ಬೆಳೆವಿಮೆ ಮಂಜೂರು; ಚೇತರಿಸಿಕೊಂಡ ರೈತರು
•6 ತಾಲೂಕಿಗೆ ಒಟ್ಟು 158 ಕೋ. ರೂ. ಬೆಳೆವಿಮೆ ಮಂಜೂರು•ಮುಂಗಾರು ಕೃಷಿ ಚಟುವಟಿಕೆ ಚುರುಕು
Team Udayavani, Jul 16, 2019, 10:30 AM IST
ಸಂಗ್ರಹ ಚಿತ್ರ
ಹಾವೇರಿ: ನಿರಂತರ ಬರದಿಂದ ತತ್ತರಿಸಿರುವ ಜಿಲ್ಲೆಯ ಅನ್ನದಾತರಿಗೆ ಬೆಳೆ ವಿಮೆ ಹಣ ಮಂಜೂರಿಯಾಗಿದ್ದು, ಇದರಿಂದಾಗಿ ಅನ್ನದಾತರು ತುಸು ಚೇತರಿಸಿಕೊಂಡು, ಈ ಬಾರಿ ಮತ್ತೆ ಮುಂಗಾರು ಹಂಗಾಮಿನ ಕೃಷಿಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಿದೆ.
ಹಿರೇಕೆರೂರ ಹೊರತುಪಡಿಸಿ ಉಳಿದ ಆರು ತಾಲೂಕುಗಳಲ್ಲಿ ಪ್ರಮುಖ ಹಾಗೂ ಇತರ ಬೆಳೆಗಳು ಸೇರಿ ಒಟ್ಟು 158.38ಕೋಟಿ ರೂ.ಗಳ ವಿಮೆ ಬಂದಿದ್ದು, ಇದು 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆಯಾಗಿದೆ.
ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಣಿಬೆನ್ನೂರ ತಾಲೂಕು ಬರಪೀಡಿತವಾಗಿದ್ದರಿಂದ ಅಲ್ಲಿನ 23,913ರೈತರಿಗೆ 44.74ಕೋಟಿ ರೂ.ಗಳ ವಿಮೆ ಮಂಜೂರಾಗಿದೆ. ಇದು ಜಿಲ್ಲೆಯಲ್ಲಿಯೇ ಅತಿಹೆಚ್ಚು ವಿಮೆ ಹಣ ಮಂಜೂರಾದ ತಾಲೂಕಾಗಿದೆ. ಹಾವೇರಿ ತಾಲೂಕಿನ 10,619 ರೈತರಿಗೆ 15.36ಕೋಟಿ ರೂ. ವಿಮೆ ಮಂಜೂರಾಗಿದ್ದು ಇದು ಜಿಲ್ಲೆಯಲ್ಲಿ ಅತಿಕಡಿಮೆ ವಿಮೆ ಮಂಜೂರಾಗಿರುವ ತಾಲೂಕಾಗಿದೆ.
ತಾಲೂಕಾವಾರು ವಿವರ: ಬ್ಯಾಡಗಿ ತಾಲೂಕಿನ 8,238 ರೈತರಿಗೆ ಸಂಬಂಧಿಸಿ 16,96,02,220 ರೂ., ಹಾನಗಲ್ಲ ತಾಲೂಕಿನ 15,092 ರೈತರಿಗೆ ಸಂಬಂಧಿಸಿ 35,68,58,453 ರೂ., ಹಾವೇರಿ ತಾಲೂಕಿನ 10,169 ರೈತರಿಗೆ ಸಂಬಂಧಿಸಿ 15,36,48,544ರೂ., ರಾಣಿಬೆನ್ನೂರ ತಾಲೂಕಿನ 23,913 ರೈತರಿಗೆ ಸಂಬಂಧಿಸಿ 44,74,75,356 ರೂ., ಸವಣೂರ ತಾಲೂಕಿನ 5,190 ರೈತರಿಗೆ ಸಂಬಂಧಿಸಿ 14,07,55,191ರೂ. ಹಾಗೂ ಶಿಗ್ಗಾವಿ ತಾಲೂಕಿನ 10,374 ರೈತರಿಗೆ ಸಂಬಂಧಿಸಿ 31,54,80,864 ರೂ. ಹೀಗೆ ಒಟ್ಟು 72,976 ರೈತರಿಗೆ ಸಂಬಂಧಿಸಿ 158,38,20,630 ರೂ. ಬೆಳೆವಿಮೆ ಜಿಲ್ಲೆಗೆ ಈ ವರೆಗೆ ಮಂಜೂರಾಗಿದೆ.
ಒಂದು ಬೆಳೆಯನ್ನು ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 50 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದರೆ ಅದು ವಿಮೆ ಲೆಕ್ಕಾಚಾರದ ಪ್ರಕಾರ ಪ್ರಮುಖ ಬೆಳೆಯಾಗುತ್ತದೆ. ಒಂದು ಹೋಬಳಿ ವ್ಯಾಪ್ತಿಯಲ್ಲಿ ಕನಿಷ್ಠ 125ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದರೆ ಅದನ್ನು ಇತರೆ ಬೆಳೆ ಎಂದು ಪರಿಗಣಿಸಿ ವಿಮೆ ನೀಡಲಾಗುತ್ತದೆ. ಈ ಪ್ರಕಾರವಾಗಿ ಬ್ಯಾಡಗಿ, ಹಾನಗಲ್ಲ, ಹಾವೇರಿ, ರಾಣಿಬೆನ್ನೂರ ತಾಲೂಕುಗಳಲ್ಲಿ ಪ್ರಮುಖ ಬೆಳೆಗೆ ಹೆಚ್ಚು ರೈತರಿಗೆ ವಿಮೆ ಬಂದಿದ್ದರೆ, ಶಿಗ್ಗಾವಿ ಹಾಗೂ ಸವಣೂರ ತಾಲೂಕಿನಲ್ಲಿ ಇತರೆ ಬೆಳೆಗಳಿಗೆ ಸಂಬಂಧಿಸಿ ವಿಮೆ ಬಂದಿದೆ.
ಜಿಲ್ಲೆಯ ಆರು ತಾಲೂಕುಗಳಿಗೆ ವಿಮೆ ಹಣ ಮಂಜೂರಾಗಿದೆ. ಆದರೆ, ಹಿರೇಕೆರೂರ ತಾಲೂಕಿನಲ್ಲಿ ಈ ಬಾರಿ ರಟ್ಟಿಹಳ್ಳಿಯೂ ಹೊಸ ತಾಲೂಕಾಗಿರುವುದರಿಂದ ವಿಮೆ ವಿಂಗಡಣೆಯಲ್ಲಿ ತಾಂತ್ರಿಕ ಅಡೆತಡೆಗಳಾಗಿರುವುದರಿಂದ ಹಿರೇಕೆರೂರ ತಾಲೂಕಿನ ರೈತರಿಗೆ ಇನ್ನೂ ಬೆಳೆ ವಿಮೆ ಬಂದಿಲ್ಲ. ಹಿರೇಕೆರೂರು ತಾಲೂಕಿನ ರೈತರು ಬೆಳೆ ವಿಮೆಗಾಗಿ ಕಾಯುತ್ತಿದ್ದಾರೆ.
•ಎಚ್.ಕೆ. ನಟರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.