ಜಿರಾಫೆ ಜೊತೆ ಊಟ ಮಾಡ್ತೀರಾ?


Team Udayavani, Jul 18, 2019, 5:00 AM IST

u-5

ಪ್ರಾಣಿಗಳ ಜೊತೆ ಆಹಾರ ಸ್ವೀಕರಿಸುವ ವ್ಯವಸ್ಥೆಯಿರುವ ಹೋಟೆಲ್‌ ಬೇರೆಲ್ಲೂ ಇಲ್ಲ. ಆದರೆ ಈ ಹೋಟೆಲ್‌ನಲ್ಲಿ ಜಿರಾಫೆಯೊಂದಿಗೆ ಆಟವಾಡಿ, ಅದರ ಜೊತೆ ಆಹಾರ ಸ್ವೀಕರಿಸುವ ಅವಕಾಶ ಒದಗಿಸಲಾಗಿದೆ. ಈ ಹೋಟೆಲ್‌ನ ಹೆಸರು “ಜಿರಾಫೆ ಮ್ಯಾನರ್‌’!

ಕೀನ್ಯಾದ ನೈರೋಬಿಯ ಲ್ಯಾಂಗ್‌ಟಾ ಉಪನಗರದಲ್ಲಿರುವ ಜಿರಾಫೆ ಮ್ಯಾನರ್‌ ಹೋಟೆಲ್‌ನಲ್ಲಿ ಗ್ರಾಹಕರು ಜಿರಾಫೆಯ ಜೊತೆ ಭೋಜನ ಸವಿಯಬಹುದು. ಒಂದು ಶರತ್ತು ಏನೆಂದರೆ ಇಲ್ಲಿ ಊಟ ಮಾಡಲು, ತಂಗಲು ಒಂದು ವರ್ಷ ಮೊದಲೇ ಕಾಯ್ದಿರಿಸಬೇಕು. ಅಷ್ಟು ಬೇಡಿಕೆ ಈ ಹೋಟೆಲ್‌ಗೆ. ಬೇರೆ ಬೇರೆ ದೇಶಗಳಿಂದ ಜಿರಾಫೆಗಳ ಜೊತೆಗೆ ಉಪಾಹಾರ ಸ್ವೀಕರಿಸಲು ಪ್ರವಾಸಿಗರು ಸಾಲುಸಾಲಾಗಿ ಬರುತ್ತಿದ್ದರೂ ಇಲ್ಲಿ ಇರುವುದು ಕೇವಲ ಹನ್ನೆರಡು ಕೊಠಡಿಗಳು ಮಾತ್ರ.

ಇದು ಹೊಸತೇನಲ್ಲ
1930ರ ದಶಕದಲ್ಲಿ ಇಲ್ಲಿ ಹನ್ನೆರಡು ಎಕರೆ ಜಾಗ ಖರೀದಿ ಮಾಡಿ ಹೋಟೆಲ್‌ ನಿರ್ಮಿಸಿದರೂ ಅಷ್ಟೊಂದು ವ್ಯಾಪಾರ ಇರಲಿಲ್ಲ. 1960ರ ಬಳಿಕ ಹಲವು ಮಂದಿಗೆ ಅದು ಮಾರಾಟವಾದರೂ ಯಾರೂ ಲಾಭ ಮಾಡಿಕೊಳ್ಳಲಿಲ್ಲ. 1974ರಲ್ಲಿ ಜಾಕ್‌ ಲೆಸ್ಲಿ ಮೆಲ್ವಿಲೆ ಎಂಬವನು ತನ್ನ ಅಮೆರಿಕನ್‌ ಪತ್ನಿ ಜೆಟ್ಟಿಯ ಜೊತೆಗೂಡಿ ಹೋಟೆಲನ್ನು ಖರೀದಿಸಿದ. ವ್ಯಾಪಾರದಲ್ಲಿ ಲಾಭವಾಗಬೇಕಿದ್ದರೆ ಏನಾದರೂ ಹೊಸತು ಮಾಡಬೇಕೆಂಬ ಯೋಚನೆಯಿಂದ ಎರಡು ರೋಥ್‌ ಚೈಲ್ಡ್‌ ತಳಿಯ ಜಿರಾಫೆ ಮರಿಗಳನ್ನು ತಂದ. ಅಳಿವಿನಂಚಿನಲ್ಲಿರುವ ಅಪರೂಪದ ತಳಿಯಾದ್ದರಿಂದ ಅದನ್ನು ನೋಡಲು ಜನರು ಬರತೊಡಗಿದರು. ಈಗ ಹೋಟೆಲಿನ ಜಿರಾಫೆ ಸಂಸಾರ ಹತ್ತರ ಸಂಖ್ಯೆ ತಲುಪಿದೆ.

