ಆನ್‌ಲೈನ್‌ನಲ್ಲಿ ಪಿಎಆರ್ ಸಲ್ಲಿಕೆ ಕಡ್ಡಾಯ
•ಸ್ಪೆಷಲ್ ರಿಪೋರ್ಟಿಂಗ್‌ಗೆ ಅವಕಾಶವೇ ಇಲ್ಲ•ಕೊನೆ ದಿನಾಂಕಕ್ಕಿಂತ ಮೊದಲೇ ಸಲ್ಲಿಸಿ
Team Udayavani, Jul 17, 2019, 12:23 PM IST
ಕಲಬುರಗಿ: ಎ ವೃಂದದ ಅಧಿಕಾರಿಗಳಿಗೆ ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ಕುರಿತ ತರಬೇತಿ ಕುರಿತ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಾತನಾಡಿದರು.
ಕಲಬುರಗಿ: ಪ್ರತಿ ವರ್ಷ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ಸಲ್ಲಿಸಲಿರುವ ಕಾರ್ಯನಿರ್ವಹಣಾ ವರದಿ (ಗೌಪ್ಯ ವರದಿ)ಯನ್ನು ಇನ್ಮುಂದೆ ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕಾಗಿದ್ದು, ಈ ನೂತನ ಕಾರ್ಯನಿರ್ವಹಣಾ ವರದಿಗೆ ಇನ್ನಷ್ಟು ಮಹತ್ವ ಬರಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ ‘ಎ’ ವೃಂದದ ಅಧಿಕಾರಿಗಳಿಗೆ ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ತಂತ್ರಾಂಶ ಮೂಲಕ ದಾಖಲಿಸುವ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ಆಧಾರಿಸಿ ಬಡ್ತಿ, ಬೇರೆ ಬೇರೆ ಉದ್ಯೋಗಗಳು ದೊರೆಯಲಿವೆ. ಹಾಗಾಗಿ ಆನ್‌ಲೈನ್‌ನಲ್ಲಿ ವರದಿ ಭರ್ತಿ ಮಾಡುವಾಗ ಜಾಗರೂಕತೆ ಇರಬೇಕು. ಯಾವ ಅಧಿಕಾರಿಯೂ ಈ ಬಗ್ಗೆ ಹಗುರವಾಗಿ ಪರಿಗಣಿಸಬಾರದು ಎಂದ ಹೇಳಿದರು.
ಈಗಾಗಲೇ 5 ವರ್ಷದ ಹಿಂದೆಯೇ ಕೇಂದ್ರ ಸಿಬ್ಬಂದಿ ತರಬೇತಿ ಇಲಾಖೆ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ ಮುಂತಾದ ಸೇವಾ ಅಧಿಕಾರಿಗಳ ಕಾರ್ಯ ನಿರ್ವಹಣಾ ವರದಿಯನ್ನು ಆನ್ ಲೈನ್(ವಿದ್ಯುನ್ಮಾನ)ನಲ್ಲಿ ತುಂಬುವುದನ್ನು ಜಾರಿಗೆ ತಂದಿದ್ದು, ಯಶ ಕಂಡಿದೆ ಎಂದು ಹೇಳಿದರು.
ಆನ್‌ಲೈನ್‌ನಲ್ಲಿ ಕಾರ್ಯ ನಿರ್ವಹಣಾ ವರದಿ ತುಂಬುವಾಗ ಮೊದಲು ಆಯಾ ಅಧಿಕಾರಿ, ನೌಕರರು ಒಂದು ವರ್ಷದ ಅವಧಿಯಲ್ಲಿ ಗುರಿ, ಸಾಧನೆ ಮುಂತಾದವುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿ, ವರದಿ ಮಾಡುವ ಪ್ರಾಧಿಕಾರಕ್ಕೆ (ರಿಪೋರ್ಟಿಂಗ್ ಅಥಾರಿಟಿ) ಸಲ್ಲಿಸಬೇಕು. ನಂತರ ವರದಿ ಮಾಡುವ ಪ್ರಾಧಿಕಾರ (ಪುನರ್ ಅವಲೋಕನ ಮಾಡುವ ಪ್ರಾಧಿಕಾರಕ್ಕೆ( ರಿವ್ಯೂ ಅಥಾರಿಟಿ) ಸಲ್ಲಿಸಬೇಕು. ಅಂತಿಮವಾಗಿ ಅಂಗೀಕರಿಸುವ ಪ್ರಾಧಿಕಾರದ ಸಹಿ ಹಾಕಲಿದೆ ಎಂದು ಹೇಳಿದರು.
