ಅಧಿಕ ಸಿಸಿ ಬೈಕ್‌ಗಳತ್ತ ಯುವ ಜನರ ಚಿತ್ತ
Team Udayavani, Jul 18, 2019, 5:46 AM IST
ಮಣಿಪಾಲ: ಹೊಸ ಟ್ರೆಂಡ್‌ಗಳು ರೂಪುಗೊಳ್ಳುತ್ತಾ ಹೋದಂತೆ ಯುವಜನತೆ ಅದಕ್ಕೆ ಬೇಗನೇ ಸ್ಪಂದಿಸುತ್ತಾರೆ. ಈ ಬದಲಾವಣೆ ಪರ್ವ ಇದೀಗ ವಾಹನಗಳ ಮೇಲೂ ನೆಟ್ಟಿದೆ. ವಿಶೇಷ ಎಂದರೆ ಉದ್ಯಮಗಳು ಯುವಜನರನ್ನು ಆಕರ್ಷಿಸಲೆಂದೇ ಇಂತಹ ಯೋಜನೆಗಳನ್ನು ರಚಿಸುತ್ತಿವೆ ಎಂಬುದು ಇನ್ನೊಂದು ಭಾಗ.
ಮಾರುಕಟ್ಟೆಯಲ್ಲಿ ಏನೇನಾಯಿತು?
2014 ಮತ್ತು 2019ರ ಮಧ್ಯೆ 75ರಿಂದ 125 ಸಿಸಿ ಬೈಕ್‌ಗಳ ವ್ಯಾಪಾರದಲ್ಲಿ 8 ಶೇ. ಕುಸಿತ ಕಂಡಿದೆ. ಆರಂಭದಲ್ಲಿ 84 ಶೇ. ದಷ್ಟು ಇದ್ದ ಅಂಶ 78ಕ್ಕೆ ಕುಸಿದಿದೆ. 2012-13ರಲ್ಲಿ ಈ ಮಾದರಿಗಳ 10 ಮಿಲಿಯನ್ ದ್ವಿ ಚಕ್ರ ವಾಹನಗಳಲ್ಲಿ 84 ಶೇ. ಮಾರಾಟವಾಗಿದ್ದವು. 2013-14ರಲ್ಲಿ ಇದು 10.5 ಮಿಲಿಯನ್ ವಾಹನಗಳಲ್ಲಿ 83.7 ಶೇ. ವಾಹನಗಳು ಮಾತ್ರ ಮಾರಾಟಗೊಂಡಿದ್ದವು.
ಆಗಿದ್ದೇನು?
ಯುವ ಜನತೆ ಸಂಖ್ಯೆ ಹೆಚ್ಚಾಗಿದ್ದು ಮತ್ತು ಟ್ರೆಂಡ್‌ಗಳು ನಿರ್ಮಾಣವಾಗಿದ್ದು ಕಾರಣ. ಹೊಸ ಫ್ಯಾಷನ್‌ಗಳ ಅರಿವು ಬೇಗನೆ ಆಗುತ್ತದೆ. ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಕಂಡುಬರುವ ದ್ವಿಚಕ್ರ ವಾಹನಗಳ ಕ್ರೇಜ್ ದ್ವಿಚಕ್ರ ವಾಹನ ತಯಾಕರನ್ನು ಪ್ರರೇಪಿಸಿದೆ. ಕಂಪೆನಿಗಳು ಅಧಿಕ ಸಾಮರ್ಥ್ಯದ ಬೈಕುಗಳನ್ನು ಮಾರುಕಟ್ಟೆಗೆ ಇಳಿಸಿವೆ.
ಎಷ್ಟು ಏರಿಕೆ ?
2012-13ರ ಆರ್ಥಿಕ ವರ್ಷದಲ್ಲಿ ಮಾರಾಟಗೊಂಡ ವಾಹನಗಳಲ್ಲಿ 125ಸಿಸಿ ಯಿಂದ 250ಸಿಸಿ ಮಾದರಿ ವಾಹನಗಳು ಶೇ. 15ರಷ್ಟು ಇದ್ದವು. 2013-14ರಲ್ಲಿ ಶೇ. 14.3ರಷ್ಟಿತ್ತು. ಆದರೆ 2018-19ರಲ್ಲಿ ಶೇ. 17.6ಕ್ಕೆ ಕ್ಷೀಪ್ರ ಏರಿಕೆ ಕಂಡಿದೆ.
ಇನ್ನು ಎಲೆಕ್ಟ್ರಿಕ್ ಯುಗ/ ಪರ್ಯಾಯ ಇಂಧನ!
ಕೇಂದ್ರ ಸರಕಾರ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಮನಸ್ಸು ಮಾಡುತ್ತಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದ್ದು, ಕೆಲವು ಕಂಪೆನಿಗಳು ಈಗಾಗಲೇ ಈ ಕಾರ್ಯ ಆರಂಭಿಸಿವೆ. ಇನ್ನು ಟಿವಿಎಸ್ ಸಂಸ್ಥೆ ಇಥೆನಾಲ್ ಇಂಧನದಿಂದ ಕೆಲಸ ಮಾಡುವ ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.
ಮೂಲ ಸೌಕರ್ಯ ವೃದ್ಧಿ
ಭಾರತದ ರಸ್ತೆಗಳು ಸುಧಾರಿಸಿವೆ. ಆಧುನಿಕ ವಾಹನಗಳ ಮೇಲೆ ಸವಾರಿ ಆರಾಮದಾಯಕ. ವಾಹನಗಳ ಸಾಮರ್ಥ್ಯ ಹೆಚ್ಚುತ್ತಾ ಹೋದಂತೆ ದರ ಲಕ್ಷವನ್ನು ದಾಟುತ್ತದೆ.
ಇತರ ಕಾರಣ ಏನು?
ಅಧಿಕ ಸಿಸಿ ವಾಹನಗಳು ಶಕ್ತಿ ಉತ್ಪಾದನೆಗೆ ಹೆಚ್ಚು ಇಂಧನವನ್ನು ದಹಿಸುತ್ತವೆ. 150ಸಿಸಿ ಅಧಿಕ ಸಾಮರ್ಥ್ಯದ ಬೈಕ್‌ಗಳ ಮೈಲೇಜ್ 13ರಿಂದ 55ರ ಒಳಗೆ ಇರುತ್ತದೆ. 500 ಸಿಸಿ ಮೇಲಿನ ವಾಹನಗಳು 25-30 ಮೈಲೇಜ್ ನೀಡುತ್ತವೆ. 75-125 ಸಿಸಿ ವಾಹನಗಳು 60-80 ಕಿ.ಮೀ. ಮೈಲೇಜ್ ನೀಡುತ್ತಿದ್ದವು. ಆದರೂ ಗ್ರಾಹಕರು ಅಧುನಿಕ ಬೈಕ್‌ಗಳ ಮೇಲೆ ಸವಾರಿಗೆ ಮುಂದಾಗುತ್ತಾರೆ. ಪ್ರಯಾಣ ಥ್ರಿಲ್ ಆಗಿರುತ್ತದೆ ಎಂಬುದು ಕಾರಣ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಬೇಡಿಕೆ
75-125 ಸಿಸಿ ಬೈಕ್‌ಗಳ ಬೇಡಿಕೆ ಇಳಿಮುಖ
ಉದಯವಾಣಿ ಸ್ಪೆಷಲ್ ಡೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.