ಪಿಎಸೈ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
•ವಕೀಲ ಎಂ.ಬಿ. ಅಂಗಡಿ ಮೇಲಿನ ಹಲ್ಲೆ ಖಂಡಿಸಿ ಕಲಾಪದಿಂದ ದೂರ ಉಳಿದ ವಕೀಲರು
Team Udayavani, Jul 16, 2019, 12:05 PM IST
ಸಿಂದಗಿ: ಹಲ್ಲೆ ಘಟನೆ ಖಂಡಿಸಿ ನ್ಯಾಯ ಕಲಾಪದಿಂದ ದೂರ ಉಳಿದ ವಕೀಲರು.
ಸಿಂದಗಿ: ತಾಲೂಕು ವಕೀಲರ ಸಂಘದ ಸದಸ್ಯ ವಕೀಲ ಎಂ.ಬಿ. ಅಂಗಡಿ ಅವರನ್ನು ಅಕ್ರಮವಾಗಿ ಬಂಧಿಸಿ ಹಲ್ಲೆ ಮಾಡಿರುವ ದೇವರಹಿಪ್ಪರಗಿ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಸಿಂದಗಿ ವಕೀಲರು ಸೋಮವಾರ ನ್ಯಾಯ ಕಲಾಪದಿಂದ ದೂರ ಳಿದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಂದಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ಕೊಣ್ಣೂರ ಮಾತನಾಡಿ, ಸಂಘದ ಸದಸ್ಯ ವಕೀಲ ಎಂ.ಬಿ. ಅಂಗಡಿ ಅವರನ್ನು ಅನವಶ್ಯಕವಾಗಿ ದೇವರಹಿಪ್ಪರಗಿ ಪಿಎಸೈ ಬಂಧಿಸಿ ಹಲ್ಲೆ ಮಾಡಿದ್ದಾರೆ. ವಕೀಲ ಎಂ.ಬಿ. ಅಂಗಡಿಯವರು ದೇವರಹಿಪ್ಪರಗಿ ತಾಲೂಕಿನ ಇಬ್ರಾಹಿಂಪುರ ಗ್ರಾಮದವರು. ನಿತ್ಯ ಅವರು ಗ್ರಾಮದಿಂದ ಸಿಂದಗಿಗೆ ಬಂದು ಪ್ರ್ಯಾಕ್ಟಿಸ್ ಮಾಡುತ್ತಾರೆ ಎಂದು ಹೇಳಿದರು.
ಜು. 14ರಂದು ಸಾಯಂಕಾಲ 5ಕ್ಕೆ ವಕೀಲ ಎಂ.ಬಿ. ಅಂಗಡಿಯವರು ಗ್ರಾಮದ ಬಸ್ ನಿಲ್ದಾಣದ ಹತ್ತಿರದಲ್ಲಿನ ಹನುಮಾನ ದೇವಸ್ಥಾನದ ಕಟ್ಟೆ ಮೇಲೆ ಕುಳಿತ ಸಂದರ್ಭದಲ್ಲಿ ದೇವರಹಿಪ್ಪರಗಿ ಪಿಎಸೈ ಮತ್ತು ಪೊಲೀಸ್ ಪೇದೆಗಳು ಬಂದು ವಕೀಲರನ್ನು ಹಿಡಿದು ನೀವು ಇಲ್ಲಿ ಜೂಜಾಟ ಆಡುತ್ತಿರಾ ಎಂದು ಒತ್ತಾಯ ಪೂರ್ವಕವಾಗಿ ಕಟ್ಟಿ ಮೇಲೆ ಕೂಡ್ರಿಸಿ ಸೂತ್ತಲೂ ಜೂಜಾಟದ ಎಲೆಗಳನ್ನು ಚೆಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ವಕೀಲರ ಮೇಲೆ ದಬ್ಟಾಳಿಕೆ ಮಾಡಿದ್ದು ಖಂಡನೀಯ ಎಂದರು.