ಮೊದಲು ನಿಗದಿತ ಅವಧಿಯಲ್ಲಿ ಕಾರ್ಯ ನಿರ್ವಹಣಾ ವರದಿ ಸಲ್ಲಿಸದಿದ್ದಲ್ಲಿ ವಿಶೇಷ ವರದಿ ಸ್ಪೇಷಲ್ ರಿಪೋರ್ಟಿಂಗ್ ಸಲ್ಲಿಸುವ ವ್ಯವಸ್ಥೆ ಇತ್ತು. ಆದರೆ ಮುಂದಿನ ದಿನಗಳಲ್ಲಿ ವಿಳಂಬ ಮಾಡಲು ಬರುವುದಿಲ್ಲ. ಆನ್‌ಲೈನ್‌ನಲ್ಲಿ ಸ್ಪೆಷಲ್ ರಿಪೋರ್ಟಿಂಗ್‌ಗೆ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
ಅಧಿಕಾರಿಗಳಾಗಲೀ ಅಥವಾ ಪ್ರಾಧಿಕಾರಗಳಾಗಲೀ ಆನ್‌ಲೈನ್‌ನಲ್ಲಿ ನೀಡಿರುವ ಕೊನೆ ದಿನಾಂಕಕ್ಕಿಂತ ಮೊದಲೇ ವರದಿ ಸಲ್ಲಿಸಬೇಕು. ಯಾಕೆಂದರೆ ಕೊನೆ ಕ್ಷಣದಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡು ಸಮಸ್ಯೆಯಾಗಲಿದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ ಮಾತನಾಡಿ, ಪ್ರತಿಯೊಬ್ಬ ಅಧಿಕಾರಿ ತನ್ನ ಮೇಲಾಧಿಕಾರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾರ್ಯನಿರ್ವಹಣಾ ವರದಿ-2000 ಪ್ರಕಾರ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಕೆಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವರದಿ ಸಲ್ಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಎನ್‌ಐಸಿ ಕೇಂದ್ರದ ಅಧಿಕಾರಿ ಸುಧಿಧೀಂದ್ರ ಅವಧಾನಿ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ಇರುವ ಕಾರ್ಯನಿರ್ವಾಹಣಾ ವರದಿಯನ್ನು ಇನ್ಮುಂದೆ ಆನ್‌ಲೈನನಲ್ಲಿ ತುಂಬಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ ಎನ್‌ಐಸಿ ಇ-ಮೇಲ್ ಅಕೌಂಟ್ ಇರಬೇಕು.
ಯಾವ ಅಧಿಕಾರಿ ಕಾರ್ಯ ನಿರ್ವಹಣಾ ವರದಿ ತುಂಬಬೇಕೋ ಅವರು ಕಡ್ಡಾಯವಾಗಿ ಎನ್‌ಐಸಿ ಇ-ಮೇಲ್ ಅಕೌಂಟ್ ಹೊಂದಬೇಕು. ನಂತರ ಜಿಮೇಲ್ನಲ್ಲಿ ಲಾಗಿನ್ ಆಗಿ ವರದಿ ತುಂಬಬೇಕು ಎಂಬುದರ ಬಗ್ಗೆ ವಿವರಿಸಿದರು. ಒಂದು ಸಾರಿ ಸರ್ಕಾರಿ ಅಧಿಕಾರಿಗಳು, ಎನ್‌ಐಸಿ ಇ-ಮೇಲ್ ಅಕೌಂಟ್ ಪಡೆದರೆ ಮುಂದಿನ ದಿನಗಳಲ್ಲಿ ಬಹುಪಯೋಗಕ್ಕೆ ಬರಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುಧೀಂದ್ರ ಅವಧಾನಿ ಅವರು ಪಿಪಿಟಿ ಪ್ರದರ್ಶನದ ಮೂಲಕ ಆನ್‌ಲೈನ್ ಕಾರ್ಯನಿರ್ವಹಣಾ ವರದಿ ಹೇಗೆ ತುಂಬಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಅಂಬೋಜಿ ನಾಯ್‌ಕೋಡಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.