ಪ್ಲಾಸ್ಟಿಕ್ ಬಳಕೆ: ದಂಡ ಪ್ರಯೋಗ
Team Udayavani, Jul 17, 2019, 3:09 AM IST
ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ಬಳಸುವ ವ್ಯಾಪಾರಿಗಳ ಮೇಲೆ ದಂಡ ಪ್ರಯೋಗಿಸುವ ಅಸ್ತ್ರವನ್ನು ಬಿಬಿಎಂಪಿ ಮುಂದುವರಿಸಿದೆ.
ಪ್ಲಾಸ್ಟಿಕ್ ಬಳಕೆಯ ನಿಷೇಧ ಆಂದೋಲನದ ಭಾಗವಾಗಿ ಪಾಲಿಕೆಯ ಎಂಟು ವಲಯಗಳ ಪ್ರಮುಖ ಸ್ಥಳಗಳಲ್ಲಿರುವ ಸಗಟು ವ್ಯಾಪಾರ ಮಳಿಗೆಗಳ ಮತ್ತು ಅಂಗಡಿ ಮಾಲೀಕರ ಮೇಲೆ ಪಾಲಿಕೆಯ ಆರೋಗ್ಯಾಧಿಕಾರಿ ನೇತೃತ್ವದ ತಂಡಗಳು ದಾಳಿ ನಡೆಸಿದ್ದು,
ಪ್ಲಾಸ್ಟಿಕ್ ಕೈ ಚೀಲ, ತಟ್ಟೆ, ಪಾಲಿಥಿನ್ ಬ್ಯಾಗ್ ಸೇರಿದಂತೆ ವಿವಿಧ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುತ್ತಿದ್ದ 559 ಮಳಿಗೆಗಳು ಮತ್ತು 439 ಬೀದಿಬದಿ ವ್ಯಾಪಾರಿ ಅಂಗಡಿಗಳಿಂದ ಒಟ್ಟು 1,335 ಕೆ.ಜಿ ಪ್ಲಾಸ್ಟಿಕ್ ಜಪ್ತಿ ಮಾಡಿದ್ದು, 4.36 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಆಂದೋಲನಕ್ಕೆ ಸೋಮವಾರ ಮೇಯರ್ ಚಾಲನೆ ನೀಡಿದ್ದರು. ಸೋಮವಾರ 2.95 ಲಕ್ಷ ರೂ. ದಂಡ ಸಂಗ್ರಹಿಸಲಾಗಿತ್ತು. ಮಂಗಳವಾರ ಕಾರ್ಯಾಚರಣೆ ಮುಂದುವರಿದಿದ್ದು, 4.36 ಲಕ್ಷ ರೂ. ಮೊತ್ತದ ದಾಖಲೆ ದಂಡ ಸಂಗ್ರಹಿಸಲಾಗಿದೆ.
ದಕ್ಷಿಣ ವಲಯದಲ್ಲಿ ಶ್ರೀನಗರ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ಕೋರಮಂಗಲ ಕ್ಲಬ್ ರಸ್ತೆ, ಮಡಿವಾಳ ಸಂತೆ, ಜಯನಗರ 2ನೇ ಬ್ಲಾಕ್ ಹಾಗೂ 8, 9ನೇ ಮುಖ್ಯ ರಸ್ತೆಗಳ ಸುತ್ತಮುತ್ತಲಿನ ಮಳಿಗೆಗಳ ಮೇಲೆ ದಾಳಿ ನಡೆಸಿ, 84 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು, 51,500 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ.
ಪಶ್ಚಿಮ, ಪೂರ್ವ, ಬೊಮ್ಮನಹಳ್ಳಿ ಹಾಗೂ ಆರ್.ಆರ್. ನಗರ ವಲಯಗಳ ವಿವಿಧ ವಾರ್ಡ್‌ಗಳಲ್ಲಿರುವ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಒಟ್ಟು 725 ಕೆ.ಜಿ. ಪ್ಲಾಸ್ಟಿಕ್ ಜಪ್ತಿ ಮಾಡಿ 2,69,500 ರೂ. ದಂಡ ಸಂಗ್ರಹಿಸಲಾಗಿದೆ.
ಮಹದೇವಪುರ ವಲಯದ ರಾಮಮೂರ್ತಿನಗರ ಮುಖ್ಯರಸ್ತೆ, ಹೊರಮಾವು, ಕಗ್ಗದಾಸಪುರ ಮುಖ್ಯರಸ್ತೆ, ಬೆಳ್ಳಂದೂರು, ದೇವಸಂದ್ರ, ದೊಡ್ಡನೆಕ್ಕುಂದಿ ಹಾಗೂ ವರ್ತೂರು ಮುಖ್ಯರಸ್ತೆಗಳಲ್ಲಿರುವ 46 ಮಳಿಗೆಗಳಲ್ಲಿ ತಪಾಸಣೆ ನಡೆಸಿ 43 ಸಾವಿರ ರೂ. ದಂಡ ಹಾಗೂ ದಾಸರಹಳ್ಳಿ ವಲಯದ ನೆಲಗದರನಹಳ್ಳಿ,
ಎಚ್‌ಎಂಟಿ ಬಡಾವಣೆ, ಚೊಕ್ಕಸಂದ್ರ, ಯಲಹಂಕ ವಲಯದ ಅಮೃತನಗರ, ಭದ್ರಪ್ಪ ಲೇಔಟ್, ಯಲಹಂಕ ಬಿಬಿ ರಸ್ತೆ, ಕಟ್ಟಿಗೇನಹಳ್ಳಿ, ದೊಡ್ಡಬೊಮ್ಮಸಂದ್ರ ಹಾಗೂ ಪುಟ್ಟೇನಹಳ್ಳಿಯಲ್ಲಿರುವ ಮಳಿಗೆಗಳಲ್ಲಿ ತಪಾಸಣೆ ನಡೆಸಿ ಒಟ್ಟು 72 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.