ಸನಿಹದಲ್ಲೇ ಅಭಯಾರಣ್ಯ
ಈಗ ವನ್ಯಜೀವಿ ಸಂರಕ್ಷಣೆಯ ಇಲಾಖೆ ಈ ಜಿರಾಫೆ ಹೋಟೆಲಿನ ಬಳಿ 140 ಎಕರೆ ಅರಣ್ಯ ಬೆಳೆಸಿ ವಿವಿಧ ಪ್ರಾಣಿ, ಪಕ್ಷಿಗಳಿರುವ ಅಭಯಾರಣ್ಯವನ್ನು ರೂಪಿಸಿದೆ. ಹೋಟೆಲ್‌ನಲ್ಲಿ ಒಂದು ದಿನ ಮಾತ್ರ ತಂಗಲು ಅವಕಾಶವಿರುವ ಕಾರಣ ಜಿರಾಫೆಗಳೊಂದಿಗೆ ಇನ್ನಷ್ಟು ಕಾಲ ಇರಬೇಕೆಂದು ಬಯಸುವವರು ಮತ್ತೆ ಮತ್ತೆ ಅಲ್ಲಿಗೆ ಬರುತ್ತಲೇ ಇರುತ್ತಾರೆ. ಜಿರಾಫೆಗಳ ಜೀವನಕ್ರಮವನ್ನು ಅಧ್ಯಯನ ಮಾಡುವವರು ಕೂಡ ಬರುತ್ತಾರೆ.

ಜಿರಾಫೆಗಳ ಮೋಜಿನ ಆಟ
ಇಲ್ಲಿನ ಜಿರಾಫೆಗಳು ಮನುಷ್ಯನನ್ನು ತುಂಬ ಪ್ರೀತಿಸುತ್ತವೆ. ಕಿಟಕಿ, ಬಾಗಿಲುಗಳ ಒಳಗೆ ನೀಳವಾದ ಕೊರಳು ತೂರಿಸಿ ತಿಂಡಿಗಾಗಿ ನಾಲಗೆ ಚಾಚುತ್ತವೆ. ಪ್ರವಾಸಿ ಬಯಸಿದರೆ ಅವನ ತಟ್ಟೆಯಲ್ಲಿರುವ ಆಹಾರವನ್ನು ಜೊತೆಗೆ ಹಂಚಿಕೊಳ್ಳಬಹುದು ಅಥವಾ ಅವುಗಳಿಗಾಗಿ ತಯಾರಿಸಿದ ಹುಲ್ಲಿನ ಉಂಡೆಗಳನ್ನು ಖರೀದಿ ಮಾಡಿ ತಿನ್ನಲು ಕೊಡಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನ ಜಿರಾಫೆಗಳು ಹೋಟೆಲಿನ ಊಟದ ಕೋಣೆಯ ಕಿಟಕಿಯ ಬಳಿ ತಪ್ಪದೆ ಹಾಜರಾಗಿ, ಅತಿಥಿಗಳು ಕೊಡುವ ಸತ್ಕಾರವನ್ನು ಸ್ವೀಕರಿಸುತ್ತವೆ. ಮಾಲೀಕ ಸನ್ನೆ ಮಾಡಿದರೆ ಮುತ್ತನ್ನೂ ಕೊಡುತ್ತವೆ ಇವು.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

suicide (2)

Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.