ಮುಂದಿದೆ “ರಾಹುಕಾಲ ಗುಳಿಗ ಕಾಲ’
Team Udayavani, Jul 18, 2019, 5:00 AM IST
ಮನೋಜ್ ಕುಮಾರ್ ಪ್ರಸ್ತುತಿಯ ಸೂರಜ್ ಬೋಳಾರ್, ಪ್ರೀತಂ ನಿರ್ಮಾಣದ ‘ರಾಹು ಕಾಲ ಗುಳಿಗ ಕಾಲ’ ಶೂಟಿಂಗ್/ ಡಬ್ಬಿಂಗ್ ಎಲ್ಲಾ ಪೂರ್ಣಗೊಳಿಸಿ ಈಗ ರೆಡಿಯಾಗಿದೆ. ಮಣಿಕಾಂತ್ ಕದ್ರಿ ಸಂಗೀತದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಸ್ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್.ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನದಲ್ಲಿ ತೊಡಗಿಸಿದ್ದಾರೆ. ಈಗಾಗಲೇ ‘ಪತ್ತೀಸ್ ಗ್ಯಾಂಗ್’ ಎಂಬ ಸಿನೆಮಾ ಮಾಡಿದ ಚಿತ್ರತಂಡ ಎರಡನೇ ಸಿನೆಮಾ ವಾಗಿ ರಾಹು ಕಾಲವನ್ನು ಸಿದ್ಧಪಡಿಸಿದೆ. ಪತ್ತೀಸ್ ಗ್ಯಾಂಗ್ ಶೂಟಿಂಗ್ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್ ಕೂಡ ಮಾಡಲಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನೆಮಾದಲ್ಲಿ, ಶೂಟಿಂಗ್ ವೇಳೆಯಲ್ಲಿ ಒರಿಜಿನಲ್ ಗನ್ ಹಿಡಿದು ಕೊಳ್ಳಲಾಗಿದೆ. ಕೋಸ್ಟಲ್ವುಡ್ನಲ್ಲಿ ಇದೊಂದು ಮೊದಲ ಪ್ರಯತ್ನ. ಡಮ್ಮಿ ಬುಲೆಟ್ ಅಳವಡಿಸಿ ಕೊಂಡು ಶೂಟಿಂಗ್ ನಡೆಸಲಾಗಿದೆ. ಸಿನೆಮಾದಲ್ಲಿ ಒಂದು ಹಾಡಿದೆ. ಒಬ್ಬ ವ್ಯಕ್ತಿಗೆ ಒಂದು ಟೈಮ್ ಎದುರಾದರೆ ಆತನ ಕಥೆಯೇ ಬೇರೆ ಆಗುತ್ತದೆ. ಕೆಲವೊಂದು ಸಮಯ ಕೆಲವರ ಜೀವನವೇ ಏನೇನೋ ಆಗಿಬಿಡುತ್ತದೆ. ಅಂತಹ ಕಾಲದಲ್ಲಿ ಸಮಯವಲ್ಲದ ಜಾಗದಲ್ಲಿ ಯಾರ್ಯಾರೋ ಬಂದು ಮತ್ತೇನೋ ಆಗಿ ಬಿಡುವ ಸಾಧ್ಯತೆ ಇದೆ. ಯಾರು ಹೇಗೆ?ಏನು? ಎಂದು ಯೋಚಿಸುವ ಕಾಲಕ್ಕೆ ಇನ್ನೇನೋ ಆಗುವ ಸಾಧ್ಯತೆಯೂ ಇದೆ. ಬಹುತೇಕ ಜನರ ಜೀವನದಲ್ಲಿ ಇವೆಲ್ಲ ನಡೆದಿರುವ ಲಕ್ಷಣವೂ ಇದೆ. ಹೀಗೆ ಕಾಲವಲ್ಲದ ಕಾಲದಲ್ಲಿ ಎದುರಾಗುವ ಒಂದೊಂದು ಸನ್ನಿವೇಶವನ್ನು ರಾಹುಕಾಲ-ಗುಳಿಗ ಕಾಲದಲ್ಲಿ ಬಿಂಬಿಸುವ ವಿನೂತನ ಪ್ರಯತ್ನ ನಡೆದಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.
••ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.