ಎಲ್ಲರಿಗೂ ಕಾನೂನಿನ ಅರಿವು ಅತ್ಯಗತ್ಯ: ಶಿವಕುಮಾರ್
Team Udayavani, Jul 17, 2019, 1:14 PM IST
ತಿಪಟೂರಿನ ನ್ಯಾಯಾಲಯ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಶಿವಕುಮಾರ್ ಚಾಲನೆ ನೀಡಿದರು.
ತಿಪಟೂರು: ಪ್ರತಿಯೊಬ್ಬ ಜನ ಸಾಮಾನ್ಯನಿಗೂ ಕಾನೂನಿನ ಅರಿವು ಅತ್ಯಗತ್ಯವಾಗಿದ್ದು, ದಿನನಿತ್ಯದ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕಾನೂನು ತಿಳಿದು ಕೊಳ್ಳುವುದು ಅವಶ್ಯಕ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಶಿವಕುಮಾರ್ ತಿಳಿಸಿದರು.
ನ್ಯಾಯಾಲಯ ಆವರಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ, ಪೊಲೀಸ್ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಎಲ್ಲರಿಗೂ ಕಾನೂನಿನ ಅರಿವು ಅತ್ಯಗತ್ಯ. ಜನಸಾಮಾನ್ಯರಿಗೆ ತಮ್ಮ ಕೆಲಸ ಯಾವ ಕಚೇರಿಯಲ್ಲಿ, ಯಾವ ಅಧಿಕಾರಿಗಳ ಬಳಿ ಕೆಲಸ ಮಾಡಿಸಿಕೊಳ್ಳ ಬೇಕು ಎಂಬ ಅರಿವು ಇಲ್ಲ. ಅದಕ್ಕಾಗಿ ನಮ್ಮ ಜೀವನಕ್ಕೆ ಅಗತ್ಯವಾದ ಕಾನೂನು ತಿಳಿದು ಕೊಳ್ಳಬೇಕಿದೆ. ದೇಶದಲ್ಲಿ ಸುಮಾರು 79 ಸಾವಿರ ಪ್ರಕರಣ ಹಾಗೂ ಜಿಲ್ಲೆಯಲ್ಲಿ 1700 ಪ್ರಕರಣ ಕಳೆದ ವಾರ ಇತ್ಯರ್ಥ ಮಾಡಲಾಗಿದೆ. ನ್ಯಾಯಾ ಲಯದ ಹಂತಕ್ಕೆ ಬರುವವರೆಗೆ ಪ್ರಕರಣ ಬಿಡಬೇಡಿ. ಸಾಧ್ಯವಾದಷ್ಟು ರಾಜಿ ಸಂಧಾನಗಳ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪರವಾನಗಿ ಇಲ್ಲದೇ ವಾಹನ ಓಡಿಸುವುದು ತಪ್ಪು. ವಾಹನ ಮಾರಾಟ ಮಾಡುವವರು ತಮ್ಮ ಹೆಸರಿನಿಂದ ವರ್ಗಾವಣೆ ಮಾಡಿಸುವುದು ಕಡ್ಡಾಯ ವಾಗಿದ್ದು, ಕಾನೂನು ಪ್ರಕಾರ ಮಾಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ವಾಹನ ಪರವಾನಗಿ ಕಡ್ಡಾಯವಾಗಿ ಮಾಡಿಸಿಕೊಂಡರೆ ಹೆದರುವ ಅವಶ್ಯಕತೆ ಇಲ್ಲ. ಕಾನೂನಿಗೆ ಹೆದರಿ ಓಡುವುದರಿಂದ ಅನಾಹುತಗಳು ಹೆಚ್ಚಾಗುತ್ತವೆ. ಎಂದರು.
ಉಪನ್ಯಾಸ ನೀಡಿದ ವಕೀಲ ಕೆ.ಆರ್. ದಯಾನಂದ್ ಮಾತನಾಡಿ, ಗೂಡ್ಸ್ ವಾಹನಗಳಲ್ಲಿ ಜನರು ಪ್ರಯಾಣಿಸ ಬಾರದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಟಿ.ಸತೀಶ್, ಅಧಿಕ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್, ವಕೀಲರ ಸಂಘದ ಕಾರ್ಯ ದರ್ಶಿ ನಟರಾಜು, ಕಾರ್ಯನಿರ್ವಹಣಾ ಧಿಕಾರಿ ಸುನೀಲ್ಕುಮಾರ್, ಸಿಡಿಪಿಒ ಓಂಕಾರಪ್ಪ, ಬಿಇಒ ಮಂಗಳಗೌರಮ್ಮ, ಡಿವೈಎಸ್‌ಪಿ ಕಲ್ಯಾಣ್ ಕುಮಾರ್, ಆರಕ್ಷಕ ನಿರೀಕ್ಷಕ ನವೀನ್‌ಕುಮಾರ್, ವೃತ್ತ ನಿರೀಕ್ಷಕ ಕೃಷ್ಣರಾಜು, ವಕೀಲೆ ಶೋಭಾದೇವಿ, ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕಿ ಪಿ.ರೇಖಾ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.