ವಕೀಲರ ಸಂಘದ ವತಿಯಿಂದ ಪಿಎಸೈ ಅವರಿಗೆ ಭೇಟಿ ಮಾಡಿ ಅನವಶ್ಯಕವಾಗಿ ವಕೀಲರನ್ನು ಬಂಸಿದ್ದಿರಿ ಅಲ್ಲದೇ ಅವರ ಮೇಲೆ ಹಲ್ಲೆ ಮಾಡಿದ್ದಿರಿ. ಇದ ನ್ಯಾಯಸಮ್ಮತವಲ್ಲ ಎಂದರೂ ವಕೀಲರಿಗೆ ಅವರು ಗೌರವ ಕೊಡಲಿಲ್ಲ. ತಮ್ಮದೇಯಾದ ದಾಟಿಯಲ್ಲಿ ಮಾತನಾಡಿದರು.
ಮೇಲಧಿಕಾರಿಗಳಿಗೆ ದೂರು ನೀಡಿದ ನಂತರ ಅಂದು ರಾತ್ರಿ 11ಕ್ಕೆ ಬಿಟ್ಟು ಕಳುಹಿಸಿರುತ್ತಾರೆ. ಹೀಗಾಗಿ ಅನವಶ್ಯಕವಾಗಿ ವಕೀಲರನ್ನು ಬಂಧಿಸಿ ಹಲ್ಲೆ ಮಾಡಿದ ದೇವರಹಿಪ್ಪರಗಿ ಪಿಎಸೈ ಅವರನ್ನು ಅಮಾನತು ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದ ಪಕ್ಷದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಕೀಲರಾದ ಕೆ.ಬಿ. ಜನಗೊಂಡ, ಎಂ.ಕೆ. ಪತ್ತಾರ, ಆರ್.ಎಸ್. ಹೊಸಮನಿ, ಎಂ.ಪಿ. ದೊಡಮನಿ, ಎಸ್.ಬಿ. ದೊಡಮನಿ, ಪಿ.ಎಂ. ಕಂಬಾರ, ಪಿ.ಆರ್. ಯಾಳವಾರ, ಪಿ.ಎಸ್. ಬಿರಾದಾರ, ಬಿ.ಸಿ. ಪಾಟೀಲ, ಎಂ.ಎನ್. ಪಾಟೀಲ, ಎನ್.ಎಸ್. ಬಗಲಿ, ಎಸ್.ಎಂ. ಹಿರೇಮಠ, ಆರ್.ಎಂ. ಯಾಳಗಿ, ಎಂ.ಎಸ್. ಬಿರಾದಾರ, ಎನ್.ಎಸ್. ಪಾಟೀಲ, ಬಿ.ಎಸ್. ಹಂಡಿ, ಜಿ.ಸಿ. ಭಾವಿಕಟ್ಟಿ, ಎಸ್.ಜಿ. ಕುಲಕರ್ಣಿ, ವಿ.ಬಿ. ಪತ್ತಾರ, ಎಸ್.ಎ. ಗಾಯಕವಾಡ, ಪ್ರಶಾಂತ ಪೂಜಾರಿ, ಪಿ.ಎಂ. ಕಣಬೂರ, ಎಂ.ಸಿ. ಯಾತನೂರ, ಆರ್.ಎಸ್. ಸಿಂದಗಿ, ಆರ್.ಡಿ. ಕುಲಕರ್ಣಿ, ಚನ್ನಪ್ಪಗೌಡ ಚನಗೊಂಡ, ಎಂ.ಎನ್. ಪಾಟೀಲ, ಎಂ.ಬಿ. ನಾಯ್ಕೋಡಿ, ಎಸ್.ಬಿ. ಪಾಟೀಲ, ಎಸ್.ಎಂ. ಪಾಟೀಲ, ಪಿ.ಎಂ. ಹೊಸಮನಿ, ಬಿ.ಎಸ್. ಪಾಟೀಲ, ಪಿ.ಎಂ. ಬಡಿಗೇರ, ವಿ.ಎಲ್. ಮೋಪಗಾರ ಸೇರಿದಂತೆ ಎಲ್ಲ ವಕೀಲರು ಕಲಾಪದಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.