ತೂಕ ಇಳಿಸುವ ಮಖಾನ
Team Udayavani, Jul 16, 2019, 5:16 AM IST
ಇಂಗ್ಲಿಷ್‌ನಲ್ಲಿ ಫಾಕ್ಸ್ ನಟ್ಸ್ ಎಂದು ಕರೆಸಿಕೊಳ್ಳುವ ಮಖಾನ ರುಚಿಯಾದ ತಿಂಡಿಗೆ ಮಾತ್ರವಲ್ಲ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಪದಾರ್ಥ. ಆರೋಗ್ಯಕರ ತಿಂಡಿಗಳಲ್ಲಿ ಇತ್ತೀಚೆಗೆ ಮಖಾನ ಕೂಡ ಒಂದಾಗಿ ಬದಲಾಗಿದೆ. ಸುವಾಸನೆಯಿಂದ ಹಿಡಿದು ಹುರಿದ ಮಖಾನ ವರೆಗೂ ಮಾರುಕಟ್ಟೆಯಲ್ಲಿ ಇದರ ತಿಂಡಿಗಳು ಲಭ್ಯವಿವೆ. ಈ ಆರೋಗ್ಯಕರ ಮಖಾನದ ಇನ್ನೊಂದು ಪ್ರಮುಖ ಲಕ್ಷಣ ಕಂಡುಬಂದಿದೆ. ಅದೇ ತೂಕ ಇಳಿಕೆ. ಹೌದು ಮಖಾನ ದೇಹದ ತೂಕ ಇಳಿಕೆ ಒಂದು ಉತ್ತಮ ಪದಾರ್ಥ. ಮನೆಯಲ್ಲೇ ತಯಾರಿಸಿದ ತಿಂಡಿಗಳನ್ನು ಸೇವಿಸುವುದು ದೇಹದ ತೂಕ ಇಳಿಕೆ ಹೆಚ್ಚು ಪ್ರಯೋಜನಕಾರಿ.
ಕ್ಯಾಲೋರಿ
50 ಗ್ರಾಮ್ ಒಣ ಹಾಗೂ ಹುರಿದ ಮಖಾನದಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಥವಾ ಸೋಡಿಯಂ ಇಲ್ಲದೆ 180 ಕ್ಯಾಲೋರಿಗಳಿವೆ. ಹೀಗಾಗಿ ಇದು ಕಡಿಮೆ ಕ್ಯಾಲೋರಿ ಇರುವ ಆಹಾರ. ಇದೇ ಕಾರಣ ತೂಕ ಇಳಿಕೆಯ ಡಯಟ್‌ನಲ್ಲಿ ಇದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
ಪೋಷಕಾಂಶಗಳು
ಮಖಾನ ಪ್ರೊಟಿನ್ ಹಾಗೂ ಉತ್ತಮ ಕಾಬೋìಹೈಡ್ರೇಟ್‌ಗಳನ್ನು ಹೇರಳವಾಗಿ ಹೊಂದಿದೆ. ಕ್ಯಾಂಪ್ಪೆರಾಲ್ ಎಂಬ ಫ್ಲೇವನಾಯ್ಡ ಅನ್ನು ಹೊಂದಿರುವ ಮಖಾನ ವಯಸ್ಸಾಗುವಿಕೆ ಹಾಗೂ ಊರಿಯೂತದ ವಿರುದ್ಧ ಹೋರಾಡುತ್ತದೆ. ಅಂಟು ರಹಿತವಾಗಿದ್ದು, ಮ್ಯಾಗ್ನೇಶಿಯಂ ಅಧಿಕವಾಗಿದೆ. ಹೃದಯ ರೋಗಿಗಳಿಗೆ ಸೂಕ್ತ ಆಹಾರ. ಕಾಬೋìಹೈಡ್ರೇಟ್‌ಗಳಿಂದ ಶ್ರೀಮಂತವಾಗಿರುವುದರಿಂದ ಈ ಪಫ್x ಕಮಲದ ಬೀಜಗಳಲ್ಲಿ ಸಾಮಾನ್ಯ ಆಹಾರವಾದ ಬ್ರೆಡ್ ಮತ್ತು ಅಕ್ಕಿಗಿಂತ ಜಿಐ ಸೂಚ್ಯಂಕವು ಕಡಿಮೆಯಿದೆ. ಕಬ್ಬಿಣದ ಅಂಶದಿಂದಲೂ ಸಮೃದ್ಧವಾಗಿದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ರಚನೆಗೆ ಮುಖ್ಯವಾಗಿದೆ.
ತೂಕ ಇಳಿಕೆಗೆ ಮಖಾನ
ಕೊಲೆಸ್ಟ್ರಾಲ್ ಹಾಗೂ ಸಾಚ್ಯುರೇಟೆಡ್ ಕೊಬ್ಬು ಇಲ್ಲದಿರುವುದು ದೇಹದ ತೂಕ ಇಳಿಕೆಗೆ ಪೂರಕವಾದ ಆಹಾರ. ಕಡಿಮೆ ಜಿಐ ಸೂಚ್ಯಂಕ ಇರುವುದು ಹೊಟ್ಟೆ ಸಂಪೂರ್ಣಗೊಂಡ ಭಾವ ನೀಡುವುದರಿಂದ ಹಸಿವಾಗದಂತೆ ಮಾಡುತ್ತದೆ. ಆಯುರ್ವೇದದ ಪ್ರಕಾರ ಮಖಾನ ದೇಹದ ತೂಕ ಇಳಿಕೆ ಮಾತ್ರವಲ್ಲದೆ ಕಿಡ್ನಿಯನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ.
ಬೇರೆ ಪ್ರಯೋಜನಗಳು
1 ವಯಸ್ಸಾಗದಂತೆ ತಡೆಯುತ್ತದೆ.
2 ಆರೋಗ್ಯಕರ ಹೃದಯಕ್ಕೆ ಸಹಕಾರಿ.
3 ನಿದ್ರಾಹೀನತೆ ಕಡಿಮೆಗೊಳಿಸುವುದು.
4 ಬಂಜೆತನ ನಿವಾರಣೆ.
- ಆರ್.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.