ಇನ್ನಾ ಗುಡ್ಡದ ಬಿಎಸ್ಸೆನ್ನೆಲ್ ಟವರ್ ಸ್ತಬ್ಧ
ವ್ಯವಸ್ಥೆ ಸರಿಪಡಿಸಲು ಇನ್ನಾ ಗ್ರಾ.ಪಂ. ಮನವಿ
Team Udayavani, Jul 17, 2019, 5:23 AM IST
ಬೆಳ್ಮಣ್: ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅಚ್ಚುಮೆಚ್ಚಾಗಿದ್ದ ಬಿಎಸ್ಸೆನ್ನೆಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಂತೆಯೇ ಕಾರ್ಕಳ ತಾ| ಇನ್ನಾ ಕಾಂಜರಕಟ್ಟೆಯ ಗುಡ್ಡದಲ್ಲಿರುವ ಟವರ್ ಸ್ತಬ್ಧಗೊಂಡಿದೆ.
ಇನ್ನಾ ಗುಡ್ಡದ ಸೂಕ್ಷ್ಮ ತರಂಗ ಪುನರಾವರ್ತನ ನಿಲಯದ ಟವರ್‌ಗೆà ಬಿಎಸ್ಸೆನ್ನೆಲ್ ಮೊಬೈಲ್ ಸಂಪರ್ಕ ಸಾಧನಗಳನ್ನು ಜೋಡಿಸಲಾಗಿದ್ದು, ಅದೀಗ ಕಾರ್ಯಾಚರಿಸುತ್ತಿಲ್ಲ. ಇದರಿಂದ ನೆಟ್‌ವರ್ಕ್ ಸಿಗದೆ ಹಲವು ತಿಂಗಳಾಗಿದೆ.
ಸುಮಾರು 60 ನಿಸ್ತಂತು ದೂರವಾಣಿ ಸಂಪರ್ಕ, ಒಂದು ಬ್ಯಾಂಕಿಂಗ್ ವ್ಯವಸ್ಥೆಯ ಸರ್ವರ್ ಹಾಗೂ ಸಹಸ್ರಾರು ಮೊಬೈಲ್ ಸಂಪರ್ಕಗಳಿಗೆ ಸಂಪರ್ಕ ಒದಗಿಸುತ್ತಿದ್ದ ಟವರ್ ಸ್ಥಗಿತವಾದ್ದರಿಂದ ಗ್ರಾಹಕರು ಆಕ್ರೋಶಗೊಂಡಿದ್ದಾರೆ.
ಡೀಸೆಲ್ ಇಲ್ಲ, ಬ್ಯಾಟರಿಯೂ ಇಲ್ಲ!
ವಿದ್ಯುತ್ ಕೈಕೊಟ್ಟರೆ ಇಲ್ಲಿರುವ ಜನರೇಟರ್‌ಗೆ ಡೀಸೆಲ್ ಹಾಕಲು ಇಲಾಖೆ ಸಮಸ್ಯೆ ಸುಳಿಯಲ್ಲಿದೆ. ಇನ್ನು ಬ್ಯಾಟರಿ ವಾರೆಂಟಿ 2009ರಲ್ಲೇ ಮುಗಿದಿದ್ದು, ಅದೂ ಕೈಕೊಟ್ಟಿದೆ. ಪರ್ಯಾಯವಾಗಿ ಬ್ಯಾಕಪ್ ಪವರ್ ವ್ಯವಸ್ಥೆ ನಿಟ್ಟೆ ಘಟಕದಿಂದ ತರಿಸಲಾಗಿದ್ದು ಅದೂ ಪದೇ ಪದೇ ಕೈ ಕೊಡುತ್ತಿದೆ. ಇದೀಗ ಕೆಲವೊಮ್ಮೆ ವಿದ್ಯುತ್ ಇದ್ದರೂ ನೆಟ್‌ವರ್ಕ್ ದೊರಕುತ್ತಿಲ್ಲ ಎನ್ನುವುದು ಇಲ್ಲಿನ ಗ್ರಾಹಕರ ದೂರು.
ಕಟ್ಟಡ ಸೋರುತ್ತಿದೆ, ವಿದ್ಯುತ್ ಶಾಕ್ ಆತಂಕ..!
