ಶ್ರೇಯಾ ಬದಲು ಸಿಕ್ಕ ಆಲಾ
ಅಂದವಾದ ರೊಮ್ಯಾಂಟಿಕ್ ಹಾಡು
Team Udayavani, Jul 17, 2019, 3:02 AM IST
ಸ್ಟಾರ್ಗಳ ಸಿನಿಮಾಗಳು ಆರಂಭದಿಂದಲೇ ನಿರೀಕ್ಷೆ ಹುಟ್ಟುಹಾಕುತ್ತವೆ. ಆದರೆ, ಹೊಸಬರ ಸಿನಿಮಾಗಳ ಮೇಲೆ ಪ್ರೇಕ್ಷಕ ನಿರೀಕ್ಷೆ ಇಡಬೇಕಾದರೆ, ಆ ಸಿನಿಮಾದ ಹಾಡು, ಟ್ರೇಲರ್ ಹಿಟ್ ಆಗಿರಬೇಕು ಅಥವಾ ಗಮನ ಸೆಳೆದಿರಬೇಕು. ಈಗ ಹೊಸ ಚಿತ್ರತಂಡವೊಂದರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ.
“ಅಂದವಾದ’ ಎಂಬ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಈಗಾಗಲೇ ಬಿಡುಗಡೆಯಾಗಿರುವ ಟೈಟಲ್ ಸಾಂಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ. ಜಯಂತ್ ಕಾಯ್ಕಿಣಿ ಬರೆದಿರುವ “ಎಂದೂ ಆಗಿಲ್ಲ ಹೀಗೆ’ ಎಂಬ ಹಾಡನ್ನು ವಾರಾಂತ್ಯದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ.
ಈ ಹಾಡಿನ ಮೂಲಕ ಮತ್ತೊಬ್ಬ ಪರಭಾಷಾ ಗಾಯಕಿ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಅದು ಕೇರಳ ಮೂಲದ ಆಲಾ ಬಿ ಬಾಲಾ. ಆರಂಭದಲ್ಲಿ ಈ ಹಾಡನ್ನು ಶ್ರೇಯಾ ಘೋಷಾಲ್ ಅವರಿಂದ ಹಾಡಿಸಬೇಕೆಂದಿದ್ದರಂತೆ ನಿರ್ದೇಶಕ ಚಲ. ಆದರೆ, ಕಾರಣಾಂತರಗಳಿಂದ ಶ್ರೇಯಾ ಸಿಗಲಿಲ್ಲ.
ಕೊನೆಗೆ ಯಾರೋ ಒಬ್ಬರು ಆಲಾ ಬಿ ಬಾಲಾ ಬಗ್ಗೆ ಹೇಳಿದರಂತೆ. ಕೊನೆಗೆ ಅವರನ್ನು ಸಂಪರ್ಕಿಸಿ ಹಾಡಿಸಿದ್ದು, ಚಿತ್ರತಂಡ ಈಗ ಖುಷಿಯಾಗಿದೆ. “ಹಾಡು ತುಂಬಾ ಚೆನ್ನಾಗಿ ಬಂದಿದೆ. ಖಂಡಿತಾ ಇದು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂಬ ವಿಶ್ವಾಸವಿದೆ.
ಹಾಡು ಕೇಳಿದ ಸ್ನೇಹಿತರು, ಶ್ರೇಯಾ ಘೋಷಾಲ್ ಹಾಡಿದ್ದಾ ಎಂದು ಕೇಳುತ್ತಿದ್ದಾರೆ’ ಎನ್ನುವುದು ನಿರ್ದೇಶಕ ಚಲ ಅವರ ಮಾತು. ಈ ಹಾಡನ್ನು ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೈ ಹಾಗೂ ಅನುಷಾ ರಂಗನಾಥ್ ಈ ಸಿನಿಮಾದ ನಾಯಕ-ನಾಯಕಿ. ಮಧು ಜಿ ರಾಜ್ ಮತ್ತು ಹೆಚ್.ಸಿ.ಜಯ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.