ಟೆಸ್ಟ್ ನಾಯಕತ್ವಕ್ಕೆ ಮಾತ್ರ ಕೊಹ್ಲಿ ಸೀಮಿತ?
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮೂಲಗಳ ಮಾಹಿತಿ
Team Udayavani, Jul 16, 2019, 5:12 AM IST
ಹೊಸದಿಲ್ಲಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ಟೀಮ್ ಇಂಡಿಯಾ ದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮ ನಡುವೆಯೇ ಒಳಜಗಳ ಶುರುವಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬರಲಾರಂಭಿಸಿವೆ. ಸೋಲಿನ ಕಾರಣವೊಡ್ಡಿ ಸೀಮಿತ ಓವರ್‌ಗಳ ನಾಯಕತ್ವವನ್ನು ಕೊಹ್ಲಿಯ ಬದಲು ರೋಹಿತ್‌ಗೆ ನೀಡಬೇಕು ಎಂದು ಸ್ವತಃ ಬಿಸಿಸಿಐ ಒಳಗೆಯೇ ಒತ್ತಾಯ ಕೇಳಿಬಂದಿದೆ ಎಂದು ಮೂಲಗಳು ಹೇಳಿವೆ.
ಒಡೆದ ಮನೆಯೇ ಟೀಮ್ ಇಂಡಿಯಾ?
ಬಿಸಿಸಿಐ ಆಡಳಿತಾಧಿಕಾರಿಗಳ ಜತೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮ ಹಾಗೂ ತಂಡದ ಕೋಚ್ ರವಿಶಾಸಿŒ ಕಳೆದ ವರ್ಷ ಸಭೆ ಮಾಡಿದ್ದರು. ಈ ವೇಳೆ ವಿಶ್ವಕಪ್ ಮತ್ತು ಐಪಿಎಲ್‌ನ ಪೂರ್ವಸಿದ್ಧತೆ ಹಾಗೂ ಆಟಗಾರರಿಗೆ ನೀಡಬೇಕಾದ ವಿಶ್ರಾಂತಿ ಬಗ್ಗೆ ಚರ್ಚೆಯೂ ನಡೆದಿತ್ತು. ಈ ವೇಳೆ ಇಬ್ಬರೂ ಕ್ರಿಕೆಟಿಗರ ನಡುವಿನ ಮಾತಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು ಎನ್ನಲಾಗಿದೆ. ಆಗಲೇ ಟೀಮ್ ಇಂಡಿಯಾದಲ್ಲಿ ಎಲ್ಲ ಸರಿ ಇರಲಿಲ್ಲ ಎನ್ನುವುದು ಸ್ವಲ್ಪ ಮಟ್ಟಿಗೆ ಬಹಿರಂಗವಾಗಿತ್ತು.
ಇದೀಗ ವಿಶ್ವಕಪ್ ಸೆಮೀಸ್ ಸೋಲು ಕೊಹ್ಲಿಯ ಸೀಮಿತ ಓವರ್‌ಗಳ ನಾಯಕತ್ವದ ಕುರ್ಚಿಯನ್ನೇ ಅಲುಗಾಡಿಸಿದೆ. ಹೀಗಾಗಿ ಬಿಸಿಸಿಐ ವತಿಯಿಂದ ನಡೆಯಲಿರುವ ಅವಲೋಕನ ಸಭೆಯತ್ತಲೇ ಎಲ್ಲರ ಚಿತ್ತ ಹರಿದಿದೆ. ಶೀಘ್ರವೇ ಈ ಸಭೆ ನಡೆಯಲಿದೆ. ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೋಚ್ ರವಿಶಾಸಿŒ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಎಲ್ಲಿ ತಪ್ಪು ಆಗಿದೆ, ಮುಂದೆ ಅದನ್ನು ಸರಿ ಪಡಿಸುವುದು, ನಾಯಕರ ನಡುವೆ ಪರಸ್ಪರ ಅಸಮಾಧಾನವಿದ್ದರೆ ಅದನ್ನು ಹೇಗೆ ಸರಿಪಡಿಸುವುದು ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ನಾಯಕತ್ವ ಬದಲಾವಣೆ ಸಾಧ್ಯತೆ
ಬಿಸಿಸಿಐ ಮೂಲಗಳ ಪ್ರಕಾರ ಕೊಹ್ಲಿ ಏಕದಿನ, ಟಿ20 ನಾಯಕತ್ವವನ್ನು ಕಳೆದುಕೊಳ್ಳಲಿದ್ದಾರೆ. ಭವಿಷ್ಯದ ಮಹತ್ವದ ಕೂಟಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇಂತಹ ನಿರ್ಣಯ ತೆಗೆದುಕೊಳ್ಳಬಹುದು. ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರಿಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.