ದೇಶದ ಪ್ರಗತಿಗೆ ಸಹಕಾರಿ ಕ್ಷೇತ್ರ ಕೊಡುಗೆ
ಸಹಕಾರಿ ಸಂಘಗಳು ಜನರ ಆಶಯಕ್ಕೆ ಸ್ಪಂದಿಸುತ್ತಿವೆ: ರಾಜಾ ಅಮರೇಶ್ವರ ನಾಯಕ
Team Udayavani, Jul 15, 2019, 1:21 PM IST
ಲಿಂಗಸುಗೂರು: ರಡ್ಡೇರ್ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಹಾಗೂ ದಶಮಾನೋತ್ಸವ ಸಮಾರಂಭವನ್ನು ವಿವಿಧ ಮಠಾಧಿಧೀಶರು ಉದ್ಘಾಟಿಸಿದರು.
ಲಿಂಗಸುಗೂರು: ಶಿಕ್ಷಣ, ಸಹಕಾರಿ ಕ್ಷೇತ್ರಗಳು ಪ್ರಗತಿಯತ್ತ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ. ದೇಶದ ಆರ್ಥಿಕ ಪ್ರಗತಿಗೆ ಸಹಕಾರಿ ಕ್ಷೇತ್ರಗಳ ಕೊಡುಗೆ ಅಪಾರ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ರವಿವಾರ ಏರ್ಪಡಿಸಿದ್ದ ರಡ್ಡೇರ್ ಪತ್ತಿನ ಸೌಹಾರ್ದ ಸಹಕಾರಿ ನೂತನ ಕಟ್ಟಡ ಉದ್ಘಾಟನೆ ಮತ್ತು ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೌಲಭ್ಯ ಹಾಗೂ ಸೇವೆಗಳು ನಿಧಾನಗತಿಯಲ್ಲಿ ದೊರೆಯುತ್ತವೆ. ಆದರೆ ಸಹಕಾರಿಗಳಲ್ಲಿ ಅಷ್ಟೇ ವೇಗದಲ್ಲಿ ಸೌಲಭ್ಯಗಳು ಹಾಗೂ ಸೇವೆಗಳು ಸಿಗಲಿವೆ. ಹೀಗಾಗಿ ಜನರು ಸಹಕಾರ ಸಂಘಗಳ ಮೇಲೆ ಬಹಳ ವಿಶ್ವಾಸವಿರಿಸಿದ್ದಾರೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸೌಹಾರ್ದ ಸಹಕಾರಿ ಸಂಘಗಳು ಜನರ ಆಶಯಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿವೆ. ಸಮಾನತೆ ತತ್ವ ಸಿದ್ಧಾಂತಗಳ ಜೊತೆ ಸಹಕಾರಿ ಸಂಸ್ಥೆಗಳು ಬೆಳೆಯಬೇಕು. ಒಬ್ಬರಿಗೊಬ್ಬರು ಸಹಕಾರದಿಂದ ಬದುಕುಬೇಕು. ಆಗ ಸಹಕಾರಿ ಹೆಸರಿಗೆ ಮಹತ್ವ ಬರುತ್ತದೆ. ಈ ನಿಟ್ಟಿನಲ್ಲಿ ರಡ್ಡೇರ್ ಪತ್ತಿನ ಸೌಹಾರ್ದ ಸಹಕಾರಿ ಸಂಘ 10 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಸ್ವಂತ ಕಟ್ಟಡ ಹೊಂದಿ ಇತರೆ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ ಎಂದರು.
ನಂದವಾಡಗಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಬಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಪ್ರಜಾಪಿತ ಈಶ್ವರೀಯ ವಿವಿ ಬಿ.ಕೆ. ವನಜಾಕ್ಷಿ ಅಕ್ಕನವರು, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ. ಕೃಷ್ಣಾರೆಡ್ಡಿ ಕೋಲಾರ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಆರ್‌ಡಿಸಿಸಿ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ, ಸಹಕಾರಿ ಸಂಘಗಳ ಜೆಡಿ ಐ.ಎಸ್. ಗಿರಡ್ಡಿ, ರಡ್ಡೇರ ಪತ್ತಿನ ಸೌಹಾರ್ದ ಸಂಘ ಅಧ್ಯಕ್ಷ ಎಚ್.ಕುಮಾರಪ್ಪ, ಡಾ| ಎನ್.ಎಲ್.ನಡುವಿನಮನಿ, ವಿಶ್ವನಾಥ ರೆಡ್ಡಿ ಹಿರೇಮಠ, ತಿಮ್ಮಯ್ಯ ಶೆಟ್ಟಿ, ಪಂಪಣ್ಣ ಗುಂಡಳ್ಳಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.