ರಾಮದುರ್ಗ ಬಂದ್ ಸಂಪೂರ್ಣ ಯಶಸ್ವಿ
|ಕೇಂದ್ರ-ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ |ಬೇಡಿಕೆ ಈಡೇರಿಕೆಗೆ ಹೋರಾಟ ಅಗತ್ಯ| ರೈತರ ಮನವಿಗೆ ಸರ್ಕಾರ ಸ್ಪಂದಿಸಲಿ
Team Udayavani, Jul 17, 2019, 10:15 AM IST
ರಾಮದುರ್ಗ: ಮಹದಾಯಿ-ಕಳಸಾ ಬಂಡೂರಿ ಜೋಡಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿದ್ದ ವಿವಿಧ ರೈತ ಸಂಘಟನೆಗಳು ರಾಮದುರ್ಗ ಬಂದ್ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ರಾಮದುರ್ಗ: ಮಹದಾಯಿ-ಕಳಸಾ ಬಂಡೂರಿ ಜೋಡಣೆ ಹಾಗೂ ರೈತಪರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಹದಾಯಿ ಹೋರಾಟ ಸಮನ್ವಯ ಸಮತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಮಂಗಳವಾರ ಕರೆ ನೀಡಿದ್ದ ರಾಮದುರ್ಗ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದ ಹುತಾತ್ಮ ಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ತೇರ ಬಝಾರಕ್ಕೆ ತೆರಳಿ ಮಹಾತ್ಮಾ ಗಾಂಧಿಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮುನವಳ್ಳಿ ವಕೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಅಲ್ಲಿಂದ ಜುನಿಪೇಟ ಮೂಲಕ ಹುತಾತ್ಮ ಚೌಕಕ್ಕೆ ಬಂದು ಗೌರವ ಸಮರ್ಪಿಸಿದರು.
ಪ್ರತಿಭಟನೆಯಲ್ಲಿ ಮಹದಾಯಿ ಹೋರಾಟ ಸಮನ್ವಯ ಸಮಿತಿ ತಾಲೂಕಾಧ್ಯಕ್ಷ ವೆಂಕಟೇಶ ಹಿರೇರಡ್ಡಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲದಿಂದ ತತ್ತರಿಸಿರುವ ಜನ ಜಾನುವಾರುಗಳಿಗೆ ಮತ್ತು ಕೃಷಿಗೆ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವೇ ನ್ಯಾಯಾಧಿಕರಣದ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿ ಕಾಮಗಾರಿ ಕೈಗೊಂಡು ನಾಲ್ಕು ವರ್ಷಗಳಿಂದ ನಿರಂತರವಾಗಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಾ ಬಂದ ರೈತರ ಮನವಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ, ಮಹದಾಯಿ ಹೋರಾಟಕ್ಕಾಗಿ ಸಾಕಷ್ಟು ಜೀವಗಳು ಹೋಗಿವೆ. ಹಸಿರು ಶಾಲು ಹಾಕಿದ ರೈತರಿಗಷ್ಟೆ ಇದು ಸಿಮೀತ ಎಂಬ ಭಾವನೆ ಬಿಟ್ಟು ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಯಶಸ್ವಿಗೊಳ್ಳಲು ಸಾಧ್ಯ. ಮಹದಾಯಿ ಹೋರಾಟದ ವ್ಯಾಪ್ತಿಯಲ್ಲಿ 6 ಜನ ಸಂಸದರು ಇದ್ದರೂ ಸಹ ಇದರ ಬಗ್ಗೆ ಕಾಳಜಿ ವಹಿಸದೆ ಇರುವುದು ಬೇಸರ ತಂದಿದೆ. ಅಲ್ಲದೇ ಒಂದೇ ಹೋರಾಟಕ್ಕೆ ಸೀಮಿತವಾಗದೇ ರೈತಪರ ಎಲ್ಲ ಬೇಡಿಕೆಗಳನ್ನು ಪಡೆದುಕೊಳ್ಳುವಲ್ಲಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದರು.
ತಾಲೂಕಿನ ಲಕನಾಯ್ಕನಕೊಪ್ಪದ ಫೂರ್ಣಾನಂದ ಮಠದ ಕೃಷ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ, ಸಿ.ಪಿ.ಐ.ಎಂ ಮುಖಂಡ ಗೈಬು ಜೈನೆಖಾನ್, ಶಂಕರಗೌಡ ಪಾಟೀಲ, ಆನಂದ ಜಗತಾಪ, ಎಚ್.ಎಸ್. ಪಾಟೀಲ ಸೇರಿದಂತೆ ಅನೇಕ ಮುಖಂಡರು ಮಹದಾಯಿ ಹೋರಾಟದ ಕುರಿತು ಮಾತನಾಡಿದರು. ಬಾಬಣ್ಣ ಪತ್ತೇಪೂರ, ಆನಂದ ಜಗತಪ, ಶಿವಾನಂದ ದೊಡವಾಡ, ಜಗದೀಶ ದೇವರಡ್ಡಿ, ಯಲ್ಲಪ್ಪ ದೊಡಮನಿ, ಕೃಷ್ಣಗೌಡ ಪಾಟೀಲ, ಮಲ್ಲು ದೇಸಾಯಿ, ನಿಂಗನಗೌಡ ಪಾಟೀಲ, ಕೃಷ್ಣ ಕಂಬಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್ ಮಾತು
Belagavi: ಬಿಜೆಪಿಯಲ್ಲಿ ಭಿನ್ನಮತವಿಲ್ಲ, ವಿಜಯೇಂದ್ರ ನಮ್ಮ ಅಧ್ಯಕ್ಷರು: ಪ್ರತಾಪ್ ಸಿಂಹ
ಬೆಳಗಾವಿ: ಸಾರಾಯಿ ಬಿಲ್ ಕೊಡದ್ದಕ್ಕೆ ಹ*ತ್ಯೆಗೈದ ಇಬ್ಬರು ಜೈಲಿಗೆ
ಬೆಳಗಾವಿ: ಕೋಟಿ ದಾಟಿದ ಯಲ್ಲಮ್ಮದೇವಿ ಭಕ್ತರ ಸಂಖ್ಯೆ
Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್ ಜಾರಕಿಹೊಳಿ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Ballari: ಸ್ವಾಮೀಜಿಗಳ ಮೇಲಿನ ಕ್ರಮ, ಕರಿಯಾ ಎಂದವರ ಮೇಲೆ ಏಕಿಲ್ಲ; ಅಶೋಕ್
ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ
Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.