರೋಟರಿ ಸಂಸ್ಥೆ ಉದ್ದೇಶಿಸಿದ್ದು, ನೂತನ ಪದಾಧಿಕಾರಿಗಳು ಅನುಷ್ಠಾನಗೊ ಳಿಸಿ ಎಂದು ಹೇಳಿದರು.
ಪದವಿ ಸ್ವೀಕಾರ:ರೋಟರಿ ಬಿಡದಿ ಸೆಂಟ್ರಲ್ 2019- 20ನೇ ಸಾಲಿನ ಅಧ್ಯಕ್ಷರಾಗಿ ಎಂ.ಚಂದ್ರ ಶೇಖರ್ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ವಸಂತ ಕುಮಾರ್, ಉಪಾಧ್ಯಕ್ಷ ನಾಗರಾಜು, ಖಜಾಂಚಿ ಬಸವರಾಜ ಅರಸು, ಜಂಟಿ ಕಾರ್ಯದರ್ಶಿ ಕೃಷ್ಣ ಹಾಗೂ 7 ಮಂದಿ ನಿರ್ದೇಶಕರು ಪದವಿ ಸ್ವೀಕರಿಸಿದರು.
ಮೀಸೆ ರಾಮಕೃಷ್ಣಯ್ಯ ಮತ್ತು ಅಜ್ಗರ್ ಪಾಷಾ ಸ್ಟಾರ್ ರೋಟೆರೀಯನ್ ಗೌರವಕ್ಕೆ ಪಾತ್ರರಾದರು. ಬೆಂಗಳೂರಿನ ವಿಕ್ಟೋರಿ ಯಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನಾಗ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಸಂಸ್ಥೆ ಸಹಾಯಕ ಜಿಲ್ಲಾ ಪಾಲಕ ಸಿದ್ಧಪ್ಪಾಜಿ, ನಿಕಟಪೂರ್ವ ಅಧ್ಯಕ್ಷ ಚಿಕ್ಕಣ್ಣಯ್ಯ, ಕಾರ್ಯದರ್ಶಿ ಶಿವರಾಜು, ಪದಾಧಿಕಾರಿಗಳಾದ ಸಿ.ಉಮೇಶ್, ಮಲ್ಲೇಶ್, ಬಿ.ಎಂ.ರಮೇಶ್‌ಕುಮಾರ್, ಶ್ರೀನಿವಾಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.