ಇಲ್ಲಿನ ಈ ಮೈಕ್ರೋ ವೇವ್ ಸ್ಟೇಷನ್ ಕಟ್ಟಡ 75 ವರ್ಷಗಳ ಹಳೆಯದಾಗಿದ್ದು ಅಲ್ಲಲ್ಲಿ ಸೋರುತ್ತಿದೆ. ವಿದ್ಯುತ್ ಸಂಪರ್ಕದ ಗೋಡೆಗಳಲ್ಲಿ ನೀರು ಹರಿಯುತ್ತಿದ್ದು ಶಾಕ್‌ನ ಆತಂಕ ಎದುರಾಗಿದೆ. ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಸ್ಟೇಷನ್ ಮಾಸ್ಟರ್ ಸುರೇಶ್ ಎಂಬವರು ಕಳೆೆದ 8 ತಿಂಗಳುಗಳಿಂದ ಸಂಬಳವೂ ಸಿಗದೆ ಪರಿತಪಿಸುತ್ತಿದ್ದಾರೆ.
ವೈಫೈ ಕೂಡ ಇದೆ
ಈ ಘಟಕದಲ್ಲಿ ವೈಫೈ ವ್ಯವಸ್ಥೆಯೂ ಇದ್ದು ನಗರ ಪ್ರದೇಶಗಳಿಗೆ ಅಳವಡಿಸಬೇಕಾದ ಪರಿಕರ ಇಲ್ಲಿನ ಹಳೆ ಕಟ್ಟಡದಲ್ಲಿ ನೇತಾಡುತ್ತದೆ.
ದುರಸ್ತಿಗೆ ಮನವಿ
ಇನ್ನಾ ಹಾಗೂ ಕಾಂಜರಕಟ್ಟೆಯ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಸೇವೆಯನ್ನು ಸಮರ್ಪಕವಾಗಿ ನೀಡಲು ಟವರ್ ವ್ಯವಸ್ಥೆ ಸರಿಪಡಿಸುಂತೆ ಇನ್ನಾ ಗ್ರಾ.ಪಂ. ಉಪಾಧ್ಯಕ್ಷ ಕುಶ ಆರ್. ಮೂಲ್ಯ ಅವರು ಸ್ಟೇಷನ್ ಮಾಸ್ಟರ್ ಮೂಲಕ ಇಲಾಖೆಗೆ ಮನವಿ ನೀಡಿದ್ದಾರೆ. ಈ ಸಂದರ್ಭ ಪಂಚಾಯತ್ ಸದಸ್ಯ ಆಲೆನ್ ಡಿ’ಸೋಜಾ, ಗ್ರಾಮಸ್ಥರಾದ ದೀಪಕ್ ಕಾಮತ್, ಯೋಗೀಶ್ ಆಚಾರ್ಯ, ಸುರೇಶ್ ಮೂಲ್ಯ, ಪ್ರದೀಪ್ ಅಂಚನ್, ರೂಪೇಶ್, ಭದ್ರ, ಕೃಷ್ಣ ಪೂಜಾರಿ, ವಾಸು ಸೇರ್ವೆಗಾರ, ಭಾಸ್ಕರ ಗೌಡ,ಜಾನ್ ಮೆಂಡೋನ್ಸಾ ಮತ್ತಿತರರಿದ್ದರು.
ಮನವಿ ನೀಡಿದ್ದೇವೆ
ನಾವೆಲ್ಲರೂ ಬಿಎಸ್ಸೆನ್ನೆಲ್‌ಗಾÅಹಕರು. ಇಲ್ಲಿನ ಈ ಘಟಕದ ವೈಫಲ್ಯದಿಂದಾಗಿ ನಮ್ಮೆಲ್ಲರ ನೆಟ್‌ವರ್ಕ್ ಸ್ಥಬ್ದಗೊಂಡಿದೆ. ಕೂಡಲೇ ಸರಿಪಡಿಸುವಂತೆ ಇಲಾಖೆಗೆ ಮನವಿ ನೀಡಿದ್ದೇವೆ.
– ಕುಶ ಆರ್. ಮೂಲ್ಯ, ಇನ್ನಾ ಗ್ರಾ.ಪಂ. ಉಪಾಧ್ಯಕ್ಷ
ಪೂರಕ ಸಾಮಗ್ರಿ ಇಲ್ಲ
ಬಿಎಸ್ಸೆನ್ನೆಲ್ ಇಲಾಖೆ ನಮಗೆ ಪೂರಕ ಸಾಮಗ್ರಿ ಒದಗಿಸುತ್ತಿಲ್ಲ. ಡೀಸೆಲ್ ಬಿಲ್ ಬಾಕಿ ಇದೆ. ಇಲ್ಲಿನ ಬ್ಯಾಟರಿಗಳೂ ಹಳೆಯದಾಗಿವೆ. ನಮ್ಮ ಕಡೆಯಿಂದ ಪ್ರಯತ್ನ ನಡೆಯುತ್ತಿದೆ.
– ಜಾಧವ್, ಸಬ್‌ಡಿವಿಜನಲ್ ಎಂಜಿನಿಯರ್, ಬಿಎಸ್ಸೆನ್ನೆಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.