ಕುಲಭೂಷಣ್ಗೆ ಸಿಗುತ್ತಾ ಬಿಡುಗಡೆ ಭಾಗ್ಯ?
Team Udayavani, Jul 17, 2019, 5:00 AM IST
ದ ಹೇಗ್: ಪಾಕಿಸ್ಥಾನದ ಜೈಲಿನಲ್ಲಿ ಬಂಧಿಯಾಗಿರುವ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಅಂತಾರಾಷ್ಟ್ರೀಯ ನ್ಯಾಯಾ ಲಯದಿಂದ (ಐಸಿಜೆ) ಬುಧವಾರ ಹೊರಬೀಳಲಿದೆ.
ಹೇಗ್ನಲ್ಲಿನ ಶಾಂತಿ ಭವನದಲ್ಲಿ (ಪೀಸ್ ಪ್ಯಾಲೇಸ್) ನಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಬುಧವಾರ ಸಂಜೆ 6.30ಕ್ಕೆ ಪ್ರಕರಣದ ಅಂತಿಮ ಸುತ್ತಿನ ವಿಚಾರಣೆ ಆರಂಭವಾಗಲಿದ್ದು, ಮುಖ್ಯ ನ್ಯಾಯಮೂರ್ತಿ ಅಬ್ದುಲ್ಖಾವಿ ಅಹ್ಮದ್ ಯೂಸುಫ್ ಅವರು, ತೀರ್ಪನ್ನು ಪ್ರಕಟಿಸಲಿದ್ದಾರೆ. ಜು.17ರಂದು ತೀರ್ಪು ಪ್ರಕಟವಾಗುವುದಾಗಿ ಇದೇ ತಿಂಗಳ ಆರಂಭದಲ್ಲೇ ಐಸಿಜೆ ಹೇಳಿತ್ತು.
ಜಾಧವ್ ಭಾರತೀಯ ಗೂಢಚಾರಿಯಾಗಿದ್ದು, ಪಾಕಿಸ್ಥಾನದಲ್ಲಿ ಭಯೋತ್ಪಾದನೆಗೆ ಪ್ರೇರೇಪಿಸುತ್ತಿದ್ದ ಎಂದು ಆರೋಪಿಸಿ ಪಾಕಿಸ್ಥಾನ ಸೇನಾ ನ್ಯಾಯಾಲಯ 2017ರ ಎಪ್ರಿಲ್ನಲ್ಲಿ ಜಾಧವ್ ಅವರಿಗೆ ಮರಣ ದಂಡನೆ ಶಿಕ್ಷೆ ನೀಡಿತ್ತು. ಇದನ್ನು ಭಾರತ, ಅಂತಾ ರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದೆ. 2017ರ ಮೇ 8ರಿಂದ ಅಲ್ಲಿ ವಿಚಾರಣೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್ಎಕ್ಸ್ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.