ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಿ
•ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಶಿಕ್ಷಕರು-ಪಾಲಕರು•ಕ್ರಮವಾಗದಿದ್ದರೆ ಪ್ರತಿಭಟನೆ
Team Udayavani, Jul 16, 2019, 3:17 PM IST
ಶಿರಸಿ: ಕೆರೇಕೈ ಕತ್ರಿಯಲ್ಲಿ ಹಠಾತ್ ಪ್ರತಿಭಟನೆ ನಡೆಯಿತು.
ಕುಮಟಾ: ತಾಲೂಕಿನ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಿಕೊಡುವ ಕುರಿತು ಕೆಎಸ್‌ಆರ್‌ಟಿಸಿ ಕುಮಟಾ ಘಟಕದ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಚಿತ್ರಿಗಿ ಪ್ರೌಢಶಾಲೆಗೆ ಅಘನಾಶಿನಿ, ಬಾಡ ಬಸ್‌ನಿಂದ 70 ವಿದ್ಯಾರ್ಥಿಗಳು ಮತ್ತು ಲುಕ್ಕೇರಿ-ಮಾಸೂರು ಭಾಗದಿಂದ 57 ವಿದ್ಯಾರ್ಥಿಗಳು, ಒಟ್ಟೂ 127 ವಿದ್ಯಾರ್ಥಿಗಳು ಸರಕಾರಿ ರಿಯಾಯತಿ ದರದ ವಿದ್ಯಾರ್ಥಿ ಬಸ್‌ಪಾಸ್ ಪಡೆದಿದ್ದಾರೆ. ಪ್ರಸ್ತುತ ಸರಕಾರಿ ಕಾಲೇಜು ಬಿಡುವ ಸಮಯ ಹಾಗೂ ಶಾಲೆಯ ಬಿಡುವಿನ ಸಮಯವೂ ಒಂದೇ ಆಗಿರುವುದರಿಂದ ಬಸ್ ತುಂಬಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ಥಳದ ಅಭಾವ ಉಂಟಾಗಿದೆ. ಈ ಕಾರಣ ಹೆಣ್ಣುಮಕ್ಕಳನ್ನು ಮಾರ್ಗ ಮಧ್ಯೆ ಬಿಟ್ಟು ಹೋಗುತ್ತಿದ್ದಾರೆ. ಅಲ್ಲದೇ ಮಾಸೂರಿಗೆ ಹೋಗುವ ಬಸ್ ಸಮಯಕ್ಕೆ ಸರಿಯಾಗಿ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ದೊಡ್ಡ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮುಖ್ಯಾಧ್ಯಾಪಕ ಎನ್.ಆರ್. ಗಜು ವಿದ್ಯಾರ್ಥಿ ಸಮುದಾಯದ ಪರವಾಗಿ ಡಿಪೋ ವ್ಯವಸ್ಥಾಪಕರ ಬಳಿ ಅಳಲು ತೋಡಿಕೊಂಡರು.
ಶಿವಾನಂದ ಕಾಮತ್ ಪಾಲಕರ ಪರವಾಗಿ ಮಾತನಾಡಿ, ಶಾಲೆಗೆ ಸಮೀಪವಾದ ಸಸ್ಯೋಧ್ಯಾನ ಬಸ್ ನಿಲ್ದಾಣದಲ್ಲಿಯೇ ಬಸ್ ಸ್ಟಾಪ್ ಕೊಡಬೇಕು. ಅಲ್ಲಿಂದಲೇ ಹತ್ತಿಸಿ, ಅಲ್ಲಿಯೇ ಇಳಿಸುವಂತೆ ನಿರ್ವಾಹಕರಿಗೆ ಸೂಚಿಸಬೇಕು ಎಂದ ಅವರು, ಕೆಲವು ಬಸ್ ನಿರ್ವಾಹಕರು, ವಿದ್ಯಾರ್ಥಿ ಪ್ರಯಾಣಿಕರೊಡನೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ವ್ಯವಸ್ಥಾಪಕರ ಗಮನಕ್ಕೆ ತಂದರು. ಡಿಪೋ ವ್ಯವಸ್ಥಾಪಕಿ ಸೌಮ್ಯಾ ನಾಯಕ ಮಾತನಾಡಿ, ಹೊನ್ನಾವರ ಮತ್ತು ಕುಮಟಾ ಎರಡೂ ಬಸ್ ಡಿಪೋ ವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದಕ್ಕನುಗುಣವಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಸ್, ಕಂಡಕ್ಟರ್ ಮತ್ತು ಡ್ರೈವರ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸಮಸ್ಯೆ ತಾಲೂಕಿನಾದ್ಯಂತ ತಲೆದೋರಿದೆ. ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಕಾಳಜಿ ತಮ್ಮ ಮೇಲಿದ್ದು, ಅದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆ ಭಾಗದ ಕೊನೆಯ ಬಸ್ ಅದಾಗಿದ್ದರೆ ಯಾರನ್ನೂ ಬಿಟ್ಟು ಹೋಗದಂತೆ ಸೂಚಿಸುವುದಾಗಿ ತಿಳಿಸಿದರು.
ಎಟಿಎಸ್ ಶಿವಾನಂದ ನಾಯ್ಕ, ಶಿಕ್ಷಕ ಪ್ರದೀಪ ನಾಯಕ, ಕಿರಣ ಪ್ರಭು ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.