ಸರಕಾರಿ ಶಾಲಾ ಗೋಡೆಯಲ್ಲಿ ಸಂಚಾರ ಜಾಗೃತಿ ಪೋಸ್ಟರ್
Team Udayavani, Jul 18, 2019, 5:24 AM IST
ತೆಕ್ಕಟ್ಟೆ: ಧಾವಂತದ ಬದುಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪಘಾತದಲ್ಲಿ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತಿದೆ. ರಸ್ತೆ ಸುರಕ್ಷೆಯ ದೃಷ್ಟಿಯಿಂದ ಸಂಚಾರಿ ನಿಯಮಗಳನ್ನು ಕೂಡಾ ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಸುಪ್ರೀಂಕೋರ್ಟ್ ಆದೇಶದನ್ವಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ರಾ.ಹೆ. 66ರ ಸಮೀಪ ಹಾಗೂ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಿಂದ ಶಾಲಾ ಗೋಡೆಗಳ ಮೇಲೆ ಸಂಚಾರಿ ಜಾಗೃತಿ ಪೋಸ್ಟರ್‌ಗಳ ಬಣ್ಣದ ಚಿತ್ತಾರಗಳನ್ನು ಚಿತ್ರಕಲಾ ಶಿಕ್ಷಕರ ತಂಡ ತಾಲೂಕಿನಾದ್ಯಂತ ಅನಾವರಣಗೊಳಿಸುತ್ತಿದ್ದಾರೆ.
ಅಮಾಯಕರು ಬಲಿಯಾಗದಿರಲಿ
ಜನರು ಸಂಚಾರಿ ನಿಯಮಗಳನ್ನು ಪಾಲಿಸದಿರುವುದೇ ಅಪಘಾತಗಳಿಗೆ ಮುಖ್ಯ ಕಾರಣ. ವಾಹನದಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಪರಿಣಾಮವಾಗಿ ಇಂದು ಅದೆಷ್ಟೋ ಅಮಾಯಕರು ತಮ್ಮದಲ್ಲದ ತಪ್ಪಿಗೆ ದಾರುಣವಾಗಿ ಬಲಿಯಾಗುತ್ತಿರುವುದು ಆಘಾತಕಾರಿ ವಿಷಯ. ಇಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಿಂದ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ, ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರಕಾರ ಹಾಗೂ ಸಾರಿಗೆ ಇಲಾಖೆಗಳು ಪರಿಹಾರ ಹುಡುಕುವ ನಿಟ್ಟಿನಿಂದ ಶಿಕ್ಷಣ ಇಲಾಖೆಯ ಜತೆ ಕೈಜೋಡಿಸಿದೆ.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ರಸ್ತೆ ನಿಯಮ ಗಳು ಹಾಗೂ ಅದರ ಮಹತ್ವದ ಬಗೆಗೆ ಅರಿವು ಮೂಡಿಸುವ ನಿಟ್ಟಿನಿಂದ ಉಡುಪಿ ಜಿಲ್ಲೆಯ ಶಿಕ್ಷಕರ ತಂಡ ತಮ್ಮ ಕಲಾ ಕುಂಚದ ಮೂಲಕ ಆಕರ್ಷಕ ಚಿತ್ತಾರವನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ.
ಈಗಾಗಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು, ಕೆದೂರು, ತೆಕ್ಕಟ್ಟೆ, ಕುಂಭಾಸಿ, ವಕ್ವಾಡಿ, ನೂಜಿ, ಸಿದ್ದಾಪುರ, ಶಂಕರನಾರಾಯಣ ಸುತ್ತಮುತ್ತಲಿನ ಸರಕಾರಿ ಶಾಲೆಯ ಗೋಡೆಗಳ ಮೇಲೆ ತಾಲೂಕಿನ ಸರಕಾರಿ ಶಾಲಾ ಚಿತ್ರಕಲಾ ಶಿಕ್ಷಕರ ತಂಡವೊಂದು ರಸ್ತೆ ನಿಯಮಗಳು ಮಕ್ಕಳ ಮನಸ್ಸಿಗೆ ಇಳಿಯುವಂತೆ ಮಾಡುವ ವಿನೂತನ ಪ್ರಯತ್ನ ನಡೆಸುವಲ್ಲಿ ಕಾರ್ಯನಿರತರಾಗಿದ್ದಾರೆ.
ನಿಯಮ ಪಾಲಿಸಿ
ಅರಿವು ಕಾರ್ಯ
ಉತ್ತಮ ಪ್ರತಿಕ್ರಿಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.